ಭಾರತೀಯ ಜನತಾ ಪಾರ್ಟಿ ಅಲ್ಪ ಸಂಖ್ಯಾತರ ಮೋರ್ಚಾ ವಿಶೇಷ ಸಭೆ

ಕುಷ್ಟಗಿ,,ಜನವರಿ,27 -; ಕೊಪ್ಪಳ ಜಿಲ್ಲೆಯ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಮೋರ್ಚಾ ವಿಶೇಷ ‌ಸಭೆ ನೆಡೆಯಿತು. ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತರ ರಾಜ್ಯಧ್ಯಕ್ಷ ಸಯ್ಯದ್ ಸಲಾಂ ಜೀ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಂಬರುವ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ವಿಧಾಸಭೆ ಚುಣಾವಣೆಗೆ ಅಲ್ಪ ಸಂಖ್ಯಾತರ ಮೋರ್ಚಾವನ್ನು ಬಲಿಷ್ಠಗೊಳಿಸಲು ಕರೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಅಲ್ಪ ಸಂಖ್ಯಾತರ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಮಂಡಳಿ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾಣ ಅವರು ಮಾತನಾಡಿ ಪ್ರತಿಯೊಬ್ಬ ಮುಸ್ಲಿಂ ಸಮಾಜದ ಬಂಧುಗಳು‌ ಹಾಗೂ ಅಲ್ಪ ಸಂಖ್ಯಾತರು ಕೆ.ಎಂ.ಡಿ.ಸಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ತೆಗೆದುಕೊಂಡು ಅಲ್ಪ ಸಂಖ್ಯಾತರು ಅಭಿವೃದ್ಧಿ ಹೊಂದಬೇಕು ಹಾಗೂ ಬಿಜೆಪಿ ಸರಕಾರ ಅಲ್ಪ ಸಂಖ್ಯಾತರ‌ ಅಭಿವೃದ್ದಿಗಾಗಿ ಸದಾ ಶ್ರಮೀಸುತ್ತಿದ್ದು ಬಿಜೆಪಿ‌ ಪಕ್ಷದ ಒಳಿತಿಗಾಗಿ ಅಲ್ಪ ಸಂಖ್ಯಾತರು ಶ್ರಮಿಸಬೇಕು ಎಂದರು.

ಬಳ್ಳಾರಿ ವಲಯದ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ ಹುಲಗೇರಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಲ್ಪ ಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಯನ್ನು ರೂಪಿಸಿದೆ ಪಡೆಯುವಲ್ಲಿ ಯಶ್ವಿಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷೆತೆವಹಿಸಿದ್ದ ಕೊಪ್ಪಳ ಜಿಲ್ಲಾ ಅಲ್ಪ ಸಂಖ್ಯಾತರ ಅಧ್ಯಕ್ಷ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಉಪಾಧ್ಯಕ್ಷ ನೂರ್ ಭಾಷಾ, ಭರತೇಶ ಜೈನ್, ಹುಸೇನ್ ಆಲಂ, ಸಯ್ಯದ್ ಹುಸೇನಸಾಬ, ಮರ್ದಾನ ಅಲಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top