ಬಿಲ್ಲ ರಂಗ ಬಾಷ’ ಸೆಟ್‌ನಲ್ಲಿ ಬುಜ್ಜಿ ಕಾರ್: ಸುದೀಪ್ ಮತ್ತು ಅನೂಪ್ ಬಂಡಾರಿ

ಬಿಲ್ಲ ರಂಗ ಬಾಷ' ಸೆಟ್‌ನಲ್ಲಿ ಬುಜ್ಜಿ ಕಾರ್: ಸುದೀಪ್ ಮತ್ತು ಅನೂಪ್ ಬಂಡಾರಿ

Kannada Nadu
ಬಿಲ್ಲ ರಂಗ ಬಾಷ’ ಸೆಟ್‌ನಲ್ಲಿ ಬುಜ್ಜಿ ಕಾರ್: ಸುದೀಪ್ ಮತ್ತು ಅನೂಪ್ ಬಂಡಾರಿ

‘ಬಿಲ್ಲ ರಂಗ ಬಾಷ’ ಸೆಟ್‌ನಲ್ಲಿ ಬುಜ್ಜಿ ಕಾರ್: ಸುದೀಪ್ ಮತ್ತು ಅನೂಪ್ ಬಂಡಾರಿ

ಕನ್ನಡದ ದೊಡ್ಡ ನಟರದಂಥ ಕಿಚ್ಚ ಸುದೀಪ್ ಅವರು ತುಂಬಾ ಅದ್ಬುತವಾದಂಥ ಚಿತ್ರಗಳಿಂದ ಜನರ ಮನಸನ್ನ ಗೆದ್ದಿರುವಂಥ ಸಾಲು ಸಾಲು ಹಿಟ್ ಸಿನಿಮಾಗಳು ನೀಡಿ ಕನ್ನಡದ ಹೆಮ್ಮೆಯ ನಟ ಹಾಗು ಕನ್ನಡದ ಸ್ವಾತಿ ಮುತ್ತು , ಅಭಿನಯ ಚಕ್ರವರ್ತಿ , ಎಂದು ಅಭಿಮ್, ಅಭಿಮಾನಿಗಳು ಪ್ರೀತಿಯಿಂದ ಇವರನ್ನ ಕರೆಯುತ್ತಾರೆ .
ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಬಹಳ ಬೇಗ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಸದ್ಯ ಸಿನಿಮಾ ಸೆಟ್‌ನಿಂದ ಫೋಟೊವೊಂದು ಲೀಕ್ ಆಗಿ ವೈರಲ್ ಆಗುತ್ತಿದೆ.

 

Kichcha Sudeep's long-delayed Billa Ranga Baasha to go on floors in March -  India Today

ಅನುಪ್ ಭಂಡಾರಿ ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಬಹಳ ಸದ್ದು ಮಾಡ್ತಿದೆ. ‘ಮ್ಯಾಕ್ಸ್’ ಸಕ್ಸಸ್ ಬಳಿಕ ಬರ್ತಿರೋ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆ ಕೂಡ ಹೆಚ್ಚಿದೆ.

ಕಿಚ್ಚನನ್ನು ಚಿತ್ರದಲ್ಲಿ ಬಹಳ ವಿಭಿನ್ನ ಗೆಟಪ್‌ಗಳಲ್ಲಿ ತೋರಿಸುವ ಪ್ರಯತ್ನ ನಡೀತಿದೆ. ಸುದೀಪ್ – ಅನೂಪ್ ಜೋಡಿಯಿಂದ ‘ವಿಕ್ರಾಂತ್ ರೋಣ’ಕ್ಕಿಂತ ಅದ್ಭುತ ಸಿನಿಮಾ ನಿರೀಕ್ಷಿಸಲಾಗುತ್ತಿದೆ. ಚಿತ್ರದಲ್ಲಿ 200 ವರ್ಷಗಳ ಭವಿಷ್ಯದ ಕಥೆಯನ್ನು ಹೇಳುತ್ತಿದ್ದಾರೆ. ಅದಕ್ಕಾಗಿ ಹೊ ಪ್ರಪಂಚವನ್ನೇ ಸೃಷ್ಟಿಸಲಾಗುತ್ತಿದೆ. 2 ಶತಮಾನಗಳ ಬಳಿಕ ಪ್ರಪಂಚ ಹೇಗಿರುತ್ತದೆ? ಜನ ಹೇಗಿರುತ್ತಾರೆ? ತಂತ್ರಜ್ಞಾನ ಹೇಗೆ ಬೆಳೆದಿರುತ್ತದೆ? ಎನ್ನುವುದನ್ನೆಲ್ಲಾ ಕಲ್ಪಿಸಿಕೊಂಡು ಅನೂಪ್ ಸಿನಿಮಾ ಮಾಡುತ್ತಿದ್ದಾರೆ.

ಸದ್ಯ ವೈರಲ್ ಆಗಿರುವು ಫೋಟೊದಲ್ಲಿ ಒಂದಷ್ಟು ಕಾರ್‌ಗಳನ್ನು ನೋಡಬಹುದು. ಈ ಹಿಂದೆ ‘ಕಲ್ಕಿ 2898 AD’ ಚಿತ್ರದಲ್ಲಿ ಬುಜ್ಜಿ ಎನ್ನುವ ವಿಶಿಷ್ಟ ಕಾರ್ ಅನ್ನು ತೋರಿಸಿದ್ದರು. ಅಂಥದ್ದೇ ವಾಹನಗಳನ್ನು ‘ಬಿಲ್ಲ ರಂಗ ಬಾಷ’ ಚಿತ್ರದಲ್ಲೂ ನೋಡಬಹುದು. ಒಟ್ಟಾರೆ ಕಥೆ ನಡೆಯುವ ಲೋಕವೇ ನೋಡುಗರಿಗೆ ಅದ್ಭುತ ಅನುಭವ ನೀಡುವಂತಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";