ಬ್ರಾಂಡ್ ಬೆಂಗಳೂರು ಸಮ್ಮೇಳನ ಉದ್ಘಾಟಿಸಿದ ಡಿಕೆಶಿ

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಬ್ರಾಂಡ್ ಬೆಂಗಳೂರು ಸಮ್ಮೇಳನ”  ನಗರದಲ್ಲಿ ಅರ್ಥಪೂರ್ಣವಾಗಿ ಸೋಮವಾರ ನಡೆಯಿತು. ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮತ್ತು ಸಮ್ಮೇಳನವನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ  ಡಿ.ಕೆ ಶಿವಕುಮಾರ್ ರವರು ಉದ್ಘಾಟಿಸಿದರು.

ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಆಯೋಜನೆ:

 

ಬಿಬಿಎಂಪಿಯ ಆರೋಗ್ಯ ವಿಭಾಗ, ಘನತ್ಯಾಜ್ಯ ನಿರ್ವಹಣಾ ವಿಭಾಗ ಇಂಜಿನಿಯರಿಂಗ್ ಮತ್ತು ಇನ್ಫ್ರಾ, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಬಿ.ಎಂ.ಆರ್.ಸಿ.ಎಲ್, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, DULT, ಬಿಎಂಟಿಸಿ ಇಲಾಖೆಗಳಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಿಲಾಗಿತ್ತು. 

ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಭೆ:

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಜ್ನಾನ ಜ್ಯೋತಿ ಸಭಾಂಗಣದ ಬೋರ್ಡ್ ರೂಂ ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ನಿವೃತ್ತ ನರಾಭಿವೃದ್ಧಿ ಇಲಾಕೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಮತ್ತು ಮಾಜಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಇನ್ನಿತರೆ ಹಿರಿಯ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಅಭಿಪ್ರಾಯ/ಸಲೆಗಳನ್ನು ಪಡೆದುಕೊಂಡರು.

ಬೆಂಗಳೂರು ಇತಿಹಾಸ ಕುರಿತು ವಿವರಣೆ:

 

ನಾಡಪ್ರಭು ಕೆಂಪೇಗೌಡರು ಕಟ್ಟಿರುವಂತಹ ಬೆಂಗಳೂರು ನಗರ ನಡೆದು ಬಂದ ಹಾದಿಯ ಕುರಿತು ಜಗನ್ನಾಥ್ ಮತ್ತು ಜಯರಾಮ್ ರಾಯಪುರ ರವರು ಬ್ರ್ಯಾಂಡ್ ಬೆಂಗಳೂರು ಸಮ್ಮೇಳನದಲ್ಲಿ ಉಪಸ್ಥಿತರಿದ್ದವರಿಗೆ ಸವಿಸ್ತಾರವಾಗಿ  ವಿವರಣೆ ನೀಡಿದರು.

ಶೈಕ್ಷಣಿಕ ಪಾಲುದಾರರಿಗೆ ಸನ್ಮಾನ:

          ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ 8 ವಿವಿಧ ವಿಷಯಗಳ ಕುರಿತು ಬಂದಂತಹ ಸಲಹೆಗಳನ್ನು ಬೇರ್ಪಡಿಸಿ ಕರಡು ವರದಿಯನ್ನು ನೀಡಿರುವ ವಂತಹ ಶೈಕ್ಷಣಿಕ ಪಾಲುದಾರರು ಮತ್ತು ಎಲ್ಲಾ 8 ವಿಯಗಳ ಕುರಿತಾದ ಒಟ್ಟಾರೆ ವರದಿಯನ್ನು ಸಿದ್ದಪಡಿಸುತ್ತಿರುವ ಜ್ಞಾನ ಪಾಲುದಾರ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ರವರು ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.

          8 ವಿವಿಧ ವಿಷಯಗಳ ಕುರಿತು ಸಂವಾದ:

 

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬರುವ 8 ವಿವಿಧ ವಿಷಯಗಳಾದ ಸುಗಮ ಸಂಚಾರ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು, ಜಲಸುರಕ್ಷ ಬೆಂಗಳೂರು, ಶೈಕ್ಷಣಿಕ ಬೆಂಗಳೂರು ಕುರಿತು ಸಮ್ಮೇಳನದ ಉದ್ಘಾಟನೆ ಮುಗಿದ ನಂತರ 8 ಪ್ರತ್ಯೇಖ ಕೊಠಡಿಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿಂದತೆ ನೋಡಲ್ ಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಯ ಪಾಲುದಾರರು ಹಾಗೂ ನುರಿತ ತಜ್ಞರು ಸೇರಿ ಸಂವಾದದಲ್ಲಿ ಚರ್ಚಿಸಿದರು. ಈ ಸಂವಾದ ನಡೆಯುವ ವೇಳೆ ಡಿಸಿಎಂ ಶಿವಕುಮಾರ್ ಅವರು ಎಲ್ಲಾ 8 ವಿವಿಧ ವಿಷಯಗಳ ಕುರಿತು ಸಂವಾದ ನಡೆಸುತ್ತಿರುವ ಕೊಠಡಿಗಳಿಗೆ ಭೇಟಿ ನೀಡಿ ವರದಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇಂದಿನ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ವಿಷಯ ತಜ್ಞರು 8 ವಿಷಯಗಳ ಮೇಲೆ ಸವಿಸ್ತಾರವಾಗಿ ಚರ್ಚಿಸಿದ್ದು, ಅವರು ನೀಡುವ ವರದಿಯನ್ನು ಬೆಂಗಳೂರು ವಿಶ್ವ ವಿದ್ಯಾಲಯವು ಮತ್ತೊಮ್ಮೆ ಪರಿಶೀಲಿಸಿ ಎಲ್ಲಾ ಅಭಿಪ್ರಾಯ/ಸಲೆಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top