ಹಾವೇರಿ

ಉಕ್ರೇನ್​​​ ನಲ್ಲಿ ಮೃತಪಟ್ಟ ನವೀನ್​​​ ನಿವಾಸಕ್ಕೆ ರಾಜ್ಯಪಾಲರ ಭೇಟಿ

ಹಾವೇರಿ ಮಾರ್ಚ್ 24, 2022: ಉಕ್ರೇನ್​​​ ಮಿಸೈಲ್​​ ದಾಳಿ ವೇಳೆ ಮೃತಪಟ್ಟ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿರುವ ನವೀನ್​​​ ನಿವಾಸಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಭೇಟಿ ನೀಡಿದರು. ನವೀನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರೊಂದಿಗೆ ಕೆಲವು ನಿಮಿಷಗಳ ಕಾಲ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ, ಹಾವೇರಿ ಜಿಲ್ಲಾಧಿಕಾರಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಮೃತ ನವೀನ ಗ್ಯಾನಗೌಡರ ದೇಹದಾನಕ್ಕೆ ಕುಟುಂಬಸ್ಥರ ತೀರ್ಮಾನ

ಹಾವೇರಿ,ಮಾ,19 : ಇತ್ತೀಚೆಗೆ ಉಕ್ರೇನ್ ನಲ್ಲಿ ರಷ್ಯಾ ದಾಳಿ ಸಂದರ್ಭದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಮಾರ್ಚ್ 21 ರ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ಮಗನ ಪಾರ್ಥಿವ ಶರೀರ ತಲುಪುತ್ತದೆ. ನಂತರ ವೀರ ಶೈವ ಪದ್ಧತಿ ಪ್ರಕಾರ ಪೂಜಾ ಕಾರ್ಯ ನೆರವೇರಿಸಲಾಗುವುದು. ಸಂಜೆವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಎಂದು ಮೃತ ನವೀನ …

ಮೃತ ನವೀನ ಗ್ಯಾನಗೌಡರ ದೇಹದಾನಕ್ಕೆ ಕುಟುಂಬಸ್ಥರ ತೀರ್ಮಾನ Read More »

ರಾಣೆಬೆನ್ನೂರಿನಲ್ಲಿ ಸಿದ್ದರಾಮಯ್ಯ

ಹಾವೇರಿ,ಮಾ,9 : ರಷ್ಯಾ ಮತ್ತು ಯುಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಭಾರತದಿಂದ ಬಹಳಷ್ಟು ಮಂದಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಚಳಗೇರಿಯಿಂದಲೇ ನವೀನ್, ಅಮಿತ್, ಸುಮನ್ ಎಂಬ ಮೂರು ಜನ ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ಓದುತ್ತಿದ್ದರು. ಅವರಲ್ಲಿ ಇಬ್ಬರು ಮಾತ್ರ ಬದುಕುಳಿದು ಮರಳಿ ಬಂದಿದ್ದಾರೆ. ಅಮಿತ್ ಮತ್ತು ನವೀನ್ ಯುದ್ಧ ನಡೆಯುವ ವೇಳೆ ಬಂಕರ್ ನಲ್ಲಿ ಇದ್ದರು, ಬೆಳಿಗ್ಗೆ ಹೊತ್ತು ಆಹಾರ ತರಲು ರೆಸ್ಟೋರೆಂಟ್ ಬಳಿ ನಿಂತಿದ್ದಾಗ ಶೆಲ್ ದಾಳಿಗೆ ನವೀನ್ ಮೃತಪಟ್ಟಿದ್ದಾರೆ. ಅವರ ತಂದೆ ನಂಜನಗೂಡು ಬಳಿಯ …

ರಾಣೆಬೆನ್ನೂರಿನಲ್ಲಿ ಸಿದ್ದರಾಮಯ್ಯ Read More »

ಮೃತ ನವೀನ್ ಅವರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

ಹಾವೇರಿ,ಮಾ,9 : ಉಕ್ರೇನ್ ನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಅವರ ನಿವಾಸಕ್ಕೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸದಲ್ಲಿ ಸಿದ್ದರಾಮಯ್ಯ ಅವರು ನವೀನ್ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ನವೀನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಿಧಾನಸಭೆ ಮಾಜಿ ಸ್ಪೀಕರ್ ಕೋಳಿವಾಡ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಜಯಮಾಲಾ, ಬ್ಯಾಡಗಿ ಶಿವಣ್ಣ, ಮುಖಂಡರಾದ ಬನ್ನಿಕೋಡ್, ಪ್ರಕಾಶ …

ಮೃತ ನವೀನ್ ಅವರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ Read More »

ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ

ಹಾವೇರಿ, ಫೆಬ್ರವರಿ 13: ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿಗ್ಗಾಂವಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಿರುವ ಮನೆಗಳಿಗೆ 750 ಕೆವಿ ವಿದ್ಯುತ್ ಕೇಂದ್ರ ಹಾಗೂ ಕುರುಬ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರಿಗೆ ಅಬ್ದುಲ್ ಕಲಾಂ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ನೀಡುವ ಕೆಲಸವನ್ನೂ ಮಾಡಲಾಗಿದೆ. ನಾಲ್ಕು …

ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ Read More »

ಬೂಸ್ಟರ್ ಡೋಸ್ ಪಡೆದ ಬಿ.ಸಿ.ಪಾಟೀಲ್

ಹಾವೇರಿ,ಜ.10: ಕೃಷಿ ಸಚಿವರೂ ಹಾವೇರಿ ಉಸ್ತುವಾರಿಗಳಾಗಿರುವ ಬಿ.ಸಿ.ಪಾಟೀಲರಿಂದು ಬೂಸ್ಟರ್ ಡೋಸ್ ಲಸಿಕೆ ಪಡೆದರು. ಮತಕ್ಷೇತ್ರ ಹಿರೇಕೆರೂರಿನ‌ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 60 ವರ್ಷ ಮೇಲ್ಪಟ್ಟ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಬೂಸ್ಟರ್ ಡೋಸ್ ಲಸಿಕೆ ಹಾಕಿದರು. ದೇಶದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡ್ ಜನರಿಗೆ ಕೊರೋನಾ ವೈರಸ್​ ವಿರುದ್ಧ ಮುನ್ನೆಚ್ಚರಿಕಾ ಡೋಸ್​​ನ್ನು ಇಂದಿನಿಂದ ನೀಡಲಾಗುತ್ತಿದ್ದು,ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ.ಈ ಹಿಂದೆ ಮೊದಲ …

ಬೂಸ್ಟರ್ ಡೋಸ್ ಪಡೆದ ಬಿ.ಸಿ.ಪಾಟೀಲ್ Read More »

Translate »
Scroll to Top