ಬಳ್ಳಾರಿ

ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು

ಬಳ್ಳಾರಿ: ನಗರದ ವಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ಡಾ.ಬಿ.ಸಿ.ರಾಯ್ ಉಪನ್ಯಾಸ ಕೊಠಡಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಪ್ಯಾರಾ ಮೆಡಿಕಲ್ ಕೋರ್ಸಿನ ಪ್ರವೇಶಾತಿ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಟೋಕನ್ ವಿಚಾರವಾಗಿ ನೂಕು ನುಗ್ಗಲು ಉಂಟಾಯಿತು. ಕೊನೆಗೂ ಗೃಹ ರಕ್ಷಕ ಸಿಬ್ಬಂದಿಗಳು ನೂಕು ನುಗ್ಗಲು ಗದ್ದಲವನ್ನು ತಾತ್ಕಾಲಿಕವಾಗಿ ಶಮನಗೊಳಿಸಿದರು. ಮೂಲ ದಾಖಲೆಗಳ ಪರಿಶಿಲನೆಯ ಪೂರ್ವ ವ್ಯವಸ್ಥೆಯನ್ನು ಕಲ್ಪಿಸಿದ ಅಧಿಕಾರಿಗಳ ಕುರಿತು …

ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು Read More »

ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ : ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಉಚಿತ ಬಸ್ ಪಾಸ್ ಗಾಗಿ ಆಗ್ರಹಿಸಿ ವಿವಿಧ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಸೇರಿ ರಾಯಲ್ ಸರ್ಕಲ್, ದುರ್ಗಮ್ಮ ಗುಡಿ, S P ಸರ್ಕಲ್ ಮುಖಾಂತರ ಪ್ರತಿಭಟನಾ ಮೆರವಣಿಗೆಯು KSRTC ಡಿಪೋ ಮುಂದೆ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ AIDSO ಜಿಲ್ಲಾ ಉಪದ್ಯಕ್ಷರಾದ ಜೆ. ಸೌಮ್ಯ ಅವರು ಮಾತನಾಡುತ್ತಾ ನಿಮಗೆ ತಿಳಿದಿರುವಂತೆ ಹಿಂದಿನ ವರ್ಷದ ವಿದ್ಯಾರ್ಥಿ ಬಸ್ ಪಾಸ್‌ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ ಇನ್ನು ಕೆಲವು …

ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ Read More »

ಪ್ರಥಮ ಬಹುಮಾನ ಪಡೆದ ಯಂಕಪ್ಪರ ಜೋಡೆತ್ತು

ರಾಜಬೀದಿಯಲ್ಲಿ 101 ಎತ್ತಿನ ಜೋಡಿಗಳ ಭವ್ಯ ಮೆರವಣಿಗೆ ವಿಜಯನಗರ(ಹೊಸಪೇಟೆ): ಜಾನಪದ ಕಲೆಗಳಾದ ಡೊಳ್ಳು ಕುಣಿತ, ಪೂಜೆ ಕುಣಿತ, ಪಟ ಕುಣಿತ, ಕಂಸಾಳೆ, ಹಗಲುವೇಶದಾರಿಗಳ ವಿಭಿನ್ನ ವೇಷಗಳು ಹಾಗೂ ಕಹಳೆ ನಾದಗಳ ಸಾಕ್ಷಿಯಾಗಿ 101 ಜೋಡಿಗಳ ಎತ್ತಿನ ಬಂಡಿಯ ಮೆರವಣಿಗೆ ಹೊಸಪೇಟೆ ನಗರದ ರಾಜಬೀದಿಯಲ್ಲಿ ಸಂಭ್ರಮ ಸಡಗರದಿಂದ ಉತ್ಸವದಂತೆ ನೆರವೇರಿತು. ವಿಜಯನಗರ ಉತ್ಸವ ಹಾಗೂ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹೊಸಪೇಟೆ ನಗರದಲ್ಲಿ ಏರ್ಪಡಿಸಿದ್ದ ಎತ್ತಿನ ಬಂಡಿಯ ಮೆರವಣಿಗೆ ನೋಡುಗರ ಕಣ್ಮನ ತಣಿಸಿತು. ಬಾಳೆ ದಿಂಡುಗಳು, ಕಣ್ಣು ಕುಕ್ಕುವ ಲೈಟಿಂಗ್‍ನಿಂದ …

ಪ್ರಥಮ ಬಹುಮಾನ ಪಡೆದ ಯಂಕಪ್ಪರ ಜೋಡೆತ್ತು Read More »

