ಮೈಸೂರು: ಮೈಸೂರಿನಲ್ಲಿ ನಮ್ಮ ಬೆಂಬಲಿತ ಮತದಾರರಿಗೆ ಸಿಂಗಲ್ ಓಟ್ ಮಾಡಲು ಹೇಳಿದ್ದೇವೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಮೈಸೂರಲ್ಲಿ ಮಾತಾಡಿದ ಅವ್ರು ಎರಡನೇ ಪ್ರಾಶಸ್ತ್ಯ ಮತವನ್ನ ಯಾರಿಗೂ ಹಾಕಲ್ಲ.ನಾವು ಯಾರೊಂದಿಗೂ,ಯಾವ ಕ್ಷೇತ್ರದಲ್ಲೂ ಹೊಂದಾಣಿಕೆ ಮಾಡಿಕೊಳ್ಳಲ್ಲ.
ನಮ್ಮ ಬೆಂಬಲಿತರಿಗೆ ಸಿಂಗಲ್ ವೋಟ್ ಹಾಕಲು ಸೂಚನೆ ಕೊಟ್ಟಿದ್ದೇನೆ. ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.