ಬಳ್ಳಾರಿ: ಅಖಿಲ ಕರ್ನಾಟಕ ಯುವ ಅಪ್ಪು ಸೇವಾ ಸಮಿತಿ ಹಾಗೂ ಸನ್ಮಾರ್ಗ ಗೆಳೆಯರ ಬಳಗ ವತಿಯಿಂದ ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ್ ಅವರ 2ನೇ ಪುಣ್ಯ ಸ್ಮರಣೆ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ನಗರದ ದೂಡ್ಡ ಮಾರ್ಕೆಟ್ ಹತ್ತಿರ ಹಮ್ಮಿಕೊಳ್ಳಲಾಗಿತ್ತು
ರಕ್ತದಾನಕ್ಕೆ ಚಾಲನೆ ನೀಡಿ ಮಾತನಾಡಿದ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷರಾದ ಎಚ್ ಕೆ ಲಕ್ಷ್ಮಿಕಾಂತ ರೆಡ್ಡಿ ಇಂದಿನ ಪೀಳಿಗೆ ಯುವಕರು ಪುನೀತ ರಾಜಕುಮಾರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದಾ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಪುನೀತ್ ರಾಜಕುಮಾರ್ ಸ್ಮರಣೆ ಮಾಡಬೇಕು ಎಂದರು.

ಬ್ರೂಸ್ಪೇಟೆ ಸಿಪಿಐ ಸಿಂಧೂರ ಒಳ್ಳೆಯ ಕೆಲಸಗಳ ರಾಯಭಾರಿಯಾಗಿ ಡಾ ಪುನೀತ್ ರಾಜಕುಮಾರ್ ಕೆಲಸ ಮಾಡುತ್ತಿದ್ದರು ಎಂದರಲ್ಲದೆ, ಇಂದಿನ ರಕ್ತದಾನ ರೂವಾರಿಗಳಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ. ಮುಂದಿನ ಯುವ ಪೀಳಿಗೆಗೆ ನೀವುಗಳ ದಾರಿದೀಪವಾಗಬೇಕು ಎಂದರು
ಈ ಸಂದರ್ಭದಲ್ಲಿ ಸಂಸ್ಥಾಪಕ ಜೆ ಪಿ ಮಂಜುನಾಥ, ಅಧ್ಯಕ್ಷರಾದ ಅಪ್ಪು ರವಿ, ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್, ಹುಂಡೇಕರ ರಾಜೇಶ್, ಗುಡಿಗುಂಟೆ ಹನುಮಂತ, ರಾಜು, ಕುಮಾರ್ ಇನ್ನಿತರರು ಇದ್ದರು