ಪಬ್​ಜಿ ಗೀಳಿಗೆ ಬಿಕಾಂ ವಿದ್ಯಾರ್ಥಿ ಬಲಿ!

ಹೈದರಾಬಾದ್: ಆನ್ಲೈನ್ ಗೇಮ್ ಪಬ್ಜಿ ಚಟಕ್ಕೆ ವಿದ್ಯಾರ್ಥಿಯೋರ್ವ ಬಲಿಯಾದ ದಾರುಣ ಘಟನೆ ಹೈದರಾಬಾದ್ನ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಅಮ್ಮ ಐ ಲವ್ ಯೂ….ಹುಷಾರಾಗಿರು ಎಂದು ವಾಟ್ಸ್ಆಯಪ್ನಲ್ಲಿ ತಾಯಿಗೆ ಮೆಸೇಜ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ ವಿದ್ಯಾರ್ಥಿ ಹೆಸರು ಅಖಿಲ್ (21).

 

ಅಖಿಲ್ ತಂದೆ ಮರಣಹೊಂದಿದ ನಂತರ ತಾಯಿ ಜೊತೆ ಸೇರಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ. ಅಮೀರ್ಪೇಟ್ ಸಮೀಪದ ಸಿದಾರ್ಥ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಕಳೆದ ಮೂರು ತಿಂಗಳಿನಿಂದ ಕಾಲೇಜಿಗೂ ಹೋಗದೆ ಪಬ್ಜಿಗೆ ಜೋತು ಬಿದ್ದು ಹಗಲು ರಾತ್ರಿ ಗೇಮ್ ಆಡುತ್ತಿದ್ದ ಎಂದು ತಿಳಿದುಬಂದಿದೆ.

ಕುಟುಂಬದವರು ಬುದ್ಧಿಮಾತು ಹೇಳಿದರೂ ಕೇಳದ ಅಖಿಲ್ ಆಟಕ್ಕಾಗಿ ಊಟ ಬಿಟ್ಟು ಪಬ್ಜಿ ಗೇಮ್ನಲ್ಲಿ ನಿರತನಾಗಿದ್ದ. ಕೊನೆಗೆ ಪಬ್ಜಿ ಆಟವೇ ಆತನ ಜೀವಕ್ಕೆ ಮುಳುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಅಖಿಲ್ ತಾಯಿ ಪಿ. ಜಯ ತನ್ನ ಗೆಳತಿ ಮನೆಗೆ ಹೋಗಿದ್ದ ಸಮಯ ಮನೆಯಲ್ಲಿ ಇದ್ದ ಅಖಿಲ್ ಅಮ್ಮ ಐ ಲವ್ ಯೂ….ಮಿಸ್ ಜೋಪಾನ ಎಂದು ಮೆಸೇಜ್ ಮಾಡಿದ್ದ, ಈ ಮೆಸೇಜ್ ನೋಡಿ ಮನೆಗೆ ಓಡಿ ಬಂದ ತಾಯಿಗೆ ಬಾಗಿಲು ಬಂದ್ ಆಗಿರುವುದು ಕಂಡಿದೆ. ಬಾಗಿಲು ತೆರೆಯುವಂತೆ ಮಗನನ್ನು ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಅಕ್ಕಪಕ್ಕದ ಮನೆಯವರ ನೆರವಿನಿಂದ ಬಾಗಿಲು ಒಡೆದು ನೋಡಿದರೆ ಮಗ ನೇಣು ಬಿಗಿದುಕೊಂಡು ಸಾವುಗೀಡಾಗಿರುವುದನ್ನು ನೋಡಿ ತಾಯಿ ಕುಸಿದು ಬಿದ್ದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಬ್ಜಿಯಂತಹ ಆನ್ಲೈನ್ ಗೇಮ್ಗಳಿಂದ ಅಮಾಯಕ ಯುವಕರು, ವಿದ್ಯಾರ್ಥಿಗಳು ತಮ್ಮ‌ ಕುತ್ತು ತಂದುಕೊಳ್ಳುತ್ತಿದ್ದಾರೆ. ಪಬ್ಜಿಯಂತಹ ಆನ್ಲೈನ್ ಗೇಮ್ಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಮೃತನ ತಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top