ಮರಿಯಮ್ಮನಹಳ್ಳಿ: ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಪಡೆಯವುಕ್ಕಾಗಿ ಎಲ್ಲಾರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ರಾಜನಹಳ್ಳಿಯ ವಾಲ್ಮೀಕಿಯ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮಿಜಿ ರವರು ಹೇಳಿದರು.ಅವರು ಗುರುವಾರ ಪಟ್ಟಣದ 9ನೇ ವಾರ್ಡಿನ ವಾಲ್ಮೀಕಿ ಸಮುದಾಯ ಭವನದಲ್ಲಿ ವಾಲ್ಮೀಕಿ ಜಾತ್ರ ಮೋಹತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಇಡೀ ನಮ್ಮ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯ 70 ರಿಂದ 80 ಲಕ್ಷ ಸರಿ ಸುಮಾರು ಜನ ಸಂಖ್ಯೆಯನ್ನು ಹೊಂದಿದೆ. ಇಷ್ಟೊಂದು ದೊಡ್ಡ ಮಟ್ಟದ ಸಮುದಾಯವನ್ನು ರಾಜಕಾರಣಿಗಳು ತಮ್ಮ ಓಟ್ ಬ್ಯಾಂಕ್ ರಾಜಕರಾಣಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ ಎಂದರು.ಇಡೀ ರಾಜ್ಯದ 28 ಜಿಲ್ಲೆಗಳಲ್ಲಿ ಅತಿ ಹೆಚ್ಚು ನಮ್ಮ ಸಮೂದಾಯ ಇದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಸರ್ಕಾರ ಬಂದು ಒಂದೇ ವಾರದಲ್ಲಿ 7.5 ಮೀಸಲಾತಿಯನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ ಆದ್ರೆ ಅವರು ಬಿಜೆಪಿ ಸರ್ಕಾರ ಬಂದು ಇಷ್ಟು ದಿನಗಳು ಕಳೆದರೂ ಮೀಸಲಾಯಿಯ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ವಾಲ್ಮೀಕಿ ಶ್ರೀಗಳು ಅಕ್ರೋಶ ವ್ಯಕ್ತಪಡಿಸಿದರು.
ಇವತ್ತಿನ ನಮ್ಮನ್ನು ಆಳುವ ಸರ್ಕಾರಗಳಿಗೆ ನಮ್ಮ ಶಕ್ತಿ ಸಮಾರ್ಥ್ಯ ಏನು ಅನ್ನುವುದನ್ನ ತೊರಿಸಬೇಕಿದೆ ಆ ನಿಟ್ಟಿನಲ್ಲೆ ನಾವೆಲ್ಲಾರೂ ಒಗ್ಗಟ್ಟನ್ನು ಸರ್ಕಾರಗಳಿಗೆ ತೋರಿಸಬೇಕಿದೆ.ಇಂದು ಸಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ನಾವು ಒಗ್ಗಟ್ಟನ್ನು ಪ್ರದರ್ಶನ ಮಾಡದೇ ಹೋದರೆ ನಾವು ಮೂಲೆ ಗುಂಪಾಗುತ್ತೇವೆ ಎಂದರು.ರಾಜನಹಳ್ಳಿಯಲ್ಲಿ ನಡೆಯುವ ಫೆ.8 ಮತ್ತು 9ಕ್ಕೆ ವಾಲ್ಮೀಕಿ ಜಾತ್ರೆಯಲ್ಲಿ ಎಲ್ಲಾರೂ ಭಾಗವಹಿಸಿ ನಮ್ಮಶಕ್ತಿ ಪ್ರದರ್ಶನವನ್ನು ಇವತ್ತಿನ ಸರ್ಕಾರಕ್ಕೆ ತೋರಿಸಬೇಕಿದೆ.ಇದೆ ವೇಳೆ ವಾಲ್ಮೀಕಿ ಸಮುದಾಯದಿಂದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಾತ ಮಂಜಮ್ಮ ಜೋಗತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ. ಅಬಣ್ಣನವರಿಗೆ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸತ್ಯನಾರಾಯಣ, ಕಚಾಟಿ ಹುಲುಗಪ್ಪ, ಎಸ್.ನವೀನ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಗೋವಿಂದರ ಪರುಶುರಾಮ, ಶಿಕ್ಷಕ ಬಿ.ಪರುಶುರಾಮ್, ಹನುಮಂತಪ್ಪ, ಪೂಜಾರ್ ಪ್ರಕಾಶ, ಬಾಪುರಿ ಅಂಜಿನಿ, ಬಂಗಾರು ಮಂಜುನಾಥ, ಮರಡಿ ಹನುಮಂತ, ರೋಗಾಣಿ ಮಂಜುನಾಥ, ದಾಸರ ಮಲ್ಲೇಶ್, ರಾಜಪ್ಪ, ಓಬಪ್ಪ, ತಳವಾರ್ ಬಸವರಾಜ, ಏರ್ ಟೆಲ್ ರಾಘವೇಂದ್ರ, ನಾಗೇಶ್ ಇತರರಿದ್ದರು.