ಅಂತರರಾಷ್ಟ್ರೀಯ

ಪ್ರೌಢಶಾಲೆ ಕಾಲೇಜುಗಳಿಗೆ ಮೂರು ದಿನ ರಜೆ

ನವದೆಹಲಿ, ಫೆಬ್ರವರಿ 8- ಮುಂದಿನ ಮೂರು ದಿನಗಳ ಕಾಲ ಪ್ರೌಢಶಾಲೆ-ಕಾಲೇಜುಗಳಿಗೆಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಜೆ ಘೋಷಿಸಿದ್ದಾರೆ ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಆದೇಶ ನೀಡಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಮನವಿ ಮಾಡಿದ್ದಾರೆ. ಸಂಬಂಧಿಸಿದ ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಅನುಮೋದನೆ ನೀಡಲು ಮನವಿ

ನವದೆಹಲಿ, ಫೆಬ್ರುವರಿ 8- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ: ಸಂಗೊಳ್ಳಿಯಲ್ಲಿ 189 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮುಕ್ತಾಯದ ಹಂತದಲ್ಲಿದ್ದು ಈ ಶಾಲೆಯನ್ನು ಸೈನಿಕ ಸ್ಕೂಲ್ ಸೊಸೈಟಿಗೆ ಹಸ್ತಾಂತರಿಸಲು ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಸೈನಿಕ್ ಸ್ಕೂಲ್ ಸೊಸೈಟಿಯ ಅಧಿಕಾರಿಗಳು …

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಅನುಮೋದನೆ ನೀಡಲು ಮನವಿ Read More »

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ

ನವದೆಹಲಿ.ಫೆ.8 : ಕಳೆದ ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿದ ಸಾಧನೆಯ ಕಿರುಹೊತ್ತಿಗೆ ಹಾಗೂ ತಮ್ಮ ಸರ್ಕಾರದ ಯೋಜನೆಗಳಿಂದ ಬಡವರು ಹಾಗೂ ದೀನ-ದಲಿತರಿಗೆ ಮುಂದಿನ ದಿನಗಳಲ್ಲಿ ಆಗುವ ಲಾಭ ಹಾಗೂ ಬದಲಾವಣೆ ಕುರಿತು ಐಸೆಕ್ ಸಂಸ್ಥೆ ನೀಡಿರುವ ಅಧ್ಯಯನ ವರದಿಯನ್ನು ನೀಡಿದರು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ಶಿವಕುಮಾರ ಉದಾಸಿ, ಉಮೇಶ್ ಜಾದವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೋವಾಗೆ ಆಗಮಿಸಿದ ಸಿದ್ದರಾಮಯ್ಯ

ಗೋವಾ.ಫೆ.8 : ಚುನಾವಣಾ ಪ್ರಚಾರಕ್ಕಾಗಿ ಗೋವಾಗೆ ಆಗಮಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದರು.

ಕರ್ನಾಟಕದ ಸಮರ್ಪಕ ಪಾಲು ದೊರೆಯಬೇಕು

ನವದೆಹಲಿ, ಫೆಬ್ರವರಿ ,4: ನದಿ ಜೋಡಣೆ ವಿಚಾರದಲ್ಲಿ ಕರ್ನಾಟಕದ ಸಮರ್ಪಕ ಪಾಲು ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ನಮ್ಮ ನದಿ ಪಾತ್ರದಲ್ಲಿ ಉತ್ಪಾದನೆಯಾಗುವ ನೀರು, ನಮ್ಮ ಅಗತ್ಯ ಹಾಗೂ ಈಕ್ವಿಟಿ ಆಧರಿಸಿ ಪಾಲು ನಿರ್ಧಾರವಾಗಬೇಕೆನ್ನುವುದು ನಮ್ಮ ನಿಲುವು. ಡಿಪಿಆರ್ ಅಂತಿಮಗೊಳಿಸುವ ಮುನ್ನ ಎಲ್ಲಾ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕೂಡ ಹೇಳಲಾಗಿದೆ. ಕರ್ನಾಟಕ್ಕೆ ನ್ಯಾಯಸಮ್ಮತವಾದ ಪಾಲನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಜೀವನದಿಗಳಾಗಿರುವ ಕೃಷ್ಣ ಮತ್ತು …

