ದೇವನಹಳ್ಳಿ:
ಉಪಮುಖ್ಯಮಂತ್ರಿ ಮೇಲೆ ಸಂಸದ ಡಿ.ಕೆ.ಸುರೇಶ್ ಹಾಗೂ ಎಂ.ಎಲ್.ಸಿ ರವಿ ದೌರ್ಜನ್ಯ ಮಾಡಿ ಕಾಂಗ್ರೇಸ್ ಪಕ್ಷದ ವರ್ತನೆಯನ್ನು ಪ್ರದರ್ಶನ ಮಾಡಿದ್ದಾರೆ.ದೌರ್ಜನ್ಯಮಾಡಿದವರಮೇಲೆ ಕೂಡಲೆ ಕೇಸು ದಾಖಲಿಸಿಕ್ರಮಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಹಳೆ ಬಸ್‌ನಿಲ್ದಾಣದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಡಿ.ಕೆ.ಸುರೇಶ್ ಹಾಗು ಎ.ರವಿ
ಪ್ರತಿಕೃತಿಗೆ ಬೆಂಕಿಹಚ್ಚಿ ಧಹಿಸಿ ಮಾತನಾಡಿ, ದೀಪ ಆರುವ ಮುನ್ನ ಯಾವರೀತಿ ಜೋರಾಗಿ ಉರಿಯುತ್ತದೆಯೇ ಅದೇ ರೀತಿ ಕಾಂಗ್ರೇಸ್ ಪಕ್ಷದ ಡಿ.ಕೆ.ಬ್ರದರ್ಸ್ ವೇದಿಕೆಮೇಲೆ ತಮ್ಮ ನಿಜರೂಪವನ್ನು ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿಗಳ ಎದುರಿನಲ್ಲೇ ತಮ್ಮ ಗೂಂಡಾಗಿರಿಯನ್ನು ತೋರಿಸಿದ್ದಾರೆ. ವೇದಿಕೆ
ಮೇಲೆ ಉಪಮುಖ್ಯಮಂತ್ರಿಯಿಂದ ಮೈಕ್ ಕಸಿದು ಕೊಂಡು ಗೂಂಡಾವರ್ತನೆಯನ್ನು ಪ್ರದರ್ಶಿಸಿರುವುದು ರಾಜ್ಯದ ಜನತೆ ಯೊಚನೆ
ಮಾಡಬೇಕು. ಇದನ್ನು ಹೀಗೆ ಬಿಟ್ಟರೆ ಈ ಪಿಡುಗು ಎಲ್ಲೆಡೆ ಹಬ್ಬಿಕೊಳ್ಳಲಿದೆ ಆಗಾಗಿ ಅವರನ್ನು ಮಟ್ಟಹಾಕಬೇಕು, ಕೂಡಲೆ ಅವರಮೇಲೆ ಕೇಸು ದಾಖಲಿಸಿ ಅವರನ್ನು ಬಂಧಿಸಬೇಕು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರಕಾರ ತುರ್ತು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ
ಹೋರಾಟಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಎಸ್ಸಿಮೋರ್ಚ ಖಜಾಂಚಿ ಎ.ಕೆ.ಪಿ.ನಾಗೇಶ್ಮಾ ಮಾತನಾಡಿ ಕಾಂಗ್ರೇಸ್‌ನ ಡಿ.ಕೆ.ಸುರೇಶ್ ಹಾಗು ಎ.ರವಿ ತೊರಿರುವ ಗೂಂಡಾಗಿರಿಯನ್ನು ನಾವು
ಖಂಡಿಸುತ್ತೇವೆ. ಇಂತಹ ಗೂಂಡಾವರ್ತನೆ ಕಾಂಗ್ರೇಸ್‌ನವರದ್ದು. ಇಂತಹ ಗೂಂಡಾಗಳಿರುವ ಪಕ್ಷ ಮುಂದೆ ಅಧಿಕಾರಕ್ಕೆ ಬಂದರೆ ರಾಜ್ಯ ಗೂಂಡಾರಾಜ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸಿದರೆ ನಾವು ಕಪು ಪಟ್ಟಿ
ಪ್ರದರ್ಶನಮಾಡುತ್ತೇವೆ ಎಂದರು.

ಇದೆ ವೇಳೆ ಮಾಜಿ ಶಾಸಕ ಹಾಗು ಬಿಜೆಪಿ ಹಿರಿಯ ಮುಖಂಡ ಜಿ.ಚಂದ್ರಣ್ಣ, ಜಿಲ್ಲಾ ರೈತಮೋರ್ಚ ಅಧ್ಯಕ್ಷ ರವಿಕುಮಾರ್, ಮಾಜಿ ಜಿಲ್ಲಾಧ್ಯಕ್ಷ ನಾರಾಯಣಗೌಡ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಯುವಮೋರ್ಚ ಕಾರ್ಯಕರ್ತರು ಮಹಿಳಾ ಮೋರ್ಚಾ ಕಾರ್ಯಕರ್ತರು ಇದ್ದರು.