ಮಹಿಳೆಯರಿಂದ ಸಮಾಜಕ್ಕೆ ಮಹತ್ವದ ಕೊಡುಗೆ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪುಷ್ಪಾಂಜಲಿದೇವಿ
ಬಳ್ಳಾರಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಬಳ್ಳಾರಿ ವಕೀಲರ ಸಂಘದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್.ಪುμÁ್ಪಂಜಲಿದೇವಿ ಅವರು ಮಾತನಾಡಿ,
ಮಹಿಳೆಯರು ತುಂಬಾ ಶ್ರಮಜೀವಿಗಳು; ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಮುಖಿಗಳಾಗಿ ಉತ್ತಮ ಸಾಧನೆಗಳನ್ನು ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.ಬಳ್ಳಾರಿ ವಕೀಲರ ಸಂಘದಿಂದ ಮಹಿಳೆಯರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಮಹಿಳಾ ಸಾಧಕರಿಗೆ ಇನ್ನಷ್ಟು ಪೆÇ್ರೀತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕೆ.ಯರ್ರೇಗೌಡ ಅವರು ಮಾತನಾಡಿ ಹಿಂದೆ ನಮ್ಮ ವಕೀಲ ವೃತ್ತಿಯಲ್ಲಿ ಕೆಲ ಶ್ರೀಮಂತರು ಹಾಗೂ ಕೆಲ ವರ್ಗದವರು ಮಾತ್ರ ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಎಲ್ಲಾ ವರ್ಗದ ಜನಗಳು ಮುಖ್ಯವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು
ಈ ಹಿಂದೆ ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಆಸ್ತಿ ಹಕ್ಕು ಇರಲಿಲ್ಲ, ಸ್ವತಂತ್ರವಾಗಿ ಜೀವಿಸುವುದಕ್ಕೆ ಸಾಧ್ಯವಿಲ್ಲದಂತಹ ವಾತಾವರಣವಿತ್ತು.ಇಂತೆಲ್ಲ ಬೆಳವಣಿಗೆಯಲ್ಲಿ ಮಹಿಳೆಯರು ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಂಡು ಉತ್ತಮ ಸಾಧನೆಯನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಹಾಗೂ ಕೌಟುಂಬಿಕವಾಗಿಯೂ ಮಗಳಾಗಿ,ಹೆಂಡತಿಯಾಗಿ, ತಾಯಿಯಾಗಿ,ಅತ್ತೆಯಾಗಿ ಕುಟುಂಬದ ಸದಸ್ಯರ ಸೇತುವೆಯಾಗಿ ಬೆಲೆಕಟ್ಟಲಾಗದ ಸೇವೆ ಸಲ್ಲಿಸುತ್ತಿದ್ದಾಳೆ ಎಂದರು.
ವಕೀಲರ ಸಂಘದಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ನ್ಯಾಯವಾದಿಗಳ ಮಧ್ಯೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು; ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಇಬ್ಬರು ಮಹಿಳಾ ನ್ಯಾಯವಾದಿಗಳಾದ ಟಿ.ಶೋಭಾದೇವಿ ಹಾಗೂ ಪಿ.ಇಂದಿರಾಬಾಯಿ ಅವರಿಗೆ ಹಾಗೂ ಬಳ್ಳಾರಿಯ ಐವರು ಗೌರವಾನ್ವಿತ ನ್ಯಾಯಾಧೀಶರುಗಳಿಗೆ ಸಂಘದಿಂದ ಸನ್ಮಾನನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಎಲ್ಲಾ ನ್ಯಾಯಾಧೀಶರುಗಳು, ಸಂಘದ ಉಪಾಧ್ಯಕ್ಷರಾದ ಎಂ.ನಾಗರಾಜ ನಾಯಕ,ಕಾರ್ಯದರ್ಶಿ ಬಿ.ರವೀಂದ್ರನಾಥ, ಸಹಕಾರ್ಯದರ್ಶಿ ತ್ರಿವೇಣಿ ಪತ್ತಾರ್, ಖಜಾಂಚಿ ಕೆ.ಎನ್.ಈರೇಶ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಗೂ ಸಂಘದ ಸರ್ವ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.