ವಿಧಾನಸೌಧದ ಬಳಿ ಡ್ರೋನ್ ಹಾರಾಟಕ್ಕೆ ಯತ್ನ ಇಬ್ಬರು ಯುವಕರ ವಿರುದ್ಧ FIR​ ದಾಖಲು

ಬೆಂಗಳೂರು: ವಿಧಾನಸೌಧದ ಪೂರ್ವ ದ್ವಾರದ ಬಳಿ ಇಂದು ಬೆಳಿಗ್ಗೆ ಡ್ರೋನ್ ಹಾರಾಟಕ್ಕೆ ಯತ್ನಿಸಿದ್ದ ಇಬ್ಬರು ಇವೆಂಟ್ ಮ್ಯಾನೇಜ್ಮೆಂಟ್ ಯುವಕರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಹಿ‌ನ್ನೆಲೆ ವಿಧಾನಸೌಧ ಠಾಣೆ ಪೊಲೀಸರು FIR ದಾಖಲಿಸಿದ್ದಾರೆ. ಅರುಣ್ ಮತ್ತು ವಿನೋದ್ ವಶಕ್ಕೆ ಪಡೆಯಲಾಗಿದ್ದ ಯುವಕರು. ಸದ್ಯ ಇಬ್ಬರಿಗೂ ಸ್ಟೇಷನ್ ಬೇಲ್ ನೀಡಿ ಕಳುಹಿಸಲಾಗಿದೆ. ಡ್ರೋನ್ ಹಾರಿಸುವುದು ನಿರ್ಬಂಧಿಸಿರುವ ವಿಚಾರ ತಿಳಿಯದೆ ಹಾರಿಸಲು ಯತ್ನಿಸಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಖಾಸಗಿ ಕಂಪನಿಯೊಂದರ 15 ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ ವಿಧಾನಸೌಧದ ವಿಡಿಯೋ ಚಿತ್ರೀಕರಣಕ್ಕೆ ಬಂದಿದ್ದರು.

250 ಗ್ರಾಂ ಗಿಂತ ಕಡಿಮೆ ಅಥವಾ ಸಮ ತೂಕದ (ಯಾವುದೇ ಪರವಾನಗಿ ಅಗತ್ಯವಿಲ್ಲದ) ನ್ಯಾನೊ ಡ್ರೋನ್ನನ್ನು ನೆಲದಿಂದ 50 ಅಡಿಗಿಂತ ಹೆಚ್ಚು ಅಂತರದಲ್ಲಿ ಹಾರಾಟ ನಡೆಸಬಹುದಾ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕು. ಅದೇ ರೀತಿಯಾಗಿ ನೀವು ವಿಮಾನ ನಿಲ್ದಾಣ ಅಥವಾ ಇತರೆ ಸೂಕ್ಷ್ಮ ನಿಯಂತ್ರಿತ ಪ್ರದೇಶಗಳಲ್ಲಿ ನ್ಯಾನೊ ಡ್ರೋನ್ಗಳನ್ನು ಹಾರಾಟ ನಡೆಸುವ ಮುನ್ನ ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.  250 ಗ್ರಾಂ ಗಿಂತ ಹೆಚ್ಚು ತೂಕವಿದ್ದು, ಆದರೆ 2 ಕಿಲೋಗ್ರಾಂಗಳಿಗಿಂತ ಕಡಿಮೆ ಅಥವಾ ಸಮ ತೂಕದ ಮೈಕ್ರೋ ಡ್ರೋನ್ಗಳನ್ನು ಯಾವುದೇ ಪರವಾನಗಿ ಅಗತ್ಯವಿಲ್ಲದೇ ವಾಣಿಜ್ಯೇತರ ಕಾರ್ಯಕ್ಕೆ ಮಾತ್ರ ಬಳಕೆ ಮಾಡಬಹುದಾಗಿದೆ.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top