ಕರ್ನಾಟಕದ ಸಮರ್ಪಕ ಪಾಲು ದೊರೆಯಬೇಕು Read More »

ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲೂ 2 ದಿನ ಶೋಕಾಚರಣೆಗೆ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಇಂದು ಮತ್ತು ನಾಳೆ ರಾಜ್ಯದಲ್ಲಿ ಶೋಕಾಚರಣೆ. ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ರದ್ದು. ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲು ಸೂಚನೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ರಾಜ್ಯಪಾಲರು

ತಿರುಪತಿ ಫೆಬ್ರವರಿ 05 : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕದ ರಾಜ್ಯಪಾಲರಾದ ನಂತರ ಇದೇ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು, ದೇಶದಲ್ಲಿ ಸುಖ, ಸಮೃದ್ಧಿ, ಶಾಂತಿ ತುಂಬಿರಲಿ ಹಾಗೂ ಇಡೀ ವಿಶ್ವದಲ್ಲೇ ದೇಶದ ಹೆಸರು ಪಸರಿಸಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ತಿರುಮಲ ತಿರುಪತಿ …

ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ರಾಜ್ಯಪಾಲರು Read More »

ಗೋವಾ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪತ್ರಿಕಾಗೋಷ್ಠಿ

ಗೋವಾ, 28 : ಇಂದು ಮೊದಲ ಬಾರಿಗೆ ಗೋವಾ ಪ್ರದೇಶ ಕಾಂಗ್ರೆಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ನನಗೆ ಬಹಳ ಪ್ರಮುಖವಾದ ದಿನ. ನಾನು ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದೆ. ಆದರೆ ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಇಲ್ಲಿಗೆ ಆಗಮಿಸಿ, ದೇಶ ಕಾಯುವ ಸೈನಿಕರ ಪರವಾಗಿ ಧ್ವನಿ ಎತ್ತುತ್ತಿದ್ದೇನೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಮೂಲಕ ರೈತರು ಹಾಗೂ ಸೈನಿಕರ ಪ್ರಾಮುಖ್ಯತೆ …

ಗೋವಾ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪತ್ರಿಕಾಗೋಷ್ಠಿ Read More »

ದೆಹಲಿಯಲ್ಲಿ ಕರ್ನಾಟಕದಿಂದ ಲೆಫ್ಟ್ ವಿಂಗ್ ಕಮಾಂಡರ್ ಆಗಿ ಕೋಟೆ ನಾಡಿನ ಎಂ.ರಕ್ಷಿತಾ ಆಯ್ಕೆ

ದೆಹಲಿ,ಜನವರಿ,25 : 2022 ರ ಇದೇ ಜನವರಿ 26 ರಂದು ನವದೆಹಲಿಯ ಕೆಂಪುಕೋಟೆಯ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ( NSS ) ದಕ್ಷಿಣ ಭಾರತದ ತಂಡವನ್ನು ಮುನ್ನೆಡಸಲು ಕರ್ನಾಟಕದಿಂದ ಲೆಫ್ಟ್ ವಿಂಗ್ ಕಮಾಂಡರ್ ಆಗಿ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿಯಾಗಿದ್ದು ಚಿತ್ರದುರ್ಗ ನಗರದ ಎಂ.ರಕ್ಷಿತಾ ಕೋಟೆ ನಾಡಿನ ಕೀರ್ತಿ ಹೆಚ್ಚಿಸಿದ್ದಾಳೆ. ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಪಂಥ ಸಂಚಲನ ಕಠಿಣ ತರಬೇತಿಯಲ್ಲಿ ಪಲ್ಗೊಂಡಿರುವ ಎಂ. ರಕ್ಷಿತಾ ಕರ್ನಾಟಕ ರಾಜ್ಯದ ಐದು ಬಾಲಕಿಯರಲ್ಲಿ ಒಬ್ಬಳಾಗಿ, …

ದೆಹಲಿಯಲ್ಲಿ ಕರ್ನಾಟಕದಿಂದ ಲೆಫ್ಟ್ ವಿಂಗ್ ಕಮಾಂಡರ್ ಆಗಿ ಕೋಟೆ ನಾಡಿನ ಎಂ.ರಕ್ಷಿತಾ ಆಯ್ಕೆ Read More »

Translate »
Scroll to Top