ಗಂಗಾವತಿ: ಇಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಹಾಗೂ ಮಲ್ಲಪುರ ದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಸದಸ್ಯರನ್ನು ನೇಮಕ ಮಾಡಲಾಯಿತು .ಈ ಸಂದರ್ಭದಲ್ಲಿ ಮಲ್ಲಪುರ ದಲ್ಲಿ ಸುಮಾರು 100 ಕ್ಕೂ ಹೆಚ್ಚು ಹಾಗೂ ವೆಂಕಟಗಿರಿ ಯಲ್ಲಿ ಸುಮಾರು 150 ಕ್ಕೂ ಹೆಚ್ಚು ಜನ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಕೆ ಸೇರ್ಪಡೆ ಯಾದರು. ಈ ಸಂದರ್ಭದಲ್ಲಿ ರಾಜ್ಯದ ಮುಖಂಡರ ನೇತೃತ್ವದಲ್ಲಿ ಈ ಸಮಾರಂಭ ನೇಡೆಯಿತು . ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಲ್ ರಾಜ್ಯದಲ್ಲಿ ರೈತ ಹೋರಾಟಕ್ಕೆ ಈ ಬಾಗದಿಂದ ಅತಿ ಹೆಚ್ಚು ಯುವಕ ಮಿತ್ರರು ರೈತ ಸಂಘ ವನ್ನು ಸೇರ್ಪಡೆ ಯಾಗುತ್ತಿರುವದು ತುಂಬಾ ಸಂತಸದ ವಿಷಯ.
ಹಾಗೂ ಈ ಬಾಗದ ರೈತ ಸಮಸ್ಯೆ ಗಳನ್ನು ಬಗೆಹರಿಸುವ ಕೆಲಸಕ್ಕೆ ಯುವ ಸಮೂಹ ಬಂದಿದೆ ಇದರ ಪಲ ರೈತಾಪಿ ವರ್ಗಕೆ ಅನುಕೂಲ ವಾಗಲಿದೆ ರೈತ ಕಷ್ಟಳಿಗೆ ರೈತರೂ ಕೂಡ ನಮ್ಮೊಂದಿಗೆ ಕೈ ಜೋಡಿಸಿದರೆ ರಾಜ್ಯ ಸರಕಾರಕ್ಕೆ ಮನ ಮುಟ್ಟಲು ಯಲ್ಲರೂ ಹಗಲಿರುಳು ಶ್ರಮಿಸೊಣ. ರೈತ ದೇಶದ ಬೆನ್ನೆಲುಬು ಎಂದು ಹೇಳಿ ಪಕ್ಕೆಲುಬು ಮುರಿಯುವ ಸರಕಾರ ಗಳಿಗೆ ಹೋರಾಟದ ಮುಖಾಂತರ ಬೀಸಿ ಮುಟ್ಟಿಸೊಣ ಹಾಗಿದ್ದಾಗ ರೈತ ಸಂಕಷ್ಟ ತೀರ ಬಹುದು ಎಂದು ಹೇಳಿದರು. ಇದೆ ವೇಳೆ ರಾಜ್ಯ ಅಧ್ಯಕ್ಷರಾದ ಶರಣಗೌಡ ಕೇಸರಟಿ ಮಾತನಾಡಿ .
ರೈತ ಸಂಘಕ್ಕೆ ಇನ್ನೂ ಹಲವರು ಸೇರಲು ಉತ್ಸಹ ಹೊಂದಿ ಪ್ರತಿ ಗ್ರಾಮದಿಂದ ಕರೆ ಬರುತ್ತದೆ. ರೈತ ಹಾಗೂ ಯುವ ಸಮೊಹ ಒಂದಾಗಿ ರೈತ ಹೋರಾಟದಲ್ಲಿ ಭಾಗವಹಿಸಲು ಮುಂದೆ ಬರುತ್ತಿರವದು ತುಂಬಾ ಸಂತೋಷ ತಂದಿದೆ ರೈತ ಸಮಸ್ಯೆ ಗೆ ಹಗಲಿರುಳು ನಿಮ್ಮನೊಂದಿಗೆ ನಾವು ಇದ್ದಿವಿ ನೀವು ಸಹ ರೈತರ ಪರವಾಗಿ ಕೆಲಸ ಮಾಡಿ ರೈತ ಮಕ್ಕಳಾಗೋಣ ಈ ರೀತಿ ಮಾಡಿದಾಗ ದೇಶದ ರೈತ ಉಳಿಯುತ್ತಾನೆ.ರೈತ ಉಳಿದರೆ ದೇಶ ಉಳಿಯಲು ಸಾಧ್ಯ ರೈತ ದೇಶದ ಸಂಪತ್ತು ಎಂದು ಹೇಳಿದರು .ಈ ಸಂದರ್ಭದಲ್ಲಿ ರಾಜ್ಯ ಮುಖಂಡರಾದ SA ಖಾದ್ರಿ. ಮಹ್ಮದ್ ದಳಪತಿ. ಶ್ರೀ ನಿವಾಸ್ . ಪರನಗೌಡ ಜಂತಗಲ್. ಯಂಕಣ ಜಂತ್ಗಲ್. ಹಾಗೂ ಕೊಪ್ಪಳ ಜಿಲ್ಲಾ ಅದಕ್ಷರಾದ ರಾಮಣ್ಣ ಜಾಡಿ. ಗೋಸ್ಲೆಪ್ಪ ಗದ್ದಿ.ಸಂಗೂ ಗದ್ದಿ.ಇನ್ನೂ ಊರಿನ ಪ್ರಮುಖರು ಉಪಸಿತರಿದ್ದರು.