ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದುಷ್ಕರ್ಮಿಯಿಂದ 6 ಬಾರಿ ಚಾಕು ಇರಿತ! ಆಸ್ಪತ್ರೆಗೆ ದಾಖಲು | ಆರೋಗ್ಯ ಸ್ಥಿತಿ ಗಂಭೀರ

Kannada Nadu
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದುಷ್ಕರ್ಮಿಯಿಂದ 6 ಬಾರಿ ಚಾಕು ಇರಿತ!  ಆಸ್ಪತ್ರೆಗೆ ದಾಖಲು | ಆರೋಗ್ಯ ಸ್ಥಿತಿ ಗಂಭೀರ

ಮುಂಬೈ: ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ದುಷ್ಕರ್ಮಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾದಲ್ಲಿರುವ ಅವರ ನಿವಾಸದೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗುರುವಾರ ಮುಂಜಾನೆ 2:30 ರ ಸುಮಾರಿಗೆ ನಟ ತನ್ನ ಇತರ ಕುಟುಂಬ ಸದಸ್ಯರೊಂದಿಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮುಂಬೈನ ಬಾಂದ್ರಾ ದಲ್ಲಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಗುರುವಾರ ಮುಂಜಾನೆ 2:30 ರ ಸುಮಾರಿಗೆ ದರೋಡೆಕೋರನೊಬ್ಬ ನುಗ್ಗಿ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ಮಾಡಿ ಬರೋಬ್ಬರಿ ಆರು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಟನ ಬೆನ್ನುಮೂಳೆ ಸೇರಿದಂತೆ ದೇಹದ ಅನೇಕ ಕಡೆಗಳಲ್ಲಿ ಚಾಕುವಿನಿಂದ ಇರಿದ ಗಾಯಗಳಾಗಿವೆ. ಈ ವೇಳೆ ಮನೆಯವರು ಎಚ್ಚರಗೊಂಡ ಆಗಂತುಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆ ಹಾಗೂ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗುತ್ತಿದೆ.

ಸದ್ಯ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ತಕ್ಷಣ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದಷ್ಟು ಬೇಗ ದುಷ್ಕರ್ಮಿಯನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಪೊಲೀಸರು ದಾಳಿಕೋರನನ್ನು ಹಿಡಿಯಲು ಅನೇಕ ತಂಡಗಳನ್ನು ರಚಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ‘ಕಳ್ಳರು 2-3 ಬಾರಿ ಹಲ್ಲೆ ಮಾಡಿದ್ದಾರೆ. ನಾವು ಇದನ್ನು ತನಿಖೆ ನಡೆಸುತ್ತಿದ್ದೇವೆ. ಮುಂಬೈ ಕ್ರೈಮ್ ಬ್ರ‍್ಯಾಂಚ್ ಕೂಡ ತನಿಖೆ ನಡೆಸುತ್ತಿದೆ. ಮುಂಜಾನೆ 3 ಗಂಟೆಗೆ ಸೈಫ್ ಅವರನ್ನು ಲೀವಾತಿ ಆಸ್ಪತ್ರೆಗೆ ಕರೆತರಲಾಗಿದೆ. ಅವರಿಗೆ ಆರು ಗಾಯಗಳಾಗಿದ್ದು, ಎರಡು ಕಡೆ ತುಂಬಾನೇ ಗಂಭೀರ ಗಾಯವಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆನ್ನಿನ ಭಾಗದಲ್ಲಿ ಕಳ್ಳರು ಇರಿದ ಚಾಕು ತುಂಬಾನೇ ದೊಡ್ಡ ಗಾಯವನ್ನೇ ಮಾಡಿದೆ ಎನ್ನಲಾಗಿದೆ. ಬೆನ್ನಿನ ಮೂಳೆಗೆ ತೊಂದರೆ ಆಗಿದೆಯೇ ಎನ್ನುವ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಸದ್ಯ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎನ್ನಲಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";