ನಮ್ಮ ಸಂವಿಧಾನ ನಮ್ಮ ಹೆಮ್ಮೆ
ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ…’ ಹೀಗೆ ಆರಂಭಗೊಳ್ಳುವ ನಮ್ಮ ದೇಶದ ಸಂವಿಧಾನದ ಪೀಠಿಕೆ ಈ ದೇಶದ ಇಡೀ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತದೆ. ಅಂದ ಹಾಗೆ ನವೆಂಬರ್ 26. ಇಂದಿಗೆ ಸರಿಯಾಗಿ 73 ವರ್ಷಗಳ ಹಿಂದೆ, ಅಂದರೆ ನವೆಂಬರ್ 26, 1949ರಂದು ಭಾರತಕ್ಕೊಂದು ಅಧಿಕೃತವಾದ ಸಂವಿಧಾನ ದೊರಕಿದ ದಿನ.