ಬೆಂಗಳೂರು ಐ.ಸಿ.ಎಸ್.ಐ ಚಾಪ್ಟರ್‌ ಗೆ ಅತ್ಯುತ್ತಮ ಶಾಖೆ ಗೌರವ – ಉಪರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪ್ರದಾನ

ಬೆಂಗಳೂರು:  ಇನ್ಸ್ಟಿಟ್ಯೂಟ್‌ ಆಫ್‌ ಕಂಪೆನಿ ಸೆಕ್ರೆಟರೀಸ್‌ ಆಫ್‌ ಇಂಡಿಯಾ – ಐ.ಸಿ.ಎಸ್.ಐ ಬೆಂಗಳೂರು ಶಾಖೆಗೆ ದೇಶದ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.  

ಉತ್ತರ ಪ್ರದೇಶದ ವಾರಣಸಿಯಲ್ಲಿ ನಡೆದ ಕಂಪೆನಿ ಸೆಕ್ರೆಟರಿಗಳ 51 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ 2022 ನೇ ಸಾಲಿನ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರಿಂದ ಐ.ಸಿ.ಎಸ್.ಐ ಬೆಂಗಳೂರು ಚಾಪ್ಟರ್‌ ನ ಅಧ್ಯಕ್ಷರಾದ ಸಿ.ಎಸ್.‌ ನಮನ್‌ ಜಿ. ಜೋಷಿ ಹಾಗೂ ಕಾರ್ಯಕಾರಿ ಅಧಿಕಾರಿ ನೂರ್‌ ಸಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಪಾಲರಾದ ಆನಂದಿ ಬೆನ್‌ ಪಟೇಲ್‌, ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್‌ ಗೋವಿಲ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಮಜ್‌ ಜಿ. ಜೋಷಿ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಕಂಪೆನಿ ಸೆಕ್ರೆಟರಿ ಹುದ್ದೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದು, ಸಮರ್ಥ ಕಂಪೆನಿ ಕಾರ್ಯದರ್ಶಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಬೆಂಗಳೂರು ಶಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top