ಬೆಂಗಳೂರು

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರಿ ಆಫ್ ಇಂಡಿಯಾದಿಂದ ಐಸಿಎಸ್ಐ ಬೆಂಗಳೂರು ಚಾಪ್ಟರ್ ಗೆ ಅತ್ಯುತ್ತಮ ಪ್ರಶಸ್ತಿ

ಬೆಂಗಳೂರು; ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರಿ ಆಫ್ ಇಂಡಿಯಾ ಕೊಡಮಾಡುವ ಅತ್ಯುತ್ತಮ ಪ್ರಶಸ್ತಿಗೆ ಐಸಿಎಸ್ಐ ಬೆಂಗಳೂರು ಚಾಪ್ಟರ್ ಭಾಜನವಾಗಿದೆ. ಐಸಿಎಸ್ಐ ಬೆಂಗಳೂರು ಚಾಪ್ಟರ್ ಮಾಡಿರುವ ಗಣನೀಯ ಸಾಧನೆಗೆ ಈ ಪುರಸ್ಕಾರ ಲಭಿಸಿದೆ.
ಮುಂಬೈನಲ್ಲಿ ನಡೆದ 52ನೇ ಐಸಿಎಸ್ಐ ರಾಷ್ಟ್ರೀಯ ಸಮ್ಮೇಳನದಲ್ಲಿ 2023 ನೇ ಸಾಲಿನ ಅಧ್ಯಕ್ಷರಾದ ಸಿಎಸ್ ಪರಮೇಶ್ವರ್ ಜಿ ಭಟ್, ಐಸಿಎಸ್ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ಸಿಎಸ್ ವೆಂಕಟ ಸುಬ್ಬರಾವ್ ಕಲ್ವಾ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ನೂರ್ ಸುಮಯ್ಯ ಅವರು ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಧ್ಯಕ್ಷರಾದ ಮಾಧಬಿ ಪುರಿ ಬುಚ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಬಸವಣ್ಣ ಅವರ ವಿಚಾರ, ತತ್ವ ಆದರ್ಶಗಳನ್ನು ಪಾಲಿಸುವ ಪ್ರಯತ್ನವನ್ನು ಮಾಡುತ್ತಿರುವೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು: ಬಸವಣ್ಣ ಅವರ ವಿಚಾರ, ತತ್ವ ಆದರ್ಶಗಳನ್ನು ನೂರಕ್ಕೆ ನೂರು ಪಾಲನೆ ಮಾಡಲಾಗದಿದ್ದರೂ, ಪಾಲಿಸುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಚಿವ ಜಮೀರ್ ವಿರುದ್ದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಕುರಿತು  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರೋಕ್ಷ ಸುಳಿವು

ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಕರಿಯ ಎಂದು ಕರೆದು ವಿವಾದಕ್ಕೆ ಕಾರಣವಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರೋಕ್ಷ ಹೇಳಿಕೆ ನೀಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಜಮೀರ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಖುದ್ದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ.

ಏರ್ಪೋರ್ಟ್ ಮಾದರಿಯಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ  ರೈಲು ನಿಲ್ದಾಣ ಅಭಿವೃದ್ಧಿ : ಸಚಿವ ವಿ.ಸೋಮಣ್ಣ 

ಬೆಂಗಳೂರು: ಏರ್ಪೋರ್ಟ್ ಮಾದರಿಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ನ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಕ್ಯೂಎಸ್ – ಐ ಗೇಜ್ ಇನ್‌ಸ್ಟಿಟ್ಯೂಷನ್ ಆಫ್ ಹ್ಯಾಪಿನೆಸ್ ವರದಿ 2024” ಲೋಕಾರ್ಪಣೆ ಮಾಡಿದ ಗುರುದೇವ್ ರವಿಶಂಕರ್

ಬೆಂಗಳೂರು: ಶಿಕ್ಷಣವನ್ನು ಸಂತಸದಾಯಕಗೊಳಿಸುವ ನಿಟ್ಟಿನಲ ಕ್ಯೂಎಸ್ ಐ ಗೇಜ್ ಇನ್‌ಸ್ಟಿಟ್ಯೂಷನ್ ಆಫ್ ಹ್ಯಾಪಿನೆಸ್ ವರದಿ 2024″ ಅನ್ನು ಗುರುದೇವ್ ರವಿಶಂಕರ್ ಗುರೂಜಿ ಅನಾವರಣಗೊಳಿಸಿದರು.

