ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ. ನಾರಾಯಣಸ್ವಾಮಿ ಆಯ್ಕೆ

ದೇವನಹಳ್ಳಿ,ಡಿ,28 : ಪಟ್ಟಣ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆ ಸದಸ್ಯರು ಒಮ್ಮತದಿಂದ 1 ನೇ ವಾರ್ಡ್ ನ ಸದಸ್ಯರಾದ ಸಿ. ನಾರಾಯಣಸ್ವಾಮಿ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೂಡಿದ ಒಮ್ಮತದಂತೆ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಸಿ. ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ , ಭರವಸೆಗಳನ್ನು ಈಡೇರಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು . ಪಟ್ಟಣದಲ್ಲಿ ಕುಡಿಯುವ ನೀರು , ಬೀದಿದೀಪಗಳು , ಒಳಚರಂಡಿ ವ್ಯವಸ್ಥೆ ರಸ್ತೆಗಳು , ಸೇರಿದಂತೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಬೇಕಾಗಿದೆ . ಎಲ್ಲಾ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸಿ. ನಾರಾಯಣಸ್ವಾಮಿ ಮಾತನಾಡಿ, ಸತತವಾಗಿ 8 ವರ್ಷಗಳ ಕಾಲ ಪುರಸಭೆಯಲ್ಲಿ ಆಡಳಿತವಿಲ್ಲದೆ ಪಟ್ಟಣ ಅಭಿವೃದ್ಧಿಯಿಂದ ವಂಚಿತವಾಗಿದೆ. ಜೆಡಿಎಸ್ ಮೇಲೆ ವಿಶ್ವಾಸವಿಟ್ಟಿರುವ ಜನತೆ 13 ಸ್ಥಾನಗಳಲ್ಲಿ ಪಕ್ಷಕ್ಕೆ ಪುರಸಭೆಯ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ ಜನರು ನೀಡಿರುವ ಅವಕಾಶವನ್ನು ಮೇಲೆ ಎಲ್ಲಾ ಸದ್ಬಳಕೆ ಮಾಡಿಕೊಂಡು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು . ಯಾವುದೇ ವಾರ್ಡಿಗೂ ತಾರತಮ್ಯ ಮಾಡದೇ ಅಭಿವೃದ್ಧಿಗೆ ಪೂರಕವಾಗಿರುವ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದು ಭರವಸೆ ನೀಡಿದರು .

ಸ್ಥಾಯಿಸಮಿತಿ ಸದಸ್ಯರು : ಭವ್ಯ ಎಸ್. ಮಹೇಶ್ , ಎಂ . ರಾಜಣ್ಣ , ಆರ್ . ಕವಿತಾ ಮುನಿಆಂಜಿನಪ್ಪ , ಎ.ಆರ್‌ . ಹನೀಫುಲ್ಲಾ , ಎಂ . ಭೈರೇಗೌಡ , ಸಿ.ಎಂ. ರಾಮು , ರವಿ , ವಿ . ನಂದಕುಮಾರ್ ಸ್ಥಾಯಿಸಮಿತಿಯ ಸದಸ್ಯರಾಗಿದ್ದಾರೆ. ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ , ಉಪಾಧ್ಯಕ್ಷ ಎಂ . ಕೇಶವಪ್ಪ , ಮುಖ್ಯಾಧಿಕಾರಿ ಮೋಹನ್ ಕುಮಾರ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು ನೂತನವಾಗಿ ಸ್ಥಾಯಿಸಮಿತಿಗೆ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಸದಸ್ಯರನ್ನು ಅಭಿನಂದಿಸಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್ . ಮುನೇಗೌಡ , ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು , ಜಿ.ಎ. ರವೀಂದ್ರ , ಮುಖಂಡರಾದ ಎಸ್.ಆರ್.ಎಸ್ . ಬಸವರಾಜ್‌ , ಎನ್‌. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top