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ

ವಿಜಯನಗರ(ಹೊಸಪೇಟೆ):  ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಐತಿಹಾಸಿಕ ನಗರಿಯ ಗತ ವೈಭವದ ಸ್ಮರಣೆಯೊಂದಿಗೆ ಸಮಾರೋಪ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮಾತನಾಡಿ ರಾಜಕೀಯ ಅಧಿಕಾರ,ಸಂಪತ್ತು ಶಾಶ್ವತವಲ್ಲ.ಇದೇ ಮೈದಾನದಲ್ಲಿ ಇಂತಹದ್ದೇ ಕಾರ್ಯಕ್ರಮವೊಂದರಲ್ಲಿ ಜನರಿಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಜಿಲ್ಲಾ ರಚನೆಯನ್ನು ಇಂದು ಸಾಕಾರಗೊಳಿಸಿದ್ದೇನೆ.ಜನರು ನೀಡಿದ ಬಲವೇ …

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ Read More »

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 3ಸಾವಿರ ವಿಶೇಷ ಅನುದಾನ‌ ನೀಡಿಕೆಗೆ ಬದ್ಧ:ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ

ಬಳ್ಳಾರಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ 1500 ಕೋಟಿ ರೂ.ಖರ್ಚನ್ನು ನಿಗದಿಪಡಿಸಿದ ಅವಧಿಯೊಳಗೆ ಸಮರ್ಪಕ ಖರ್ಚು ಮಾಡಿದಲ್ಲಿ 3 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ಇದೇ ವರ್ಷದಿಂದ ಒದಗಿಸುವುದಕ್ಕೆ ನಮ್ಮ ಸರಕಾರ ‌ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನಮ್ಮ ಸರಕಾರ ನೀಡುತ್ತಿದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಆರ್.ವೈ.ಎಂ.ಇ.ಸಿ ಕಾಲೇಜು ಆವರಣದಲ್ಲಿರುವ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ,ವಿವಿ ಸಂಘದ‌ ಕಿಂಡರ್ ಗಾರ್ಡನ್ ನೂತನ ಕಟ್ಟಡಗಳನ್ನು …

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 3ಸಾವಿರ ವಿಶೇಷ ಅನುದಾನ‌ ನೀಡಿಕೆಗೆ ಬದ್ಧ:ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ Read More »

ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು

ಬಳ್ಳಾರಿ : ಬಳ್ಳಾರಿಯಲ್ಲಿ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ಹಾಗೂ ವಿವಿ ಸಂಘದ ಕಿಂಡರ್ ಗಾರ್ಡನ್ ಸ್ಕೂಲ್ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಸ್.ಕೆ.ಮೋದಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ,ಬಿ.ಶ್ರೀರಾಮುಲು,ಸಿ.ಸಿ.ಪಾಟೀಲ್,ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ‌ ಸೋಮಶೇಖರ್ ರೆಡ್ಡಿ,ನಾಗೇಂದ್ರ,ಸೋಮಲಿಂಗಪ್ಪ,ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಶಶೀಲ್‌ ನಮೋಶಿ,ಈ.ತುಕಾರಾಂ,ಬುಡಾ ಅಧ್ಯಕ್ಷ ಪಾಲನ್ನ,ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ತಿಪ್ಪಣ್ಣ ಹಾಗೂ ಜನಪ್ರತಿನಿಧಿಗಳು ಹಾಗೂ ವಿವಿ ಸಂಘದ ಪದಾಧಿಕಾರಿಗಳು ಇದ್ದರು.

ಆರೋಗ್ಯ ನಂದನ ಅಡಿಯಲ್ಲಿ ಉಚಿತ ಚಿಕಿತ್ಸೆ

ಬಳ್ಳಾರಿ : ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಮಗು ಹುಟ್ಟಿದ ಮೂರು ವರ್ಷಗಳ ಕಾಲ ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳ ತಜ್ಞರಿಂದ ಪರೀಕ್ಷೆ ಮಾಡಿಸಿ ಎಂದು ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯಲ್ಲಿ ಆರೋಗ್ಯ ನಂದನ ಅಭಿಯಾನದಡಿಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಆವರಣದ ಮಕ್ಕಳ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ …

ಆರೋಗ್ಯ ನಂದನ ಅಡಿಯಲ್ಲಿ ಉಚಿತ ಚಿಕಿತ್ಸೆ Read More »

Translate »
Scroll to Top