ಬಳ್ಳಾರಿ,ನ.೨೭: ಬಳ್ಳಾರಿಯ ರಾಯಲ್ಸರ್ಕಲ್ ಸಮೀಪದಲ್ಲಿ ಈಗ್ಗೆ ಮೂರ್ನಾಲ್ಕು ದಿನಗಳ ಹಿಂದೆ ಐಸಿಐಸಿಐ ಬ್ಯಾಂಕ್ನಎಟಿಎಂ ಸೆಕ್ಯೂರಿಟಿ ಗಾರ್ಡ್ನನ್ನುಬರ್ಬರವಾಗಿ ಹತ್ಯೆಗೈದಿದ್ದ ಕೊಲೆಗಾರರನ್ನು ಬಂಧಿಸುವಲ್ಲಿ ಬ್ರೂಸ್ಪೇಟೆ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಮಾಡಿದ ಛತ್ತೀಸ್ಘಡ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲಾ ಎಸ್ಪಿ ಸೈದುಲು ಅಡಾವತ್ ಅವರು ಇಂದು ಸಂಜೆ, ಬ್ರೂಸ್ಪೇಟೆ ಠಾಣೆಯ ಆವರಣದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.೨೩ರಂದು ನಸುಕಿನ ಜಾವ ೨ ರಿಂದ ೩ ಗಂಟೆಯ ಒಳಗಡೆ, ಐಸಿಐಸಿಐ ಬ್ಯಾಂಕ್ನ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ನಾಯ್ಕ್ (೪೩) ಎನ್ನುವವರನ್ನು ಯಾರೋ ದುಷ್ಕರ್ಮಿಗಳು ಕಬ್ಬಿಣದ ರಾಡ್ಗಳಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಬ್ರೂಸ್ಪೇಟೆ ಠಾಣೆಯಲ್ಲಿ ಗುನ್ನೆ ನಂ.೨೨೬/೨೦೨೧, ಸೆಕ್ಷನ್ ೩೦೨ ಐಪಿಸಿ ಪ್ರಕಾರ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು ಎಂದರು. ಈ ಕೊಲೆ ಪ್ರಕರಣ ಬಳ್ಳಾರಿ ಪೊಲೀಸರಿಗೆ ಸವಾಲಾಗಿತ್ತು. ಇದನ್ನು ಬೇಧಿಸಲು ಎಸ್ಪಿ ಸೈದುಲು ಅಡಾವತ್, ಎಎಸ್ಪಿ ಲಾವಣ್ಯ ಬಿ.ಎನ್. ಮಾರ್ಗದರ್ಶನದಲ್ಲಿ, ನಗರ ಡಿವೈಎಸ್ಪಿ ರಮೇಶ್ಕುಮಾರ್ನೇ ತೃತ್ವದಲ್ಲಿ ಬ್ರೂಸ್ಪೇಟೆ ಠಾಣೆ ಇನ್ಸ್ಪೆಕ್ಟರ್ ಆರ್.ನಾಗರಾಜ್, ಕೌಲ್ಬಜಾರ್ ಠಾಣೆಯ ಇನ್ಸ್ಪೆಕ್ಟರ್ಸು ಭಾಶ್ಚಂದ್ರ, ಗಾಂಧಿನಗರ ಠಾಣೆಯ ಇನ್ಸ್ಪೆಕ್ಟರ್ ಹಾಲೇಶ್ ಹಾಗೂ ಎಪಿಎಂಸಿ ಠಾಣೆಯ ಪಿಎಸ್‌ಐ ಪರಶುರಾಮ್ಮ ತ್ತು ಬಳ್ಳಾರಿ ಉಪ ವಿಭಾಗದ ಸಿಬ್ಬಂದಿಯವರ ೪ ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿತ್ತು. ಆರಂಭದಲ್ಲಿ ಈ ಕೊಲೆಯನ್ನು ಪರಿಚಿತರ್ಯಾರೋ ವೈಯುಕ್ತಿಕ ದ್ವೇಷ- ಸೇಡಿನ ಕಾರಣಗಳಿಂದ ಮಾಡಿದ್ದಾರೆ ಎಂದು ಭಾವಿಸಲಾಗಿತ್ತಾದರೂ, ಬ್ಯಾಂಕ್, ಎಟಿಎಂನಲ್ಲಿ ಕಳ್ಳತನದ ಯಾವುದೇ ಪ್ರಯತ್ನಗಳು ನಡೆದಿರಲಿಲ್ಲವಾದುದರಿಂದ ವೈಯುಕ್ತಿಕ ಕಾರಣಕ್ಕಾಗಿ ಕೊಲೆನಡೆದಿರಬಹುದೆಂದು ಭಾವಿಸಿ, ಆ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಅದ್ಯಾವುದೂ ಅಲ್ಲ, ಆ ರೀತಿ ನಡೆದಿಲ್ಲ ಎಂಬುದು ಖಚಿತವಾಗಿ, ಬ್ಯಾಂಕ್ನ ಹಣ ಕದಿಯುವ, ದರೋಡೆ ಮಾಡಲು ಯಾರಾದರೂ ಬಂದಿರಬಹುದೇ? ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಸಿ, ಸಿಸಿಟಿವಿ ಫುಟೇಜ್ಆ ಧಾರ ಮತ್ತಿತರೆ ತನಿಖೆಯ ಅಂಶದಿಂದ, ತಾಂತ್ರಿಕ ಮಾಹಿತಿ ಆಧರಿಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಛತ್ತೀಸ್ಘಡ ರಾಜ್ಯದ ರಾಯಘಡ ಜಿಲ್ಲೆಯ ಮೂಲ ನಿವಾಸಿಗಳಾಗಿರುವ, ಹಾಲಿ ಬಳ್ಳಾರಿ ತಾಲ್ಲೂಕಿನ ಕಾರೇಕಲ್ಲು ಗ್ರಾಮದಲ್ಲಿ ಕಳೆದ ಏಳೆಂಟು ತಿಂಗಳಿಂದ ವಾಸಿಸುತ್ತಿದ್ದ ಮೂವರು ಯುವಕರನ್ನು, ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಪ್ರಕರಣ ಬಯಲಾಗಿದೆ ಎಂದರು. ಬಂಧಿತ ಮೂವರು ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ಮೂವರು ಆರೋಪಿಗಳನ್ನು ಇಂದು ಪೂರ್ವಾಹ್ನ ಕಾರೇಕಲ್ಲು ಗ್ರಾಮದಲ್ಲಿ ಬಂಧಿಸಲಾಗಿದ್ದು, ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಎಸ್ಪಿ ಸೈದುಲು ಅಡಾವತ್ ವಿವರಿಸಿದರು. ಒಂದೇ ಕುಟುಂಬದವರು: ಬಂಧಿತ ಮೂವರು ಆರೋಪಿಗಳಾದ ಛತ್ತೀಸ್ಘಡ ರಾಜ್ಯದ ರಾಯಘಡ ಜಿಲ್ಲೆಯ ಆಜಾದ್ಸಿಂಗ್ ಅಲಿಯಾಸ್ಅ ಜಾದ್ಸಿಂಗ್ ಬಂಜಾರ ಅಲಿಯಾಸ್ರಾ ಜು ಅಲಿಯಾಸ್ ರಿಂಕು, ಅಂಗದಸಿಂಗ್ಬಂ ಜಾರ, ಜಗತ್ಸಿಂಗ್ ಅಲಿಯಾಸ್ಜ ಗತ್ಸಿಂಗ್ ಬಂಜಾರ ಎಂಬುವವರು ಒಂದೇ ಕುಟುಂಬದವರಾಗಿದ್ದಾರೆ ಎಂದು ಸೈದುಲು ಅಡಾವತ್ ತಿಳಿಸಿದರು.
