ಶಿಕ್ಷಣ

ಮುಖ್ಯಮಂತ್ರಿಗಳ ಸರಳತೆ ಹಾಗು ಮಕ್ಕಳ ಮೇಲಿನ ಅಕ್ಕರೆ ಮೆಚ್ಚುವಂತದ್ದು

ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಇಂದಿನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಸರಳತೆ ಹಾಗೂ ಮಕ್ಕಳ ಬಗೆಗಿನ ಅವರ ಅಕ್ಕರೆ, ಸಂಸ್ಕೃತಿಯ ಬಗೆಗಿನ ಅವರ ಪ್ರೀತಿಗೆ ಉದಾಹರಣೆಯಾಗುವಂತಹ ಸ್ವಾರಸ್ಯಕರ ಸಂಗತಿಯೊಂದು ನಡೆಯಿತು.

ಯು.ಕೆ ದೇಶದ ವ್ಹೊಲ್ವರಹ್ಯಾಂಪ್ಟನ್ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯಗಳ ಸಂಶೋಧನಾ ಒಡಂಬಡಿಕೆಯ ಉದ್ಘಾಟನೆ

ಬೆಂಗಳೂರು: ಕಳೆದ ತಿಂಗಳು (ಜುಲೈ 2023) ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಅವರು ಯು.ಕೆ. ದೇಶದ ವ್ಹೊಲ್ವರಹ್ಯಾಂಪ್ಟನ್ ವಿಶ್ವವಿದ್ಯಾನಿಲಯದ ಅಹ್ವಾನದ ಮೇಲೆ ಸಂದರ್ಶಕ ಸಂಶೋಧನಾ ವಿದ್ವಾಂಸರಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಜರುಗಿದ ಚರ್ಚೆ ಮತ್ತು ಸಮಾಲೋಚನೆಗಳ ಫಲಿತಾಂಶ ರೂಪದ ಶೈಕ್ಷಣಿಕ/ಸಂಶೋಧನಾ ಒಡಂಬಡಿಕೆಗೆ ಇಂದು ಜರುಗಿದ ಸರಳ ಸಮಾರಂಭದಲ್ಲಿ ಅಧಿಕೃತವಾಗಿ ಚಾಲನೆ ನೀಡಿ ಉದ್ಘಾಟಿಸಲಾಯಿತು.

ವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1500 ಅಡಿ ತ್ರಿವರ್ಣ ಧ್ವಜದ ರಂಗೋಲಿ

ದೇಶದ 76 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ 1500 ಅಡಿ ಉದ್ದದ ರಂಗೋಲಿ ಮೂಲಕ ರಾಷ್ಟ್ರಧ್ವಜ ರಚಿಸಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಸ್ವಾತಂತ್ರೋತ್ಸವ ಭಾರತದ ಹೆಮ್ಮೆಯ ಉತ್ಸವ

ಸ್ವಾತಂತ್ರ್ಯೋತ್ಸವು ಯಾವ ಧರ್ಮ, ಜಾತಿ. ರಾಜಕೀಯ ಪಕ್ಷ ಅಥವಾ ಯಾವುದೇ ರಾಜ್ಯಕ್ಕೆ ಅಲ್ಲ, ಇಡೀ ದೇಶಕ್ಕಾಗಿ, ಮತ್ತು ಇಡೀ ದೇಶವು ಅದನ್ನು ಆಚರಿಸುತ್ತದೆ ಮತ್ತು ತಯಾರಿ ಮಾಡುತ್ತದೆ. ಮಹಾತ್ಮ ಗಾಂಧಿ ನೆಹರು ತಿಲಕ್ ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ವಲ್ಲಭಾಯ್ ಪಟೇಲ್ ರಂತಹ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಹೋರಾಟಗಳ ಬಗ್ಗೆ ಮಾತನಾಡುತ್ತದೆ ಮತ್ತು ಚಳುವಳಿಗಳು ಮತ್ತು ಹೋರಾಟಗಳು ಮತ್ತು ಮೆರವಣಿಗೆಗಳ ಹಾದಿಯನ್ನು ರೂಪಿಸುವಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರವನ್ನು ತೋರಿಸುತ್ತದೆ.

