ಬೆಂಗಳೂರು : ಗೋಕಾಕ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರ ತಡೆಯಾಜ್ಞೆ ನೀಡಿದೆ.
ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ನೋಟೀಸ್ ಜಾರಿಮಾಡಿದೆ. ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ದ್ವಿ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಶಿವಾನಂದ ನಾಯಕವಾಡಿ ಅವರಿಂದ ತೆರವಾದ ಸ್ಥಾನಕ್ಕೆ ಬೆಳಗಾವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ.ಕಲ್ಲಿಲ್ಲೋಕರ ಅವರನ್ನು ನಿಯೋಜನೆ ಮಾಡಲಾಗಿತ್ತು.
ವಿವಾದಿತ ಅಧಿಕಾರಿ ಎಂದು ಬಿಂಬಿಸಿದ್ದ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೇ ನ್ಯಾಯಾಧೀಕರಣ ನೋಟಿಸ್ ಜಾರಿ ಮಾಡಿದೆ. ಗೋಕಾಕ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತು ಸರ್ಕಾರ ಆದೇಶ ಹೊರಡಿಸಿತ್ತು. ದಕ್ಷ ಅಧಿಕಾರಿಯ ವರ್ತನೆಯ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.
ತಮ್ಮ ಅಮಾನತು ಆದೇಶ ಪ್ರಶ್ನಿಸಿ ಶಿವಾನಂದ ನಾಯಿಕವಾಡಿ IFS ರವರು ಸಿಎಟಿ ಮೊರೆಹೋಗಿದ್ದರು. ಕೊನೆಗೂ ನ್ಯಾಯಾಲಯ ನ್ಯಾಯ ಒದಗಿಸಿರುವುದು ಪ್ರಶಂಸನೀಯ.