ಬೆಂಗಳೂರು; ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರಿ ಆಫ್ ಇಂಡಿಯಾ ಕೊಡಮಾಡುವ ಅತ್ಯುತ್ತಮ ಪ್ರಶಸ್ತಿಗೆ ಐಸಿಎಸ್ಐ ಬೆಂಗಳೂರು ಚಾಪ್ಟರ್ ಭಾಜನವಾಗಿದೆ. ಐಸಿಎಸ್ಐ ಬೆಂಗಳೂರು ಚಾಪ್ಟರ್ ಮಾಡಿರುವ ಗಣನೀಯ ಸಾಧನೆಗೆ ಈ ಪುರಸ್ಕಾರ ಲಭಿಸಿದೆ.
ಮುಂಬೈನಲ್ಲಿ ನಡೆದ 52ನೇ ಐಸಿಎಸ್ಐ ರಾಷ್ಟ್ರೀಯ ಸಮ್ಮೇಳನದಲ್ಲಿ 2023 ನೇ ಸಾಲಿನ ಅಧ್ಯಕ್ಷರಾದ ಸಿಎಸ್ ಪರಮೇಶ್ವರ್ ಜಿ ಭಟ್, ಐಸಿಎಸ್ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ಸಿಎಸ್ ವೆಂಕಟ ಸುಬ್ಬರಾವ್ ಕಲ್ವಾ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ನೂರ್ ಸುಮಯ್ಯ ಅವರು ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಧ್ಯಕ್ಷರಾದ ಮಾಧಬಿ ಪುರಿ ಬುಚ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಐಸಿಎಸ್ಐನ ಕೇಂದ್ರ ಕೌನ್ಸಿಲ್ ಸದಸ್ಯ ಸಿಎಸ್ ದ್ವಾರಕಾಂತ್ ಸಿ. ಐಸಿಎಸ್ಐ-ಎಸ್ಐಆರ್ಸಿ ಅಧ್ಯಕ್ಷರಾದ ಸಿಎಸ್ ಪ್ರದೀಪ್ ಕುಲಕರ್ಣಿ, ಬೆಂಗಳೂರು ಚಾಪ್ಟರ್ನ ಉಪಾಧ್ಯಕ್ಷರಾದ ಸಿಎಸ್ ದೇವಿಕಾ ಸತ್ಯನಾರಾಯಣ – ಮತ್ತು ಖಜಾಂಚಿ ಸಿಎಸ್ ಪ್ರಸನ್ನ ಬೇಡಿ ಈ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
52 ನೇ ರಾಷ್ಟ್ರೀಯ ಸಮಾವೇಶವನ್ನು ಐಸಿಎಸ್ಐ ನರಸಿಂಹನ್ ಉದ್ಘಾಟಿಸಿದರು. ಐಸಿಎಸ್ಐ ಉಪಾಧ್ಯಕ್ಷ ಸಿಎಸ್ ಧನಂಜಯ್ ಶುಕ್ಲಾ, ಐಸಿಎಸ್ಐ ಮಂಡಳಿ ಸದಸ್ಯರಾದ ಸಿಎಸ್ ಪವನ್ ಜಿ.ಚಂಡಕ್, ಐಸಿಎಸ್ಐ ಕಾರ್ಯದರ್ಶಿ ಸಿಎಸ್ ಆಶಿಶ್ ಮೋಹನ್ ಮತ್ತು ಐಸಿಎಸ್ಐ-ಡಬ್ಲ್ಯುಐಆರ್ಸಿ ಅಧ್ಯಕ್ಷ ಸಿಎಸ್ ಮೆಹುಲ್ ಗಣೇಶ್ ರಜಪೂತ್ ಮತ್ತಿತರರು ಉಪಸ್ಥಿತರಿದ್ದರು.
1,500 ಕಂಪನಿಯ ಕಾರ್ಯದರ್ಶಿಗಳು, ವೃತ್ತಿಪರರು, ನಿರ್ದೇಶಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಇತರ ಪಾಲುದಾರರ ಪಾಲ್ಗೊಂಡಿದ್ದರು. ವರ್ಚುವಲ್ ಮಾದರಿಯಲ್ಲಿ ಸುಮಾರು 5,000 ಪ್ರತಿನಿಧಿಗಳು ಭಾಗವಹಿಸಿದ್ದರು.