ಆರೋಗ್ಯ

ತೊನ್ನು ರೋಗಕ್ಕೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವಿದೆ : ಡಾ.ಥಾಮಸ್ ಪ್ರಸನ್ನ ರಾಜ್

ಬೆಂಗಳೂರು: ತೊನ್ನು ಸಮಸ್ಯೆಯನ್ನು ಅತ್ಯಾಧುನಿಕ ಚಿಕಿತ್ಸೆ ಮೂಲಕ ಗುಣಪಡಿಸುವ ಸೌಲಭ್ಯವಿದೆ. ಯಾರು ತೊನ್ನು ರೋಗದಿಂದ ಮಾನಸಿಕವಾಗಿ ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದು ಕಾರ್ಯಕ್ರಮದಲ್ಲಿ ಇ.ಎಸ್.ಐ ಮಾದರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಥಾಮಸ್ ಪ್ರಸನ್ನ ರಾಜ್ ಹೇಳಿದ್ದಾರೆ.

ಕೆಸಿ ಜನರಲ್ ಹಾಸ್ಪಿಟಲ್​​ನಲ್ಲಿ ಅಮಾನವೀಯ ಘಟನೆ; ಐಸಿಯುನಲ್ಲಿ ಇದ್ದ ವ್ಯಕ್ತಿಗೆ ರಕ್ತ ಬರುವ ಹಾಗೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರು: ಕೆಸಿ ಜನರಲ್ ಹಾಸ್ಪಿಟಲ್( KC General Hospital) ನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಐಸಿಯು(ICU)ನಲ್ಲಿ ಇದ್ದ ವ್ಯಕ್ತಿಗೆ ನಿನ್ನೆ(ಮೇ.೨೪) ರಾತ್ರಿ ರಕ್ತ ಬರುವ ಹಾಗೆ ಆಸ್ಪತ್ರೆಯ ಸಿಬ್ಬಂದಿ ಥಳಿಸಿದ್ದಾನೆ. ನೆಲಮಂಗಲ(Nelamangala) ಮೂಲದ ವೆಂಕಟೇಶ್ ಎಂಬುವವರು ವಿಷ ಸೇವಿಸಿ ಐಸಿಯು ವರ್ಡ್ಮ ಸೇರಿದ್ದರು. ಈ ವೇಳೆ ಆಸ್ಪತ್ರೆಯ ವರ್ಡ್a ಬಾಯ್ ಧನಂಜಯ್ ಎಂಬಾತ ಇಗ್ಗಾ ಮುಗ್ಗ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಚಿಕಿತ್ಸೆ ವೇಳೆ ಕೂಗಾಡಿದ ಎನ್ನುವ ಕಾರಣಕ್ಕೆ ಥಳಿತ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಬೇಜವಾಬ್ದಾರಿತನದ ವಿರುದ್ಧ ಗಾಯಾಳು ವೆಂಕಟೇಶ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶತಕ ದಾಟಿದ ಮಂಗನ ಕಾಯಿಲೆ ಪ್ರಕರಣ: ಹೆಚ್ಚಿದ ಆತಂಕ

ಸಿದ್ದಾಪುರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ 108 ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ಡಿ) ಪ್ರಕರಣಗಳು ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಹಿರಿಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕಾಲರಾ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಹಿರಿಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ‍ಸರ್ಕಾರಿ ಆಸ್ಪತ್ರೆಯ ಔಷಧಿ ಮೇಲೆ ವೆಟನರಿ ಲೈಸೆನ್ಸ್ಲೇಬಲ್‌; ರೋಗಿಗಳಲ್ಲಿ ಹೆಚ್ಚಿದ ಆಂತಕ!

ಬೆಂಗಳೂರು: ಇತ್ತೀಚೆಗೆ ರ್ನಾ ಟಕದ ರ್ಕಾ ರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ರೋಗಿಗಳಿಗೆ ನೀಡಲಾದ ಕೆಲವು ಔಷಧಿಗಳ ಮೇಲೆ ಪಶು ಸಂಗೋಪನಾ ಪಶುವೈದ್ಯಕೀಯ ವಿಜ್ಞಾನ(ಎಎಚ್ವಿಎಸ್) ಎಂಬ ಲೇಬಲ್ಗಳನ್ನು ನೋಡಿ ಆಘಾತಗೊಂಡಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆಯು ಇದು ಕೇವಲ ಲೋಗೋ ಸಮಸ್ಯೆ. ವಾಸ್ತವವಾಗಿ ಔಷಧಗಳು ಮಾನವ ಬಳಕೆಗೆ ಯೋಗ್ಯ ಎಂದು ಹೇಳಿದೆ.

