ಬೆಂಗಳೂರು: ಭಾರತದಲ್ಲಿನ ಐಷಾರಾಮಿ ವಾಚ್ ಗಳ ಪ್ರಮುಖ ವಿತರಕರಾಗಿರುವ ಬಿಝೊಟಿಕೊ ಗ್ರೂಪ್ ಪ್ರಸಿದ್ಧ ಸ್ವಿಸ್ ವಾಚ್ ತಯಾರಿಕಾ ಕಂಪನಿ ಆಗಿರುವ ರೋಮರ್ ನ ಸೊಗಸಾದ ವಾಚ್ ಸಂಗ್ರಹ ಮೆಕ್ಯಾನೋ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಬಿಝೊಟಿಕೊ ಸಂಸ್ಥೆಯು ಅತ್ಯುತ್ತಮ ಸ್ವಿಸ್ ಕರಕುಶಲತೆ ಹೊಂದಿರುವ ವಾಚ್ ಸಂಗ್ರಹವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಪ್ರಸ್ತುತ ರೋಮರ್ ಆಫ್ ಸ್ವಿಟ್ಜರ್ಲೆಂಡ್ ಎಂಬ ಹೆಸರನ್ನು ಹೊಂದಿರುವ ಈ ಸ್ವಿಸ್ ವಾಚ್ ತಯಾರಕ ಕಂಪನಿಯ ಮೂಲಕ್ಕೆ ಹೋದರೆ ಕಂಪನಿಯ ಹೆಸರು ಬೇರೆಯೇ ಇತ್ತು. ಮೆಯೆರ್ ಮತ್ತು ಸ್ಟುಡೆಲಿ ಎಂಬ ಹೆಸರಿನಲ್ಲಿ ಈ ಕಂಪನಿಯು ಇಪ್ಪತ್ತನೇ ಶತಮಾನದ ಆರಂಭದಿಂದಲೂ ಸ್ವಿಸ್ ಸಂಪ್ರದಾಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವ ವಿಶಿಷ್ಟ ವಿನ್ಯಾಸದ ವಾಚ್ ಗಳನ್ನು ತಯಾರಿಸುತ್ತಿತ್ತು. ಮೆಯೆರ್ ಮತ್ತು ಸ್ಟುಡೆಲಿ ಎಂಬಿಬ್ಬರು ಈ ವಾಚ್ ಸಂಸ್ಥೆಯ ಪಿತಾಮಹರಾಗಿದ್ದಾರೆ. ಕೇವಲ ಸಮಯವನ್ನು ತೋರಿಸುವ ಕೆಲಸಕ್ಕಿಂತ ಭಿನ್ನವಾಗಿ ಕೈ ಯ ಆಕರ್ಷಣೆಯನ್ನು ಹೆಚ್ಚಿಸುತ್ತಿದ್ದ ಈ ಅದ್ದೂರಿ ವಾಚ್ ಅನ್ನು ಜಾಗತಿಕ ಮಟ್ಟದ ಅಭಿಮಾನಿಗಳು ಮತ್ತು ವಾಚ್ ಸಂಗ್ರಹಕಾರರು ದೊಡ್ಡ ಸಂಭ್ರಮವಾಗಿ ಆಚರಿಸುತ್ತಿದ್ದರು. ರೋಮರ್ ಆಫ್ ಸ್ವಿಟ್ಜರ್ಲೆಂಡ್ ಕಂಪನಿಯ ಹೊಚ್ಚ ಹೊಸ ಮೆಕ್ಯಾನೋ ವಾಚ್ ಮ್ಯಾನ್ಯುವಲ್ ವೈಂಡಿಂಗ್ ಹೊಂದಿರುವ, ಆಯತಾಕಾರದ ವಿನ್ಯಾಸದ, ಅತ್ಯಾಕರ್ಷಕ ಶೈಲಿ ಹೊಂದಿರುವ ಪುರುಷರ ವಾಚ್ ಆಗಿದೆ. ಇದರ ಸೊಗಸಾದ ವಿನ್ಯಾಸವು ನಿಮ್ಮ ಗಮನ ಸೆಳೆಯುವಂತಿದ್ದು, ಈ ವಾಚ್ ನಿಮ್ಮ ಆದ್ಯತೆಯ ವಾಚ್ ಆಗಿ ಹೊರಹೊಮ್ಮುವಂತೆ ರೂಪುಗೊಂಡಿದೆ. ಹೋರಾಲಾಜಿಕಲ್ ಎಂಜಿನಿಯರಿಂಗ್ ನ ಈ ಅದ್ಭುತ ವಾಚ್ 44 ಗಂಟೆಗಳ ಕಾಲ ವಿದ್ಯುತ್ ಬಾಳಿಕೆ ಬರುವ ಸೌಲಭ್ಯ ಹೊಂದಿದ್ದು, ಸುದೀರ್ಘ ಕಾಲ ಸಮಯದ ಅರಿವು ಮೂಡಿಸಲು ಬದ್ಧವಾಗಿದೆ
ಈ ವ್ಯವಸ್ಥೆಯು ವಾಚ್ ಕಟ್ಟಿಕೊಂಡಿರುವವರು ಎದುರಿಸಬಹುದಾದ ಅನಿರೀಕ್ಷಿತ ಆಘಾತಗಳಿಂದ ರಕ್ಷಣೆ ಒದಗಿಸುತ್ತದೆ. ಜೊತೆಗೆ ದೀರ್ಘ ಬಾಳಿಕೆ ಬರುವಂತೆ ಮಾಡುತ್ತದೆ. ಇದರ ಜೊತೆಗೆ ವಾಚ್ ನಲ್ಲಿ 18 ಆಭರಣಗಳನ್ನು ಬಳಸಲಾಗಿದ್ದು, ಆ ಅಂಶಗಳು ಚಲಿಸುವ ಭಾಗಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ನಿಖರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ ಈ ಭಾಗಗಳು ವಾಚ್ ನ ಆಂತರಿಕ ಮೆಕ್ಯಾನಿಸಂನಲ್ಲಿಯೂ ಅದ್ದೂರಿತನ ತುಂಬುತ್ತದೆ. ಆಕರ್ಷಣೆ ಒದಗಿಸುತ್ತದೆ. ಸಾಂಪ್ರದಾಯಿಕ ಕರಕುಶಲತೆ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಜೊತೆ ಸೇರಿಸಿ ಕಾರ್ಯನಿರ್ವಹಣೆಯಲ್ಲಿ ಮಾಸ್ಟರ್ ಪೀಸ್ ಅನ್ನಿಸಿಕೊಳ್ಳುವ ಮತ್ತು ಘನತೆಗೆ ಭಾಷ್ಯ ಬರೆಯುವ ವಾಚ್ ಗಳನ್ನು ತಯಾರಿಸುವ ರೋಮರ್ ಆಫ್ ಸ್ವಿಟ್ಜರ್ಲೆಂಡ್ ಕಂಪನಿಯ ಬದ್ಧತೆಗೆ ಈ ಮೆಕ್ಯಾನೋ ವಾಚ್ ಸಂಗ್ರಹವು ಸಾಕ್ಷಿಯಾಗಿದೆ.