ವಿಜಯನಗರ ವಿವಿಯಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕರ್ನಾಟಕ ವಿಜ್ಞಾನದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಅಳಿವಿನಂಚಿನಲ್ಲಿರುವ ಜಲಚರ ಪ್ರಬೇಧಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ:ಟಿ.ವಿ. ರಾಮಚಂದ್ರ
ಬಳ್ಳಾರಿ: ಜಲವಾಸಿ ಜೀವ ಪ್ರಬೇಧವು ವೈವಿಧ್ಯಮಯ, ಆಗಾಧವಾದ, ಆರ್ಥಿಕ ಮತ್ತು ಸೌಂದರ್ಯದ ಮೌಲ್ಯವನ್ನು ಹೊಂದಿವೆ. ಮಾನವನ ಅಪಾಯಕಾರಿ ಚಟುವಟಿಕೆಗಳು ಹೆಚ್ಚಾದರಿಂದ ಹಲವು ಪ್ರಬೇಧದ ಜಲಚರ ಪ್ರಾಣಿಗಳು ಕಣ್ಮರೆಯಾಗುತ್ತಿವೆ. ಇವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ, ಪರಿಸರ ವಿಜಾÐನ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳಾದ ಡಾ. ಟಿ.ವಿ. ರಾಮಚಂದ್ರ ಹೇಳಿದರು.


ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆÀಮಿ ಜಂಟಿಯಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀರಿನ ಗುಣಮಟ್ಟವು ಪ್ರಸ್ತುತ ದಿನಮಾನದಲ್ಲಿ ತುಂಬಾ ಕಲುಷಿತಗೊಳುತ್ತಿದೆ. ಇದು ಪರಿಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಬಡತನ ರೇಖೆಯ ಕೆಳಗಿನ ಜನರ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಾರದ ಡಾ.ಎಮ್.ಡೇವಿಡ್ ಅವರು ಮಾತನಾಡಿ, ಜೀವವೈವಿಧ್ಯ ಮತ್ತು ಅದರ ಉತ್ಪಾದಕತೆಗಳಿಗೆ ಸಂಬಂಧಿಸಿದ ನಮ್ಮ ಆಲೋಚನೆಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಚಿಂತನೆಗಳನ್ನು ಹೊಂದಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್ ಅವರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕ್ರಿಯಾತ್ಮಕ ಅಧ್ಯಯನಗಳಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೀರಿನ ಮಹತ್ವ ಮತ್ತು ನಿರ್ವಹಣೆ ಕುರಿತು ಅವರು ಜಾಗೃತಿ ಮೂಡಿಸಿದರು.
ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ವಿಜಯಕುಮಾರ ಮಲಶೆಟ್ಟಿ, ಡಾ. ನಾಗಭೂಷಣ ಸಿ, ಡಾ. ಉಮಾ ರೆಡ್ಡಿ, ಡಾ. ಉದಯಕುಮಾರ ಖಡಕೆ, ಮತ್ತು ಡಾ. ಅರುಣಕುಮಾರ ಲಗಶೆಟ್ಟಿ ಸೇರಿದಂತೆ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top