ಮೆದುಳು ತಿನ್ನುವ ಅಮೀಬಾ!: ಅಪರೂಪದ ಸೋಂಕಿನಿಂದ ಮಗು ಸಾವು!

ತಿರುವನಂತಪುರಂ: ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಮಗುವೊಂದು ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾಗಿದೆ. ಕಲುಶಿತ ನೀರಿನಲ್ಲಿ ಪತ್ತೆಯಾದ ಅಮೀಬಾದಿಂದ ಉಂಟಾದ ಸೋಂಕಿನಿಂದ ಮಗು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಅಮೀಬಾವನ್ನು ಮೆದುಳು ತಿನ್ನುವ ಅಮೀಬಾ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

ಮೆದುಳು ಕಾರ್ಯನಿರ್ವಹಣೆ ವಲಯದಲ್ಲಿ ಹಲವಾರು ವಿನೂತನ ಪ್ರಯೋಗಗಳು ನಡೆಯುತ್ತಿವೆ – ನರರೋಗ ತಜ್ಞ ಡಾ.ತಕಯೋಮಿ ತೈರಾ

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಮೆದುಳಿಗೆ ಸೂಕ್ತ ಚಿಕಿತ್ಸೆ ನೀಡುವ ತಂತ್ರಜ್ಞಾನದಲ್ಲಿ ಪ್ರಗತಿಯಾಗಿದ್ದು, “ಮೆದುಳು ಕಾರ್ಯನಿರ್ವಹಣೆ” ವಲಯದಲ್ಲಿ ಹಲವಾರು ವಿನೂತನ ಪ್ರಯೋಗಗಳು ನಡೆಯುತ್ತಿವೆ ಎಂದು ಜಪಾನ್ ನ ಖ್ಯಾತ ನರರೋಗ ತಜ್ಞ ಡಾ.ತಕಯೋಮಿ ತೈರಾ ಹೇಳಿದ್ದಾರೆ.

West Nile Fever: ಕೇರಳದಲ್ಲಿ ಹೆಚ್ಚುತ್ತಿದೆ ವೆಸ್ಟ್ ನೈಲ್ ಜ್ವರ, ಮೈಸೂರಿನಲ್ಲಿ ಹೆಚ್ಚಿದ ಆತಂಕ

ಮೈಸೂರು: ನೆರೆಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ (West Nile Fever) ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿದ್ದು, ಆ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದೆ. ಮೈಸೂರು (Mysuru) ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಎಚ್ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ನಲ್ಲಿ (Bavali Check Post) ಆರೋಗ್ಯಾಧಿಕಾರಿಗಳ ತಪಾಸಣೆ ಹಾಗೂ ಜನಜಾಗೃತಿ ಮುಂದುವರಿದಿದೆ.

ನವಜಾತ ಶಿಶುವಿಗೆ ಆರು ತಿಂಗಳ ವಯಸ್ಸಿನವರೆಗೆ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನು ಕೊಡಬೇಡಿ: ಡಾ ವೈ ರಮೇಶ ಬಾಬು

ಬಳ್ಳಾರಿ: ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ ಆರು ತಿಂಗಳು ವಯಸ್ಸು ತುಂಬುವವರೆಗೂ ಬಾಲ್ಯದಲ್ಲಿ ಮಗುವಿನ ಸದೃಡ ಆರೋಗ್ಯಕ್ಕೆ ಕಾರಣವಾದ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನು ಮಕ್ಕಳಿಗೆ ಕೊಡಬೇಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ವೈ ರಮೇಶ್ ಬಾಬು ಮನವಿ ಮಾಡಿದರು.

ಉತ್ತರ ಕನ್ನಡ: ಸಿದ್ದಾಪುರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಮತ್ತೋರ್ವಬಾಲಕಿ ಸಾವು

ಸಿದ್ದಾಪುರ: ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ಡಿ) ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐದು ರ್ಷಿದ ಬಾಲಕಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ.

Translate »
Scroll to Top