ಮೋಘಲ್ ದಾರಾಶಿಕೋ,ದೇವರ ಹೆಣ ಸೇರಿ ವೈವಿಧ್ಯಮಯ ನಾಟಕಗಳ ಪ್ರದರ್ಶನ

ಬಳ್ಳಾರಿ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣದ ವತಿಯಿಂದ ಬಳ್ಳಾರಿ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ಇದೇ ಮಾ.10ರಿಂದ 12ರವರೆಗೆ ಮೂರು ದಿನಗಳ ಕಾಲ ಸಾಂಸ್ಕøತಿಕ ಸಮುಚ್ಛಯ ಆವರಣದಲ್ಲಿರುವ ಡಾ.ಮನ್ಸೂರ್ ಸುಭದ್ರಮ್ಮ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಈ ಮೂರು ದಿನಗಳ ಕಾಲ ವೈವಿಧ್ಯಮಯ ನಾಟಕಗಳ ಪ್ರದರ್ಶನ ನಡೆಯಲಿದೆ.
ಮಾ.10ರಂದು ಸಂಜೆ 6ಕ್ಕೆ ಈ ಜಿಲ್ಲಾಮಟ್ಟದ ಕಾಲೇಜು ರಂಗೋತ್ಸವಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಉದ್ಘಾಟಿಸಲಿದ್ದು, ಖ್ಯಾತ ರಂಗಕರ್ಮಿಗಳು ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ್ ಜೋಶಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರು ಸಂಸ್ಕಾರ ಭಾರತಿ ಸಂಚಾಲಕ ಪ.ರಾ.ಕೃಷ್ಣಮೂರ್ತಿಜಿ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ್, ರಂಗ ಸಮಾಜದ ಸದಸ್ಯರಾದ ಶಿವೇಶ್ವರಗೌಡ ಕಲ್ಲುಕಂಭ, ವಿಜಯನಗರ ಶ್ರೀಕೃಷ್ಟದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಶಾಂತನಾಯ್ಕ, ಸಿರಗುಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಬಸವರಾಜ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಮಾರೋಪ ಸಮಾರಂಭವು ಮಾ.12ರಂದು ಸಂಜೆ 6.30ಕ್ಕೆ ನಡೆಯಲಿದ್ದು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದು ಕಾಲೇಜು ಯುವರಂಗ ತರಬೇತಿ ಶಿಬಿರ ಹಾಗೂ ಕಾಲೇಜು ರಂಗೋತ್ಸವದ ಸಂಚಾಲಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ತಿಳಿಸಿದ್ದಾರೆ.
ನಾಟಕ ಪ್ರದರ್ಶನ ವಿವರಗಳು: ಮಾ.10ರಂದು ಸಂಜೆ 7:05ಕ್ಕೆ ಡಾ.ರಾಜಪ್ಪ ದಳವಾಯಿ ರಚನೆಯ ಆರ್.ಪಿ.ಮಂಜುನಾಥ ನಿರ್ದೇಶನ ಮತ್ತು ವಿನ್ಯಾಸದ “ಮೊಘಲ್ ದಾರಶಿಕೋ” ನಾಟಕವನ್ನು ಸಿರಗುಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಮಾ.11ರಂದು ಸಂಜೆ 7ಕ್ಕೆ ಆರ್ ಡಿ. ರಾಮಕಾತ್ ರಚನೆಯ ಹುಲುಗಯ್ಯ ನಾಯಕರ್ ನಿರ್ದೇಶನ ಮತ್ತು ವಿನ್ಯಾಸದ “ಸಾಕ್ರಟೀಶ್ ನಾಟಕವನ್ನು ಕುರುಗೋಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಮಾ.12ರಂದು ಸಂಜೆ 7ಕ್ಕೆ ಕುಂ.ವೀರಭದ್ರಪ್ಪ ರಚನೆಯ ಕೆ.ಶಂಕರ ಮೇಟ್ರಿ ನಿರ್ದೇಶನ ಮತ್ತು ವಿನ್ಯಾಸದ “ದೇವರ ಹೆಣ ನಾಟಕವನ್ನು ಕಂಪ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top