ಸ್ವಿಸ್ ವಾಚ್ ಸಂಗ್ರಹವನ್ನು ಭಾರತಕ್ಕೆ ಪರಿಚಯಿಸಿದ ಬಿಝೊಟಿಕೊ: ರೋಮರ್ ಕಲೆಕ್ಷನ್ ನ ಹೊಸ ವಾಚ್ ಮೆಕ್ಯಾನೋ ಬಿಡುಗಡೆ

ಬೆಂಗಳೂರು: ಭಾರತದಲ್ಲಿನ ಐಷಾರಾಮಿ ವಾಚ್ ಗಳ ಪ್ರಮುಖ ವಿತರಕರಾಗಿರುವ ಬಿಝೊಟಿಕೊ ಗ್ರೂಪ್ ಪ್ರಸಿದ್ಧ ಸ್ವಿಸ್ ವಾಚ್ ತಯಾರಿಕಾ ಕಂಪನಿ ಆಗಿರುವ ರೋಮರ್ ನ ಸೊಗಸಾದ ವಾಚ್ ಸಂಗ್ರಹ ಮೆಕ್ಯಾನೋ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

ಅರೋಗ್ಯ ರಕ್ಷಣೆಯಲ್ಲಿ ಖಾಸಗಿ ವಲಯದ ಪಾತ್ರ ಅನನ್ಯ – ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು ; ಅರೋಗ್ಯ ರಕ್ಷಣೆಯಲ್ಲಿ ಖಾಸಗಿ ವಲಯದ ಪಾತ್ರ ಅನನ್ಯವಾಗಿದ್ದು, ಸರ್ವರಿಗೂ ಆರೋಗ್ಯ ಒದಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಸೋಲಿನ ಮುನ್ಸೂಚನೆ‌ ಸಿಕ್ಕಿರುವುದರಿಂದ ಸಿಎಂ‌ ಸಿದ್ದರಾಮಯ್ಯ ಹಸಿ ಸುಳ್ಳು‌ ಹೇಳುತ್ತಿದ್ದಾರೆ: ಶಾಸಕ ವಿ.ಸುನೀಲ್ ಕುಮಾರ್

ಬೆಂಗಳೂರು : ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಬರುವ ಮುನ್ನವೇ ಸೋಲಿನ ಮುನ್ಸೂಚನೆ ಸಿಕ್ಕಿದೆ. ಈ ಭಾವನೆಯಿಂದಲೇ ಸಿಎಂ ಸಿದ್ದರಾಮಯ್ಯ ಅವರು ಹಸಿ ಸುಳ್ಳು ಹೇಳಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಹೇಳಿರುವ ನೂರು ಸುಳ್ಳು ಗಳಲ್ಲಿ ಇದು 101 ನೇ ಸುಳ್ಳು ಎಂದು ಮಾಜಿ ಸಚಿವ, ಶಾಸಕ ವಿ.ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.

ಕಲಿಕೆ ಮೇಲೆ ಸಾಮಾಜಿಕ ಮಾಧ್ಯಮ, ತಂತಜ್ಞಾನದ ದುಷ್ಪರಿಣಾಮ : ಶಿಕ್ಷಣ ತಜ್ಞರಿಂದ ನಾನಾ ಆಯಾಮಗಳ ಕುರಿತು ಚರ್ಚೆ

ಬೆಂಗಳೂರು: “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದಿಂದ ಆಗುತ್ತಿರುವ ದುಷ್ಪರಿಣಾಮ”ದ ಬಗ್ಗೆ ವಿವಿಧ ವಲಯದ ಗಣ್ಯರು ವ್ಯಾಪಕವಾಗಿ ಬೆಳಕು ಚೆಲ್ಲಿದರು.

ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ರೋಟರಿ ಬೆಂಗಳೂರು ಪ್ರೈಮ್ ಕೌಶಲ್ಯ ಯೋಜನೆ

ಬೆಂಗಳೂರು; ರೋಟರಿ ಬೆಂಗಳೂರು ಪ್ರೈಮ್ ಅಂತಿಮ ವರ್ಷದ ಬಿಕಾಂ,ಬಿಸಿಎ, ಬಿಬಿಎಂ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಎಪಿಎಸ್ ವಾಣಿಜ್ಯ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

Translate »
Scroll to Top