ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ಭೇಟಿ ಪರಿಶೀಲನೆ

೧ ಕೋಟಿ ರೂ.ವೆಚ್ಚದಲ್ಲಿ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಅಭಿವೃದ್ಧಿ: ಸಚಿವ ಶ್ರೀರಾಮುಲು


ಬಳ್ಳಾರಿ,ಫೆ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ರಂಗಮಂದಿರದ ಛಾವಣಿಯ ಪಿಒಪಿ ಸತತ ಮಳೆಯಿಂದ ಕುಸಿದುಬಿದ್ದಿರುವುದನ್ನು,ಸೌಂಡ್ ಸಿಸ್ಟಮ್ ಸರಿಪಡಿಸುವಿಕೆ, ಜೋಳರಾಶಿ ದೊಡ್ಡನಗೌಡರು ಬಳಸಿದ ವಸ್ತುಗಳ ಮ್ಯೂಸಿಯಂ ಮಾಡಲು ಉದ್ದೇಶಿಸಿದ ಸ್ಥಳವನ್ನ ಸಚಿವ ಶ್ರೀರಾಮುಲು ಅವರು ಪರಿಶೀಲಿಸಿದರು.
ಇದರ ದುರಸ್ತಿಗೆ ೮೦ಲಕ್ಷ ರೂ.ಗಳ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣ್ಣನವರ್ ಅವರು ಸಚಿವರ ಗಮನಕ್ಕೆ ತಂದರು.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಗತ್ಯ ಪಿಒಪಿ ಅಳವಡಿಕೆ,ಸಮರ್ಪಕ ಸೌಂಡ್ ಸಿಸ್ಟಮ್ ವ್ಯವಸ್ಥೆ,ಮ್ಯೂಸಿಯಂ, ದೊಡ್ಡನಗೌಡರ ಪುತ್ಥಳಿ ಅಳವಡಿಸುವಿಕೆ ಸೇರಿದಂತೆ ಇನ್ನೀತರ ಸೌಕರ್ಯಗಳಿಗೆ ೧ ಕೋಟಿ ರೂ.ಒದಗಿಸಲಾಗುವುದು;ವಾರದೊಳಗೆ ಅಗತ್ಯ ವರದಿ ಸಲ್ಲಿಸುವಂತೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಜೊತೆಗೆ ಬಳ್ಳಾರಿಯಲ್ಲಿರುವ ಸೆಂಟನರಿ ಹಾಲ್, ರಾಘವ ಕಲಾಮಂದಿರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ವರದಿ ಸಲ್ಲಿಸಿ;ಯಾವುದಾದರೂ ಅನುದಾನದಡಿ ಅಭಿವೃದ್ಧಿಪಡಿಸೋಣ ಎಂದರು.
ಹಂಪಿ ಉತ್ಸವ ಮಾದರಿಯಲ್ಲಿಯೇ ಬಳ್ಳಾರಿ ಉತ್ಸವ ಆಚರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಬುದ್ದಿಜೀವಿಗಳ ಸಮಿತಿ ರಚಿಸಿ;ಅವರಿಂದ ವರದಿ ಪಡೆದುಕೊಳ್ಳಲು ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಪ್ರವಾಸಿಸ್ಥಳಗಳ ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.
ಹಿಜಾಬ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು ಅವರು ಈಗಾಗಲೇ ಗೃಹಸಚಿವರು ಈ ಕುರಿತು ಉತ್ತರಿಸಿದ್ದು,ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದರು.
ನಂತರ ಸಚಿವರು ರಂಗಮಂದಿರದಿಂದ ಬುಡಾ ಕಚೇರಿವರೆಗಿನ(ಎಚ್.ಆರ್.ಗವಿಯಪ್ಪ ವೃತ್ತದ ಮಾರ್ಗ) ಬೀದಿ ಬದಿಯ ವ್ಯಾಪಾರಿಗಳನ್ನು ಮಾತನಾಡಿಸಿದರು ಮತ್ತು ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೇಶಿಸಿರುವ ಆಹಾರ ಮಳಿಗೆ,ತರಕಾರಿ ಮಳಿಗೆ ಹಾಗೂ ಇನ್ನೀತರ ಮಳಿಗೆಗಳ ಸ್ಥಳ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ,ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಮಹಾನಗರ ಪಾಲಿಕೆ ಸದಸ್ಯರುಗಳು, ಪಾಲಿಕೆಯ ಮುಖ್ಯ ಎಂಜನಿಯರ್ ಖಾಜಾಮೋಹಿನಿದ್ದೀನ್ ಸೇರಿದಂತೆ ಇನ್ನೀತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top