ದರೋಡೆಗೆಂದು ಬಂದಿದ್ದರು: ಈಗ್ಗೆ ೮-೧೦ ತಿಂಗಳ ಹಿಂದೆ ಛತ್ತೀಸ್ಘಡದಿಂದ ಬಳ್ಳಾರಿ ತಾಲ್ಲೂಕಿನ ಕಾರೇಕಲ್ಲು ಗ್ರಾಮಕ್ಕೆ ಬಂದಿದ್ದ ಆರೋಪಿಗಳು ಖಾಸಗಿಯಾಗಿ ಕೂಲಿ ಕೆಲಸ ಮತ್ತಿತರೆ ಕೆಲಸ ಮಾಡಿಕೊಂಡಿದ್ದರು. ಬಳ್ಳಾರಿಗೆ ಆಗಾಗ್ಗೆ ಬಂದು, ಯಾವುದಾದರೂ ಬ್ಯಾಂಕ್ಅಥವಾ ಎಟಿಎಂನಲ್ಲಿ ಕಳುವು ಮಾಡಲು ಪ್ಲಾನ್ ಮಾಡಿದ್ದರು. ಅಂತೆಯೇ ನ.೨೩ ರಂದು ಬಳ್ಳಾರಿಗೆ ಬಂದು ಎಟಿಎಂಗೆ ತೆರಳಿ, ಗಾರ್ಡ್ ಬಸವರಾಜ್ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ. ರಕ್ತದ ಓಕಳಿ ಹರಿದಿದ್ದರಿಂದ ಗಾಬರಿಗೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದರು. ಬಂಧಿತ ಆರೋಪಿಗಳು ದಿಢೀರ್ಹ ಣವನ್ನು ಮಾಡುವ ಉದ್ದೇಶದಿಂದ ಕಳ್ಳತನ ಅಥವಾ ಸುಲಿಗೆ ಮಾಡುವ ಉದ್ದೇಶದೊಂದಿಗೆ ಬ್ಯಾಂಕ್ನ ಎಟಿಎಂ ಬಳಿ ಆಗಮಿಸಿದ್ದರೆಂದು, ಇಬ್ಬರು ಆರೋಪಿಗಳು ಎಟಿಎಂ ಒಳಗೆ ತೆರಳಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಓರ್ವ ಆರೋಪಿಯು ಹೊರಗಡೆ ನಿಂತು ಯಾರಾದರೂ ಬರುವರೇ ಎಂದು ಗಮನಿಸುತ್ತಿದ್ದನು ಎಂದು ತಿಳಿಸಿದ್ದಾರೆ. ಈ ಮೂವರು ಆರೋಪಿಗಳನ್ನು ಡಿಎಸ್ಪಿ ರಮೇಶ್ ಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಆರ್.ನಾಗರಾಜ್, ಪಿಎಸ್‌ಐ ಪರಶುರಾಮ್, ಹೆಚ್ಸಿಗಳಾದ ಸಿದ್ದಯ್ಯ, ಸರ್ದಾರ್ ಮುಜಾಹಿದ್‌ಅಲಿ, ಆನಂದ್ರೆಡ್ಡಿ, ಪಿಸಿಗಳಾದ ರಾಮಲಿಂಗ, ಹದ್ದಿನಗೋರೆಂಟಿ, ಶಿವರಾಜಕುಮಾರ್, ಸುರೇಶ್, ಗುರುಬಸವರಾಜ್, ವಿನಯಕುಮಾರ್, ಅಯ್ಯಪ್ಪ, ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಪ್ರವೀಣ ಅವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಇವರ ಈ ಕಾರ್ಯವನ್ನು ಎಸ್ಪಿ ಸೈದುಲು ಅವರು ಶ್ಲಾಘಿಸಿದ್ದು, ನಗದು ಬಹುಮಾನ ನೀಡಿದ್ದಾರೆ.