ವಿಶ್ವ ಬುಡಕಟ್ಟು ದಿನಾಚರಣೆ

ವಿಶ್ವ ಬುಡಕಟ್ಟು ದಿನಾಚರಣೆ ದಿನದ ಅಂಗವಾಗಿ ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ಬುಧವಾರ ಹೆಚ್. ಡಿ ಕೋಟೆ ತಾಲೂಕಿನ ಬಸವನಗಿರಿ ಹಾಡಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆ ಭೇಟಿ ನೀಡಿ ಅಲ್ಲಿನ ಶಿಕ್ಷಣದ ವ್ಯವಸ್ಥೆ ಮತ್ತು ಆದಿವಾಸಿ ಮಕ್ಕಳ ಅರೋಗ್ಯ& ಶಿಕ್ಷಣದ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು

ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ನಾವೀನ್ಯತೆಯ ಭವಿಷ್ಯವನ್ನು ರೂಪಿಸಲಿದೆ ಕಿಷ್ಕಿಂದ ವಿಶ್ವವಿದ್ಯಾಲಯ

ಬಳ್ಳಾರಿ: “ಇಂದಿನ ಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಕೃಷ್ಟಗೊಳಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಮನಸ್ಥಿತಿಯೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಸಾಧಾರಣ ಕಲಿಕೆಯ ಅನುಭವವನ್ನು ಒದಗಿಸಲು ಬದ್ಧವಾಗಿ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಳವಾದ ಪ್ರಜ್ಞೆಯನ್ನು ಬೆಳೆಸುವ ಸಮಗ್ರ ಶೈಕ್ಷಣಿಕ ವಾತಾವರಣವನ್ನು ಪೋಷಿಸುವ ಗುರಿಯನ್ನು ಹೊಂದಿರುವ ತುಂಗಭದ್ರ ಎಜುಕೇಷನ್ ಹೆಲ್ತ್ & ರೂರಲ್ ಡೆವೆಲೊಪ್ಮೆಂಟ್ ಟ್ರಸ್ಟ್(ರಿ) ಸಂಸ್ಥೆಯ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ, 2023-24ನೇ ಶೈಕ್ಷಣಿಕ ವರ್ಷದಿಂದ ಕಿಷ್ಕಿಂದ ವಿಶ್ವವಿದ್ಯಾಲಯ ಪ್ರಾರಂಭಿಸುತ್ತಿರುವುದಾಗಿ” ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಶ್ವವಿದ್ಯಾಲಯದ ಅನುಮೋದನೆಗೆ ಕಾರಣರಾದ ಕರ್ನಾಟಕ ಘನ ಸರ್ಕಾರಕ್ಕೆ ಹೃತ್ಪೂರ್ವಕವಾದ ವಂದನೆಗಳನ್ನು ತಿಳಿಸಿದ್ದಾರೆ

16 ಕಾಲೇಜ್ ಗಳ  ಇಂಟೆರ್ ಕಾಲೇಜ್ ಸ್ಪೋರ್ಟ್ಸ್ ಮೀಟ್-2023

ಬಿಜಿಎಸ್ ಆಟದ ಮೈದಾನದಲ್ಲಿ ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜು ವತಿಯಿಂದ ಎರಡು ದಿನಗಳ ಕಾಲ ಅಂತರಕಾಲೇಜು ಕ್ರೀಡಾಕೂಟ-2023 ಆಯೋಜಿಸಿದ್ದರು.

ಉದ್ಯೋಗ, ಶಿಕ್ಷಣ ವಲಸೆಗೆ ಕಾರಣ ಆಗುತ್ತಿದೆ

ಸಿ.ಎಸ್.ಆರ್ ಫಂಡ್ ಅನ್ನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಖರ್ಚು ಮಾಡಿದರೆ ಸಮಾಜದ ಪ್ರಗತಿಯ ವೇಗ ಹೆಚ್ವುತ್ತದೆ
ಉದ್ಯಮ ಜಗತ್ತಿನ ಬೇಡಿಕೆಗೆ ತಕ್ಕಂತೆ ಕೌಶಲ್ಯ ವೃದ್ಧಿಗೆ ಸರ್ಕಾರ ಬದ್ದ: ಮುಖ್ಯಮಂತ್ರಿ ಸಿದ್ದರಾಮಯ್ಯ

Translate »
Scroll to Top