ಭೀಮಪ್ಪ ಪೂಜಾರ ಅವರಿಗೆ ‘ಜಾನಪದಲೋಕ ದೊಡ್ಮನೆ ಪ್ರಶಸ್ತಿ

ಕುಷ್ಟಗಿ,ಮಾ,17 : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ರಾಮನಗರದಲ್ಲಿ ನಡೆದ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ದಿ. ಎಚ್ಎಲ್ ನಾಗೇಗೌಡರ ಅವರ ಹೆಸರಿನಲ್ಲಿ ನೀಡುವ ‘ದತ್ತಿ ವಾರ್ಷಿಕ ದೊಡ್ಮನೆ ಪ್ರಶಸ್ತಿ’ಯನ್ನು ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ಭೀಮಪ್ಪ ಯಲ್ಲಪ್ಪ ಪೂಜಾರ ಇವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ದಿ. ಎಚ್ಎಲ್ ನಾಗೇಗೌಡರ ಅವರ ಹೆಸರಿನಲ್ಲಿ ನೀಡುವ ‘ದತ್ತಿ ವಾರ್ಷಿಕ ದೊಡ್ಮನೆ ಪ್ರಶಸ್ತಿ’ಯನ್ನು ಪ್ರತಿ ಜಿಲ್ಲೆಗೆ‌ ಒಬ್ಬರಂತೆ ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಮಾಡುತ್ತ ಬಂದಿದ್ದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ನಿವಾಸಿ ಸುಮಾರು 50 ವರ್ಷಗಳಿಂದ ಬಯಲಾಟ ಮತ್ತು ತತ್ವಪದಗಳ ಕಲಾವಿದರಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ರಾಜ್ಯ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ನಂಜರಾಜ್, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸದರಿಯವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಶರಣಪ್ಪ ವಡಿಗೇರಿ ಕಲಾವಿದರಾದ ಸುಕುಮುನಿ ಗಡಗಿ, ದಾವಲಸಾಬ ಅತ್ತಾರ, ಶರಣಪ್ಪ ಬನ್ನಿಗೋಳ, ದೇವೇಂದ್ರಪ್ಪ ಕಮ್ಮಾರ, ಎಸ್.ಎಸ್. ಹಿರೇಮಠ ಅಭಿನಂದಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top