ಇಂಡಿಯಾ ಒಕ್ಕೂಟ ಅಧಿಕಾರಕ್ಕೇರಿಲ್ಲ, ಆಗಲೇ ನ್ಯಾಯ್ ಯೋಜನೆ ನಿಧಿಗಾಗಿ ಸಾಲುಗಟ್ಟಿದ ಮಹಿಳೆಯರು

ಫೆಬ್ರವರಿ 26 ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಾದ ನ್ಯಾಯ್ ಯೋಜನೆ ಜಾರಿ ಭರವಸೆ ನೀಡಿತ್ತು.

ಬಿಜೆಪಿ ಕೂಡ ತನ್ನ ಸಂಕಲ್ಪ ಪತ್ರದಲ್ಲಿ ಮೋದಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರಚಾರ ನಡೆಸಿತ್ತು. ಕೇಂದ್ರದಿಂದ ನೆರವು ಪಡೆಯಲು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳು, ಮುಖಂಡರು  ಹೇಳಿದ್ದರು. ಇದನ್ನು ನಂಬಿದ್ದ ಮಹಿಳೆಯರು ಮತದಾನ ಮಾಡಿದ ನಂತರ ಖಾತೆ ತೆರೆಯಲು ಮುಗಿ ಬಿದ್ದರು. ಅಂಚೆ ಅಧಿಕಾರಿಗಳು ಇಂತಹ ಯಾವುದೇ ಯೋಜನೆ ಜಾರಿ ಮಾಡಿಲ್ಲ ಎಂದು ಪದೇ ಪದೇ ತಿಳಿ ಹೇಳಿದರೂ ಮಹಿಳೆಯರು ಕೇಳುವ ಸ್ಥಿತಿಯಲ್ಲಿರಲ್ಲ. ಖಾತೆ ತೆರೆಯಲು ಮುಂದಾಗುವ ಗ್ರಾಹಕರನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ಪ್ರತಿದಿನ ಮೊದಲು ಆಗಮಿಸುವವರಿಗೆ ಟೋಕ್ ನೀಡಲಾಗುತ್ತಿದೆ. ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಕಳೆದ ಒಂದು ತಿಂಗಳಲ್ಲಿ 20 ಸಾವಿರಕ್ಕೂ ಅಧಿಕ ಖಾತೆಗಳನ್ನು ತೆರೆಯಲಾಗಿದೆ. ಖಾತೆಗೆ ಹಣ ಹಾಕುತ್ತಾರೆ ಎಂಬ ಯಾವ ವಿಶ್ವಾಸದ ಮೇಲೆ ಖಾತೆ ತೆರೆಯುತ್ತಿದ್ದಾರೋ ಭಗವಂತನೇ ಬಲ್ಲ ಎಂಬತ್ತಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top