ಕುಷ್ಟಗಿ: ಪಟ್ಟಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಪ್ರತಿ
ತಿಂಗಳಿನ ಕೊನೆಯ ಸೋಮವಾರದಂದು ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವಿರುತ್ತದೆ.
ಇಂದು ಈ ಶಿಬಿರಕ್ಕೆ ಆಗಮಿಸಿದ ತಾಲೂಕಾ ದಂಡಾಧಿಕಾರಿಗಳಾದ ಎಂ.ಸಿದ್ದೇಶ್ ಹಾಗೂ ವೈದ್ಯರಾದ ಡಾ. ಕೆ.ಎಸ್ ರೆಡ್ಡಿ , ಡಾ.ರವಿಕುಮಾರ್ ದಾನಿ ಅವರು ರಕ್ತದಾನ ಮಾಡುವ ಮೂಲಕ ಇತರರಿಗೂ ರಕ್ತದಾನ ಮಾಡಲು ಸಲಹೆ ನೀಡಿದರು. ಇದೆ ಸಂದರ್ಭದಲ್ಲಿ ಕುಷ್ಟಗಿ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ವಿಜಯ್ ಕುಮಾರ್ ಬಿರಾದಾರ್, ಉಪಾಧ್ಯಕ್ಷರಾದ ಬಸವರಾಜ್ ವಸ್ತ್ರದ,ಸಹ ಕಾರ್ಯದರ್ಶಿ ಆರ್.ಟಿ ಸುಬಾನಿ, ಸದಸ್ಯರಾದ ಮಾಂತಯ್ಯ ಅರಳೆಲೆಮಠ, ಮಲ್ಲಿಕಾರ್ಜುನ ಬಳಿಗಾರ್, ಅಪ್ಪಣ್ಣ ನವಲೇ, ಬಾಲಾಜಿ ಬಳಿಗಾರ್,ದೇವೇಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.