ಕುಷ್ಟಗಿ:- ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರ ಹುಟ್ಟು ಹಬ್ಬದ ಅಂಗವಾಗಿ ಭಗತ್ ಸಿಂಗ್ ಕ್ರೀಡಾ ಯುವಕ ಸಂಸ್ಥೆ (ರಿ)ಕುಷ್ಟಗಿ ಹಾಗೂ ಗೆಳೆಯರ ಬಳಗವತಿಯಿಂದ ಸಂತೆ ಮಾರುಕಟ್ಟೆ ಬನ್ನಿಮಾಹಾಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಕ್ ಕತ್ತರಿಸಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರಿಗೆ ಸನ್ಮಾನಿಸಿ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೊರಿದರು.

ನಂತರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರು ಬನ್ನಿಮಾಹಾಕಾಳಿ ದೇವಿಯ ದರ್ಶನ ಪಡೆದು ನಂತರ ಮಾತನಾಡಿ ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಸದಾ ಚಿರರುಣಿಯಾಗಿರುವೆ ಆದರೆ ಶ್ರೀ ದೇವಿಯ ಆರ್ಶಿವಾದದಿಂದ ನಾನು ಕುಷ್ಟಗಿ ಜನತೆಯ ಸೇವೆ ಮಾಡಲು ಸದಾ ಸಿದ್ದನಾಗಿದ್ದು ಶ್ರೀ ಬನ್ನಿಮಾಹಾಕಾಳಿ ದೇವಿ ಆಶ್ರೀವಾದ ನನ್ನ ಮೇಲೆ ಇರಲಿ ಎಂದು ಅಭಿಮಾನಕ್ಕೆ ಮನಸೋತರು.

ಈ ಸಂದರ್ಭದಲ್ಲಿ ಶೇಖರಗೌಡ ಮಾಲಿ ಪಾಟೀಲ, ವಜೀರ್ ಬೀ ಗೋನಾಳ, ಪರಶುರಾಮ ನಾಗರಾಳ, ಶಿವಕುಮಾರ ಕಟ್ಟಿಮನಿ, ನಿಜಾಮ್ ಕಪಾಲಿ, ಯಮನೂರಪ್ಪ ಕಟಗಿ, ಸಂಗಮೇಶ ಸಿಂಗಾಡಿ, ಪ್ರಶಾಂತ ಗುಜ್ಜಲ್, ನಾಗರಾಜ ನಾಯಕ, ಹನಮೇಶ ಭೋವಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.