ಬಳ್ಳಾರಿ

ಮೃತ ಕುಟುಂಬಸ್ಥರಿಗೆ ಶ್ರೀರಾಮುಲು ಸಾಂತ್ವನ

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮಕ್ಕೆ ತೆರಳಿ ಅಪಘಾತದಲ್ಲಿ ಮೃತಪಟ್ಟವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಮತ್ತು ಹಿರಿಯರಿಗೆ ಸಾಂತ್ವಾನ ಹೇಳಲಾಯಿತು. ಸಾವಿನ ದುಃಖ ಭರಿಸುವ ಶಕ್ತಿ ಆ ಕುಟುಂಬಕ್ಕೆ ದೇವರು ನೀಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಾರ್ಥಿಸಿದರು.

ಭೀಕರ ರಸ್ತೆ ಅಪಘಾತ: 10 ಜನ ಸಾವು

ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಡಿಕ್ಕಿಯಾಗಿ ಸುಮಾರು 10 ಮಂದಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ನಡೆದಿದೆ.

ಶಾಸಕ ಬಿ.ನಾಗೇಂದ್ರರಿಗೆ ಸಚಿವ ಸ್ಥಾನ ಫಿಕ್ಸ್

ಬಳ್ಳಾರಿ: ಬಹು ನಿರೀಕ್ಷಿತ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ನಾಳೆ ಶನಿವಾರ ಮೇ.೨೭ರಂದು ನಡೆಯುವುದು ಖಾತರಿಯಾಗಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಫಿಕ್ಸ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಖಚಿತ ಪಡಿಸಿವೆ. ಕಳೆದ ಮೇ.10 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ನಿಚ್ಚಳ ಬಹುಮತ ಪಡೆದು ಆಧಿಕಾರ ಸೂತ್ರ ಹಿಡಿದಿದ್ದು ಈಗ ಇತಿಹಾಸ. ಅಂತೆಯೇ ಕಾಂಗ್ರೆಸ್ …

ಶಾಸಕ ಬಿ.ನಾಗೇಂದ್ರರಿಗೆ ಸಚಿವ ಸ್ಥಾನ ಫಿಕ್ಸ್ Read More »

ಮೂಲಭೂತ ಸೌಲಭ್ಯಗಳ ವಂಚಿತ ಹೆರಕಲ್‌ಗ್ರಾಮ

ಸಿರುಗುಪ್ಪ: ತಾಲೂಕಿನ ಹೆರಕಲ್‌ ಗ್ರಾಮದಲ್ಲಿರುವ ಬಸ್ ನಿಲ್ದಾಣವು ಶಿಥಿಲಾವ್ಯವಸ್ಥೆಯಲ್ಲಿದ್ದು ಅಪಾಯಕ್ಕೆ ಕಾದು ಕುಳಿತಿದೆ. ಸೂಕ್ತ ಚರಂಡಿ ವ್ಯವಸ್ಥೆ, ಸಿ.ಸಿ ಅಥವಾ ಡಾಂಬರೀಕರಣ ರಸ್ತೆ, ಕುಡಿಯುವ ಶುದ್ದ ನೀರಿನ ಸಮಸ್ಯೆಗಳಂತಹ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದೆ. ಗ್ರಾಮದಲ್ಲಿ ಹದಗೆಟ್ಟ ಮುಖ್ಯರಸ್ತೆ, ಹತ್ತಾರು ವರ್ಷಗಳೇ ಕಳೆದರೂ ಸಿ.ಸಿ ಕಾಣದ ಬೀದಿಗಳು, ಇನ್ನೊಂದೆಡೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ, ಸಿಸಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವು ದರಿಂದ ಸಂಚಾರಕ್ಕೆ ಅಸ್ತವ್ಯಸ್ತವಾದರೇ ಕೆಲವಡೆ ಚರಂಡಿಯಲ್ಲಿ ಹೂಳು ತೆಗೆಯದೇ ಗಬ್ಬು ನಾರುತ್ತಿದೆ. ನೆರೆ  ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮನೆಗಳೊಂದಿಗೆ …

