ಶನಿವಾರ ಮುಂಜಾನೆ ೨.೩೦ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ.
ಕನ್ನಡ ಚಿತ್ರರಂಗ ನಟ. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು.
ಕಲಾ ತಪಸ್ವಿ’ ರಾಜೇಶ್ ಅವರು ಏಪ್ರಿಲ್ ೧೫, ೧೯೩೨ ರಂದು ಬೆಂಗಳೂರುನಲ್ಲಿ ಜನಿಸಿದರು ಮತ್ತು ಅವರಿಗೆ ಮುನಿಚೌಡಪ್ಪ ಎಂದು ಹೆಸರಿಸಲಾಯಿತು. ಬಾಲ್ಯದಿಂದಲೂ ರಂಗಭೂಮಿ ಕಡೆ ವಾಲಿದ ಅವರ ಮನಸ್ಸು ಟ್ಯೂಷನ್ ತರಗತಿಗಳಿಗೆ ಚಕ್ಕರ್ ಹೊಡೆದು, ಸುದರ್ಶನ ನಾಟಕ ಮಂಡಳಿಯವರು ನಡೆಸಿಕೊಡುತ್ತಿದ್ದ ನಾಟಕಗಳಲ್ಲಿ ನಟಿಸುತ್ತಿದ್ದರು. ತ್ಯಾಗರಾಜ್ ಭಾಗವತರ್ ಚಲನಚಿತ್ರಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು ಮತ್ತು ಅವರನ್ನು ತಮ್ಮ ಮಾದರಿ ಎಂದು ಪರಿಗಣಿಸಿದರು. ಅವರು ತಮ್ಮ ವಿದ್ಯಾಸಾಗರವನ್ನು ರಂಗಭೂಮಿಯಲ್ಲಿ ಉತ್ತೇಜಿಸಲು ಮಾತ್ರ ಬದಲಾಯಿಸಿದರು. ಶಿಕ್ಷಣದ ನಂತರ ಬೆರಳಚ್ಚುಗಾರನಾಗಿ ಕೆಲಸ ಮಾಡಿದ ಅವರು, ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ ಎಂಬ ನಾಟಕ ತಂಡವನ್ನು ಸ್ಥಾಪಿಸಿದರು. ಅವರು ಅಭಿನಯದಿಂದ ಪ್ರಭಾವಿತರಾದ ಚಲನಚಿತ್ರ ನಿರ್ಮಾಪಕ ಹುಣಸೂರು ಕೃಷ್ಣಮೂರ್ತಿ ಅವರು ೧೯೬೪ ರಲ್ಲಿ ಬೆಳ್ಳಿತೆರೆಯಲ್ಲಿ ಪ್ರಯಾಣವನ್ನು ರೂಪಿಸಿ ಅವರ ಚಲನಚಿತ್ರ ವೀರ ಸಂಕಲ್ಪದಲ್ಲಿ ವಿಶೇಷ ಪಾತ್ರವನ್ನು ನೀಡಲಾಯಿತು.
ರಾಜೇಶ್ ಪಿ.ಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹಿರಿಯ ನಟ ರಾಜೇಶ್ ಅವರ ನಿಜವಾದ ಹೆಸರು ಮುನಿ ಚೌಡಪ್ಪ. ಅವರನ್ನು ವಿದ್ಯಾಸಾಗರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಇವರ ನಟನೆಯ ಮೊದಲ ಸಿನಿಮಾದ ಟೈಟಲ್ ಕಾರ್ಡ್ ನಲ್ಲೂ ವಿದ್ಯಾಸಾಗರ್ ಎಂದೇ ಇದೆ. ಈ ಸಿನಿಮಾದ ನಂತರ ಅವರ ಹೆಸರು ರಾಜೇಶ್ ಅಂತಾಯಿತು. ಹೀಗೆ ಹೆಸರು ಬದಲಾಯಿಸಿದವರು ಕನ್ನಡದ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ
ರಾಜೇಶ್ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಏನೂ ಅಲ್ಲ. ವಿದ್ಯಾಸಾಗರ್ ಹೆಸರಿನಲ್ಲಿ ಆಗಲೇ ಅವರು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಈ ಜನಪ್ರಿಯತೆಯೇ ಅವರನ್ನು ಸಿನಿಮಾ ರಂಗಕ್ಕೆ ಕರೆದು ತಂದಿತ್ತು. ೧೯೬೪ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ರಾಜೇಶ ಅವರು ನಟನೆ ಜೊತೆ ಶಕ್ತಿ ನಾಟಕ ಮಂಡಳಿ ಕಟ್ಟಿದ್ದ ರಂಗಕರ್ಮಿ. ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಅವರ ಮೂಲ ಹೆಸರು ಮುನಿ ಚೌಡಪ್ಪ. ಶ್ರೀನಿ ನಟನೆಯ ಓಲ್ಡ್ ಮಾಂಕ್ ಚಿತ್ರದಲ್ಲಿ ಕೊನೆಯ ಬಾರಿ ರಾಜೇಶ್ ಅವರು ನಟಿಸಿದ್ದರು. ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ರಾಜೇಶ್ ಗುರುತಿಸಿಕೊಂಡಿದ್ದರು. ೬೦ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಾಜೇಶ್ ಅವರಿಗೆ ೧೯೬೮ರ ನಮ್ಮ ಊರು ಚಿತ್ರ ಹೆಸರು ತಂದುಕೊಟ್ಟಿತ್ತು. ನಂತರ ರಾಜೇಶ್ ಎಂದು ಹೆಸರು ಬದಲಿಸಿಕೊಂಡಿದ್ದರು. ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ ೧೫೦ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ. ಅವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ರಥಸಪ್ತಮಿ’ ಚಿತ್ರದಲ್ಲಿ ರಾಜೇಶ್ ಅವರ ಪುತ್ರಿ ಆಶಾರಾಣಿ ನಾಯಕಿಯಾಗಿ ಅಭಿನಯಿಸಿದ್ದರು. ಕನ್ನಡ ಹಾಗೂ ತಮಿಳಿನ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪತ್ನಿಯೇ ಆಶಾರಾಣಿ. ಅರ್ಜುನ್ ಸರ್ಜಾ ಮತ್ತು ಆಶಾರಾಣಿ ದಂಪತಿಯ ಪುತ್ರಿ ಐಶ್ವರ್ಯ ಸರ್ಜಾ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.