ಶಿಕ್ಷಣ

ಹುಬ್ಬಳ್ಳಿ: ನೇಹಾ ಕೊಲೆ ಆರೋಪಿ ಬಂಧಿಸಿದ ತಂಡಕ್ಕೆ ಪೊಲೀಸ್ ಆಯುಕ್ತರಿಂದ ಸನ್ಮಾನ

ಹುಬ್ಬಳ್ಳಿ: ಇತ್ತೀಚೆಗೆ ನಡೆದ ೨೩ ವರ್ಷದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣದ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಪೊಲೀಸ್ ತಂಡದ ಕರ್ಯದವನ್ನು ಧಾರವಾಡ ನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಶ್ಲಾಘಿಸಿದ್ದಾರೆ. ಕೊಲೆ ನಡೆದ ಒಂದು ಗಂಟೆಯೊಳಗೆ ಆರೋಪಿ ಫಯಾಜ್ ನನ್ನು ಬಂಧಿಸಿದ ತಂಡದ ಎಲ್ಲಾ ಪೊಲೀಸರಿಗೂ ಶ್ಲಾಘನಾ ಪತ್ರಗಳ ಜೊತೆಗೆ ೨೫,೦೦೦ ರೂ. ನಗದು ಬಹುಮಾನ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

KCET exam-ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು: ಆತಂಕ, ಗೊಂದಲಗೊಂಡ ವಿದ್ಯರ‍್ಥಿಗಳು

ಬೆಂಗಳೂರು: ಕಳೆದ ಗುರುವಾರ ಮತ್ತು ಶುಕ್ರವಾರ ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕರ್ಸ ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಯಲ್ಲಿ ಕೈಬಿಟ್ಟಿರುವ ಪಠ್ಯಕ್ರಮ ಹಾಗೂ ವಿಷಯೇತರ ಪ್ರಶ್ನೆಗಳು ಹಲವು ಬಂದಿದ್ದರಿಂದ ವಿದ್ಯರ್ಥಿ್ಗಳಿಗೆ ಈ ಬಾರಿ ಗೊಂದಲ ಮತ್ತು ಪರೀಕ್ಷೆ ಕಠಿಣವಾಗಿತ್ತು ಎಂದು ಹಲವರು ಹೇಳುತ್ತಿದ್ದಾರೆ.

ಯುಪಿಎಸ್ ಸಿ ಪರೀಕ್ಷೆ : ರಾಜ್ಯದ ಶೇ 50 ರಷ್ಟು ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಅಭ್ಯರ್ಥಿಗಳು

ಬೆಂಗಳೂರು: ಕೇಂದ್ರ ಕೇಂದ್ರ ಲೋಕಸೇವಾ ಆಯೋಗದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದು, ಶೇ 50 ರಷ್ಟು ಅಭ್ಯರ್ಥಿಗಳು ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ ಸೇರಿದವರಾಗಿದ್ದಾರೆ.

ಇಸ್ರೇಲ್‌ – ಇರಾನ್‌ ಸಂಘರ್ಷ, ಕಳವಳಕ್ಕೆ ಕಾರಣ – ವಿದೇಶಾಂಗ ಸಚಿವ ಡಾ. ಎಸ್‌ ಜೈಶಂಕರ್‌

ಬೆಂಗಳೂರು: ಇಸ್ರೇಲ್ – ಇರಾನ್ ಸಂಘರ್ಷ ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದ್ದಾರೆ.
ರಾಜಾಜಿನಗರದ ದಿ ಇನ್ಟ್ಯಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ -ಐಸಿಎಸ್ಐ ಬೆಂಗಳೂರು ಚಾಪ್ಟರ್ ನಲ್ಲಿ ಆಯೋಜಿಸಿದ್ದ “ವಿಶ್ವಬಂಧು ಭಾರತ್” ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ವಿಶ್ವದ ಯಾವುದೇ ಸಂಘರ್ಷ, ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ತೈಲ ಬೆಲೆ, ಆಹಾರದರಗಳ ಏರಿಕೆ, ಹಣದುಬ್ಬರ ಹೆಚ್ಚಳ ಒಳಗೊಂಡಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಗತ್ತಿನ ಎಲ್ಲಾ ಸಂಘರ್ಷ, ಸಮಸ್ಯೆಗಳಿಗೆ “ವಿಶ್ವಬಂಧು” ಪರಿಕಲ್ಪನೆಯೇ ಪರಿಹಾರವಾಗಿದೆ ಎಂದು ಪ್ರತಿಪಾದಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆ: ಉತ್ತಮ ಪಡಿಸಿಕೊಳ್ಳಲು ೨ನೇ ಪರೀಕ್ಷೆಗಾಗಿ ಅರ್ಜಿ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ೨ನೇ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇದೇ ೧೭ ಕೊನೆಯ ದಿನವಾಗಿದೆ.
ಇದೇ ಮೊದಲ ಬಾರಿಗೆ ಮಂಡಳಿಯು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದೆ. ಒಂದು ವೇಳೆ ೨ನೇ ಪರೀಕ್ಷೆ ಫಲಿತಾಂಶವು ಸಮಾಧಾನವಾಗದವರು ಪರೀಕ್ಷೆ ಮೂರನ್ನು ಬರೆಯಬಹುದು.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ

ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಎಂದಿನಂತೆಯೇ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.

ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆವು : ಸಿ.ಎಂ.ಸಿದ್ದರಾಮಯ್ಯ

ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕಙ್ನಾಗಿ ಘೋಷಿಸಿದೆವು ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ತಿಳಿಸಿದರು.

ಆಂಗ್ಲ ಭಾಷೆಯ ಕೌಶಲ್ಯದ ತರಬೇತಿ

ನಾಯಕನಹಟ್ಟಿ,: ವಿದ್ಯಾರ್ಥಿಗಳ ಕಲಿಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವುದಕೋಸ್ಕರ ಇಂಗ್ಲಿಷ್ ಕಮ್ಯುನಿಕೇಶನ್ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಹಾಗೂ ಪ್ರತಿಯೊಬ್ಬರೂ ಸರಳವಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡಿಸಲು ಕಲಿಸುವಂತಹ ಒಂದು ಚಟುವಟಿಕೆಗೋಸ್ಕರ ಎಂದು ಜೆ,ಜೆ,ಆರ್, ಸ್ಕೂಲಿನ ಮುಖ್ಯ ಶಿಕ್ಷಕರಾದ ಟಿ.ಮಹಾಂತೇಶ್ ಮಾತನಾಡಿದರು.

ನಮ್ಮ ಸಂವಿಧಾನ ನಮ್ಮ ಹೆಮ್ಮೆ

ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ…’ ಹೀಗೆ ಆರಂಭಗೊಳ್ಳುವ ನಮ್ಮ ದೇಶದ ಸಂವಿಧಾನದ ಪೀಠಿಕೆ ಈ ದೇಶದ ಇಡೀ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತದೆ. ಅಂದ ಹಾಗೆ ನವೆಂಬರ್ 26. ಇಂದಿಗೆ ಸರಿಯಾಗಿ 73 ವರ್ಷಗಳ ಹಿಂದೆ, ಅಂದರೆ ನವೆಂಬರ್‌ 26, 1949ರಂದು ಭಾರತಕ್ಕೊಂದು ಅಧಿಕೃತವಾದ ಸಂವಿಧಾನ ದೊರಕಿದ ದಿನ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೋಡಬಹುದಾದ  ಸಾಮಾನ್ಯ ತಪ್ಪುಗಳು

‘ಸ್ಪರ್ಧಾತ್ಮಕ ಪರೀಕ್ಷೆಗಳು’ ಅನೇಕ ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಆತಂಕವನ್ನು ಉಂಟುಮಾಡುವ ಎರಡು ಪದಗಳಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು ಪರಿಚಿತ ಶಾಲಾ ಪರೀಕ್ಷೆಗಳಿಗಿಂತ ಹೆಚ್ಚು ದೊಡ್ಡ ಪ್ರಮಾಣದ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತವೆ. ಈ ಪರೀಕ್ಷೆಗಳಲ್ಲಿ ಹೆಚ್ಚಿನವು ವಿದ್ಯಾರ್ಥಿಗಳ ಕನಸಿನ ವೃತ್ತಿಜೀವನದ ಕಡೆಗೆ ಮೆಟ್ಟಿಲುಗಳಾಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಒತ್ತಡವನ್ನು ಅನುಭವಿಸುತ್ತಾರೆ.

Translate »
Scroll to Top