ಮೂಲಭೂತ ಸೌಲಭ್ಯಗಳ ವಂಚಿತ ಹೆರಕಲ್‌ಗ್ರಾಮ Read More »

ಜನತೆಯ ಹೋರಾಟದ ಫಲವಾಗಿ ಭಗತ್ ಸಿಂಗ್ ಕುರಿತ ಪಾಠ ಮರು ಸೇರ್ಪಡೆ

ಬಳ್ಳಾರಿ: ರಾಜ್ಯದ ಪ್ರಜ್ಞಾವಂತ ಜನತೆ, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಹಾಗೂ ಬಹುಮುಖ್ಯವಾಗಿ ವಿದ್ಯಾರ್ಥಿಗಳ ವ್ಯಾಪಕ ವಿರೋಧ ಹಾಗೂ ಹಲವು ಪ್ರತಿಭಟನೆಗಳ ಫಲವಾಗಿ ಹತ್ತನೇ ತರಗತಿ ಪಠ್ಯಕ್ಕೆ ಭಗತ್ ಸಿಂಗ್ ಕುರಿತ ಪಾಠವನ್ನು ಈಗ ಮರು ಸೇರ್ಪಡೆ ಮಾಡಲಾಗಿದೆ. ಇದು ಜನತೆಯ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಪಠ್ಯದಲ್ಲಿ ವಿವೇಕಾನಂದರ ಮಾನವೀಯ ಮೌಲ್ಯಗಳನ್ನು ಸಾರುವ ಪಾಠ, ಪಿ ಲಂಕೇಶ್, ಎ. ಎನ್. ಮೂರ್ತಿ ರಾವ್ ಹಾಗೂ ಸಾರ ಅಬೂಬಕ್ಕರ್ ಅವರ ಪ್ರಗತಿಪರ ಲೇಖನಗಳು, ನಾರಾಯಣಗುರು ಮತ್ತು ಇನ್ನಿತರ ಪ್ರಗತಿಪರ …

ಜನತೆಯ ಹೋರಾಟದ ಫಲವಾಗಿ ಭಗತ್ ಸಿಂಗ್ ಕುರಿತ ಪಾಠ ಮರು ಸೇರ್ಪಡೆ Read More »

ಬುಡಾ ಕಚೇರಿಯಲ್ಲಿ ರಿಯಲ್‌ ಎಸ್ಟೇಟ್‌ ಮಾಲೀಕರೊಂದಿಗೆ “ಬಳ್ಳಾರಿ ಅಭಿವೃದ್ಧಿ” ಕುರಿತು ಸಚಿವ ಬಿ.ಶ್ರೀರಾಮುಲು ಚರ್ಚೆ

ಬಳ್ಳಾರಿ: ಬಳ್ಳಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ‌ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು‌ ಬುಡಾ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸಭೆ ನಡೆಸಿದರು. ಬಳ್ಳಾರಿ ನಗರದ ಅಭಿವೃದ್ಧಿ ಮತ್ತು ಸೌಂದರೀಕರಣಕ್ಕೆ ಸಂಬಂಧಿಸಿದಂತೆಯೂ ರಿಯಲ್ ಎಸ್ಟೇಟ್ ಮಾಲೀಕರೊಂದಿಗೆ ಚರ್ಚಿಸಿದರು ಮತ್ತು ಅವರ ಸಮಸ್ಯೆಗಳನ್ನು ಆಲಿಸಿದರು. ರಿಯಲ್ ಎಸ್ಟೇಟ್ ಮಾಲೀಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ನಿಯಾಮನುಸಾರ ಕ್ಷಿಪ್ರಗತಿಯಲ್ಲಿ ಕ್ರಮವಹಿಸುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ, ಬುಡಾ ಅಧ್ಯಕ್ಷ …

ಬುಡಾ ಕಚೇರಿಯಲ್ಲಿ ರಿಯಲ್‌ ಎಸ್ಟೇಟ್‌ ಮಾಲೀಕರೊಂದಿಗೆ “ಬಳ್ಳಾರಿ ಅಭಿವೃದ್ಧಿ” ಕುರಿತು ಸಚಿವ ಬಿ.ಶ್ರೀರಾಮುಲು ಚರ್ಚೆ Read More »

