ಮೋಕಾದ ಮೊರಾರ್ಜಿ ವಸತಿ ಶಾಲೆಯಲ್ಲಿ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ

ಬಳ್ಳಾರಿ : ರಾಜ್ಯ ಸರಕಾರವು ವಿಶೇಷವಾಗಿ ಬಾಲಕಿಯರಿಗಾಗಿತಯೇ ಆತ್ಮರಕ್ಷಣೆ ಕಲೆಯ ಕೌಶಲ್ಯಗಳ ತರಬೇತಿ ನೀಡಲು ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ ಎಂಬ ವಿಶೇಷ ಯೋಜನೆ ಜಾರಿಗೆ ತಂದಿದ್ದು, ಎಲ್ಲ ವಿದ್ಯಾರ್ಥಿನಿಯರು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಮತ್ತು ಪ್ರತಿರಂಗದಲ್ಲಿಯೂ ಧೈರ್ಯದಿಂದ ಮುನ್ನಗ್ಗಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್ ಸುರೇಶ್‍ಬಾಬು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಘದ ಸಂಯುಕ್ತ ಆಶ್ರಯದಲ್ಲಿ ಮೋಕಾ (ಬೈರದೇವನಹಳ್ಳಿ)ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓನಕೆ ಓಬವ್ವ ನಾಡು ಹಾಗೂ ದೇಶಕ್ಕಾಗಿ ಕೋಟೆಯೊಳಗೆ ನುಗ್ಗುವ ಹೈದರಾಲಿ ಸೈನ್ಯದ ಸುಮಾರು 250ಕ್ಕೂ ಹೆಚ್ಚು ಸೈನಿಕರನ್ನು ಓನಕೆಯಿಂದ ಬಡಿದು ಸಾಯಿಸಿ, ಹೆಣದ ರಾಶಿಗಳನ್ನೆ ಹಾಕಿ ಶತ್ರುಗಳನ್ನು ಸದೆ ಬಡಿದಳು. ಅದರಂತೆ ನೀವುಗಳು ನಾಡು, ದೇಶ ಹಾಗೂ ನಿಮ್ಮ ಆತ್ಮರಕ್ಷಣೆಗೊಸ್ಕರ ಕರಾಟೆ ತರಬೇತಿಯನ್ನು ಪಡೆದು ಸಾಧನೆ ಮಾಡಬೇಕು ಎಂದರು.
ವಸತಿ ಶಾಲೆಗಳಲ್ಲಿರುವ ಮತ್ತು ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು, ಮುಖ್ಯಮಂತ್ರಿಗಳು, ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಎರಡು ದಿನಗಳ ಹಿಂದೆ ವಿಧಾನಸೌಧದದ ಮುಂಭಾಗದಲ್ಲಿ ಚಾಲನೆ ನೀಡಿದ್ದು,ರಾಜ್ಯದ 31 ಜಿಲ್ಲೆಗಳಲ್ಲಿ 1.82ಲಕ್ಷ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ವೀರಭದ್ರಯ್ಯ ಹಿರೇಮಠ ಅವರು ಮಾತನಾಡಿ, ಇಂದಿನ ಸಮಾಜಕ್ಕೆ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯ ತರಬೇತಿಯು ಮಹಿಳೆಯರ ಆತ್ಮರಕ್ಷಣೆಗೆ ಅತ್ಯಾವಶ್ಯಕ. ಈ ಯೋಜನೆ ಉಪಯೋಗವನ್ನು ಪ್ರತಿಯೊಬ್ಬರು ಪಡೆದು ತಾವು ಬೇರೊಬ್ಬರಿಗೆ ಕಲಿಸುವುದರ ಮೂಲಕ ಎಲ್ಲಾ ಮಹಿಳೆರಿಗೆ ಆತ್ಮವಿಶ್ವಾಸ, ಧೈರ್ಯ, ಸಾಹಸ, ತುಂಬಬೇಕು ಎಂದು ಹೇಳಿದರು.
