ಕೃಷಿ

ಡ್ರೋಣ್ ಬಳಕೆಯಲ್ಲಿ ಎಚ್ಚರ ವಹಿಸದಿದ್ದಲ್ಲಿ ಭಾರೀ ಅನಾಹುತ: ಕೃಷಿ ವಿವಿ ಕುಲಪತಿ

ಬೆಂಗಳೂರು: ಭಾರತ ಈಗ ಆಹಾರೋತ್ಪಾನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಇದಕ್ಕೆ ಕೃಷಿ ಚಟುವಟಿಕೆಗಳಲ್ಲಿ ತಾಂತ್ರಿಕತೆ ಬಳಕೆ ಮುಖ್ಯವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್ ವಿ ಸುರೇಶ ಹೇಳಿದ್ದಾರೆ.

ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​​ ಕೇರ್​​

ಕಲಬುರಗಿ: ಬರದಿಂದ ಕಂಗೆಟ್ಟ ರೈತರಿಗೆ ಆಸರೆಯಾಗಲೆಂದು ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಇದ್ರಿಂದ ಅಷ್ಟೊ ಇಷ್ಟೋ ಕಾಸು ಬಂತಲ್ಲ ಅಂತ ರೈತರು ಹಿಗ್ಗಿದ್ದರು. ಆದರೆ ಹೀಗೇ ಬಂದ ಪರಿಹಾರ ಹಣವನ್ನ ಬ್ಯಾಂಕುಗಳು ರೈತರ ಅಕೌಂಟ್ಗೆ ಜಮಾ ಮಾಡುವುದನ್ನ ಬಿಟ್ಟು, ಗಾಯದ ಮೇಲೆ ಬರೆ ಎಳೆದಂತೆ ಸಾಲದ ನೆಪ ಹೇಳಿ ಅಕೌಂಟ್ ಗಳನ್ನೆ ಫ್ರೀಜ್ ಮಾಡ್ತಿದ್ದಾರಂತೆ.

ಹಂಪಿಯಲ್ಲಿ ಸುರಿದ ಮಳೆಗೆ ಉರುಳಿದ ಬಾಳೆ

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಘಟನೆ
ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಗೆ ಸಾವಿರಾರು ಬಾಳೆಗಿಡಗಳು ನೆಲಕ್ಕುರುಳಿವೆ

ಕೊಬ್ಬರಿ ಶೆಡ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಗುಬ್ಬಿ : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಬ್ಬರಿ ಶೆಡ್ಡು, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದರಿಂದ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ರಾಂಪುರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ರೈತ ಮಹಿಳೆ ಶಿವಗಂಗಮ್ಮನವರು ಕುಟುಂಬ ಸಮೇತ ತೋಟದಲ್ಲಿ ವಾಸವಿದ್ದು, ಮನೆಯ ಸಮೀಪದಲ್ಲಿಯೇ ಕಾಯಿ ತುಂಬಲು ಶೆಡ್ಡು ನಿರ್ಮಿಸಿಕೊಂಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದ್ದು ಅಷ್ಟರೊಳಗೆ ಭಾಗಶಃ ಸುಟ್ಟು ಹೋಗಿದೆ.

ಭವಿಷ್ಯದ ಆಹಾರ ಸಿರಿಧಾನ್ಯದ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಅಗತ್ಯ – ಸಚಿವ ಚೆಲುವರಾಯ ಸ್ವಾಮಿ

ಬೆಂಗಳೂರು : ಸಿರಿಧಾನ್ಯ ಭವಿಷ್ಯದ ಆರೋಗ್ಯಪೂರ್ಣ ಆಹಾರವಾಗಿದ್ದು, ಸಿರಿಧಾನ್ಯಗಳ ಮಹತ್ವದ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಈಗಿನಿಂದಲೇ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ಉದ್ಯೋಗ ಅವಕಾಶಗಳಿವೆ : ಆಸಕ್ತರು ಸಂಪರ್ಕಿಸಿ

University of Agriculture Sciences Dharwad ಹೈರಿಂಗ್ ಮಾಡ್ತಾ ಇದೆ. ಗುತ್ತಿಗೆ ಆಧಾರದ ಮೇಲೆ ಅಕೌಂಟೆನ್ಸಿ ವಿಭಾಗದಲ್ಲಿ ಶಿಕ್ಷಕ ಹುದ್ದೆಗೆ ನೇಮಕಾತಿ ನಡೆಸಲಾಗುತ್ತಿದೆ. ಆಸಕ್ತರು ಈಗಲೇ ಅಪ್ಲೈ ಮಾಡಿ.

ಭತ್ತ ದಲ್ಲಿ ಬೆಂಕಿರೋಗಕ್ಕೆ ಕಾರಣಗಳು ಮತ್ತು ನಿರ್ವಹಣೆ

1.ನಮ್ಮ ರಾಜ್ಯದಲ್ಲಿ ಭತ್ತಕ್ಕೆ ಬರುವ ರೋಗಗಳಲ್ಲಿ ಅತೀ ಹೆಚ್ಚು ತೀವ್ರವಾದ ರೋಗವೆಂದರೆ ಬೆಂಕಿ ರೋಗ.ಇದರಿಂದ ನೂರಕ್ಕೆ ನೂರರಷ್ಟು ನಷ್ಟ ಹೊಂದಬಹುದು.

Translate »
Scroll to Top