ನೂತನ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಬಳ್ಳಾರಿ: ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ 3.58 ಕೋಟಿ ರೂ.ವೆಚ್ಚದಲ್ಲಿ ನೂತನ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅತ್ಯಾಧುನಿಕ ಪೋಲಿಸ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸ್ಮಾರ್ಟ್ ಪೋಲಿಸ್ಸಿಂ ಗ್‍ನಿಂದ ಅಪರಾಧ ತಡೆ, ಜನರ ಸುರಕ್ಷತೆ, ರಸ್ತೆ ಸುರಕ್ಷತೆ ಸೇರಿದಂತೆ ತಮ್ಮ ಕೆಲಸವನ್ನು ಪೋಲಿಸ್ ಪಡೆಗಳು ಇನ್ನಷ್ಟು ಪರಿಣಾಮಕಾರಿಯಾಗಿ …

ನೂತನ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ Read More »

ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಸಚಿವರಾದ ಬಿ.ಶ್ರೀರಾಮುಲು ಅವರಿಂದ ಭೂಮಿಪೂಜೆ

ಸಂಡೂರು : ತಾಲೂಕಿನ ಚೋರನೂರು ಗ್ರಾಮದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ‌ಹಾಗೂ‌ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಈ.ತುಕಾರಾಂ, ಸಂಸದ ವೈ.ದೇವೇಂದ್ರಪ್ಪ, ಡಿಸಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್ ಮತ್ತಿತರರು ಇದ್ದರು.

ಸಣ್ಣ ಮಾರ್ಕೆಟ್ ಗೆ ಭೇಟಿ ನೀಡಿದ ಅಧಿಕಾರಿಗಳು

ಬಳ್ಳಾರಿ : ಸಣ್ಣ ಮಾರ್ಕೆಟ್ ಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ‌ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಪಾಲಿಕೆ ಸದಸ್ಯರು ಹಾಗೂ ಸಣ್ಣ ಮಾರ್ಕೆಟ್ ವ್ಯಾಪಾರಿಗಳು ಇದ್ದರು.

ಬಳ್ಳಾರಿ ವಿಭಾಗಕ್ಕೆ ಡಿ ಕೆ ಶಿವಕುಮಾರ್ ಸಾರಾತ್ಯದಲ್ಲಿ ಪ್ರವಾಸ – ಮಾಜಿ ಸಚಿವೆ ಉಮಾ ಶ್ರೀ

ಮೊಳಕಾಲ್ಮುರು : ತಾಲ್ಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾ ಶ್ರೀ ರವರು ಬಳ್ಳಾರಿಗೆ ಹೋಗುವ ಸಂದರ್ಭದಲ್ಲಿ ವಿಶ್ರಾಂತಿ ಪಡೆದ ಪತ್ರಿಕೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರುಕರ್ನಾಟಕ ರಾಜ್ಯದಲ್ಲಿ 2023ನೇ ವಿಧಾನ ಸಭೆ ಚುನಾವಣೆ ಸಮೀಪಸುತ್ತಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರ ತರಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯಾರನ್ನು ಸಬಲೀಕರಣ ಮಾಡುವ ಮೂಲಕ ಸದೃಢ ಸಮಾಜ ಕಟ್ಟಬೇಕು. ಮಹಿಳಾ ಸ್ವಸಹಾಯ ಸಂಘ ಪಾರಿವಾರಗಳನ್ನು ಒಗ್ಗೂಡಿಸುವ …

ಬಳ್ಳಾರಿ ವಿಭಾಗಕ್ಕೆ ಡಿ ಕೆ ಶಿವಕುಮಾರ್ ಸಾರಾತ್ಯದಲ್ಲಿ ಪ್ರವಾಸ – ಮಾಜಿ ಸಚಿವೆ ಉಮಾ ಶ್ರೀ Read More »

Translate »
Scroll to Top