ಬಿ.ಡಿ.ಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಮಲಾಕ್ಷಮ್ಮ ಅವರು ಒನಕೆ ಓಬವ್ವ ಭಾವಚಿತ್ರಕ್ಕೆ ಪೆÇೀಜೆ ಸಲ್ಲಿಸಿ, ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸುಯಾ ಅವರು ಮಾತನಾಡಿ ಮಹಿಳೆಯರ ಸ್ವಯಂ ರಕ್ಷಣೆಗೆ ಕರಾಟೆ ತರಬೇತಿ ಮುಖ್ಯವಾದದ್ದು, ಇದನ್ನು ಪ್ರತಿಯೊಬ್ಬ ಮಹಿಳೆಯರು ಪಡೆದು ಧೈರ್ಯದಿಂದ ಎಲ್ಲಾ ರಂಗದಲ್ಲಿಯು ಮುಂದೆ ಬರಬೇಕು ಎಂದು ಹೇಳಿದರು.
ಶಾಲಾ ವಿದ್ಯಾರ್ಥಿನಿಯರಾದ ಗಾಯಿತ್ರಿ, ಮೈತ್ರಿ, ಪಲ್ಲವಿ ಅವರು ರಜ್ಯ ಸರಕಾರವು ಈ ಯೋಜನೆ ಜಾರಿಗೆ ತಂದಿರುವುದು ತುಂಬಾ ಸಂತೋಷದ ವಿಷಯ. ಇದರಿಂದ ನಾವುಗಳು ಸಮಾಜದಲ್ಲಿ ಧೈರ್ಯದಿಂದ ಬದುಕಲು ಹಾಗೂ ನಮ್ಮನ್ನು ನಾವು ಆತ್ಮರಕ್ಷಣೆ ಮಾಡಿಕೊಳ್ಳಲು ಈ ತರಬೇತಿ ತುಂಬಾ ಉಪಯೋಗವಾಗಿದೆ. ಈ ತರಬೇತಿಯು ನಿರಂತರವಾಗಿ ನೀಡುವುದರಿಂದ ನಮ್ಮಂತಹ ಮಹಿಳೆಯರಿಗೆ ತುಂಬಾ ಅನುಕುಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಿ.ಡಿ.ಹಳ್ಳಿ ಹಾಗೂ ಯರಗುಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಕರಾಟೆ ಅಣುಕು ಪ್ರದರ್ಶನ ಪ್ರದರ್ಶಿಸಿದರು.
ಈ ತರಬೇತಿಯಲ್ಲಿ ಕರಾಟೆ ಶಿಕ್ಷಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರು,ಸದಸ್ಯರು, ಯರ್ರಗುಡಿ,ಮೀನಹಳ್ಳಿ, ಚೆಳ್ಳಗುರ್ಕಿ,ಯರ್ರಂಗಳಿ,ಮುಷ್ಟುಗಟ್ಟ ವಸತಿ ಶಾಲೆಗಳ ಪ್ರಾಂಶುಪಾಲರು, ಶಿಕ್ಷಣ ಇಲಾಖೆಯ ಕ್ಷೇತ್ರಸಮನ್ವಯ ಅಧಿಕಾರಿ ಮಲ್ಲಪ್ಪ, ಮೆಟ್ರಿಕಿ, ಮೀನಹಳ್ಳಿ, ಯರಗುಡಿ, ಯರ್ರಂಗಳಿ, ಮುಷ್ಟುಗಟ್ಟ, ಚೆಳಗುರ್ಕಿ ವಸತಿ ಶಾಲಾ ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ, ಪೆÇೀಲಿಸ್ ಇಲಾಖೆ, ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಬಿ.ಡಿ.ಹಳ್ಳಿ ಗ್ರಾಮದ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

Translate »
Scroll to Top