ದೇವನಹಳ್ಳಿ: ಧರ್ಮವನ್ನು ಜಾಗೃತ ಮಾಡಲು ಹೊರಟರೆ ನಾವು ಕೋಮುವಾದಿಗಳು ಎನ್ನುತ್ತಾರೆ ಗೋಹತ್ಯೆ ಮಾಡಬೇಡಿ ಎಂದರೆ ಬೇಕಾಗಿಯೇ ಮಾಡುತ್ತಾರೆ. ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ಪವನಸುತ ವೀರಾಂಜನೇಯ ದೇವಾಲಯಕ್ಕೆ ಅಮೇದ್ಯವನ್ನು ಎರಚಿರುವುದು ಸಣ್ಣ ಘಟನೆಯಲ್ಲ ಎಂದು
ಹಿಂದೂ ವೇದಿಕೆಯ ಪ್ರಾಂತ ಕಾರ್ಯದರ್ಶಿ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಹಲವು ಹಿಂದೂ ಪರ ಸಂಘಟನೆಗಳು ಒಗ್ಗೂಡಿ ಧರ್ಮವಿರೋಧಿ ಚಟುವಟಿಕೆಗಳಿಕೆ ಕಡಿವಾಣ ಹಾಕುವಂತೆ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿ, ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ಪವನಸುತ ವೀರಾಂಜನೇಯ ದೇವಾಲಯಕ್ಕೆ ಅಮೇದ್ಯವನ್ನು ಎರಚಲು ಹೇಗೆ ಧೈರ್ಯ ಬಂತು , ಮಸೀದಿಯ ಮೇಲೆ ಅಥವಾ ಚರ್ಚ್ ಗಳ ಮೇಲೆ ಈ ದುಷ್ಕೃತ್ಯವೆಸಗಿದ್ದಿದ್ದರೆ ಪೊಲೀಸ್ ಅಧಿಕಾರಿಗಳು ನಿದ್ದೆ ಮಾಡುವುದಕ್ಕೂ ಬಿಡುತ್ತಿರಲಿಲ್ಲಾ ಎಫ್,ಐ,ಆರ್ ಹಾಕುವುದರಲ್ಲೂ ತಾರತಮ್ಯ ಎಸಗಿರುವ ಪೊಲೀಸ್ ರ ಕರ್ತವ್ಯ ಲೋಪವಾಗಿದೆ.ಇದನ್ನು ಪೊಲೀಸ್ ಇಲಾಖೆ ಮರೆಮಾಚುತ್ತಿದೆ. ಒಂದು ವಾರದಲ್ಲಿ 153A ಸೆಕ್ಷನ್ ಹಾಕಿ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಬದುಕಲು ಹಿಂದೂ ಸಮಾಜ ಬಿಡುವುದಿಲ್ಲಾ ಎಂದು ಎಚ್ಚರಿಸಿದರು.ಹಿಂದೂ ಧರ್ಮ ಎದ್ದರೆ ಹಿಂದೂ ಸೇತು ಹೋರಾಟ ನೆನಪಿಸಿಕೊಳ್ಳಿ ಪೊಲೀಸ್ ಅಧಿಕಾರಿಗಳೇ ಎಂದು ಕಿಡಿಕಾರಿದರು.
ದೇಶ ಮೊದಲು ಎನ್ನುವ ಭಾವನೆ ಇರುವುದು ಹಿಂದೂಗಳಿಗೆ ವಿನಃ ಅನ್ಯ ಧರ್ಮಿಯರಿಗಿಲ್ಲ. ಧರ್ಮ ಸಂಸ್ಕೃತಿಯ ಮೇಲೆ ನಡೆಯುವ ದೌರ್ಜನ್ಯ ನೋಡಿಕೊಂಡು ಸುಮ್ಮನಿರುವುದು ಉಸಿರು ನಿಂತಂತೆ. ಅದಕ್ಕೆ ನಮ್ಮ ಹಿಂದೂ ಧರ್ಮದ ಮೇಲೆ ದೇಶದ ಮೇಲೆ ದೌರ್ಜನ್ಯ ನಡೆಯುವುದನ್ನು ತಡೆಯಲು ಮುಂದಾಗಬೇಕು. ಗೋಹತ್ಯೆ ಮಾಡಲು ಬಿಟ್ಟರೆ ಅದು ಹಿಂದೂಗಳ ಸಾವು, ಮತಾಂತರವಾಗಲು ನಮ್ಮ ನಮ್ಮ ಭಾಗದಲ್ಲಿ ಬಿಡುವುದಿಲ್ಲಾ ಎಂದು ಹಿಂದೂಗಳು ಶಪಥ ಮಾಡಬೇಕು. ಜಿಹಾದ್ ಬಗ್ಗೆ ಎಚ್ಚರ ವಹಿಸಬೇಕು. ಜೈ ಶ್ರೀ ರಾಮ್ ಎಂದು ಭಾರತ ದೇಶದಲ್ಲಿ ಹಿಂದೂಗಳು ಕೂಗಿದರೆ ತಪ್ಪೇನು?
ಪೊಲೀಸರ ಷಡ್ಯಂತ್ರದ ವಿರುದ್ಧವೇ ಈ ಹೋರಾಟ:
ನಾಲ್ಕೈದು ತಿಂಗಳ ಹಿಂದೆ ದೇವನಹಳ್ಳಿ ಯಲ್ಲಿ ಇದೇ ರೀತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಮೇಧ್ಯವನ್ನು ಹಾಕಿದ್ದು, ಈ ಪ್ರಕರಣವನ್ನು ಭೇದಿಸಿದ್ದರೆ ಇಂದು ವಿಜಯಪುರ ದಲ್ಲಿ ಇಂತಹುದೇ ಘಟನೆ ಮರುಕಳಿಸುತ್ತಿರಲಿಲ್ಲ. ಇದು ಪೊಲೀಸರ ನಿರ್ಲಕ್ಷ್ಯವಲ್ಲದೆ ಮತ್ತೇನೂ ಇಲ್ಲ. ಪೊಲೀಸರ ಷಡ್ಯಂತ್ರದ ವಿರುದ್ಧವೇ ಈ ಹೋರಾಟ. ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸದಿದ್ದರೆ ಪೊಲೀಸರು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂಬ ನೇರ ಎಚ್ಚರಿಕೆ ನೀಡುತ್ತೇನೆ.
ಗೋಹತ್ಯೆ ನಿಲ್ಲಬೇಕು. ಮತಾಂತರ ನಿಲ್ಲಬೇಕು. ಹಂಸಲೇಖ ಅವರ ಹೇಳಿಕೆಗೂ ನಮ್ಮ ಖಂಡನೆ ಇದೆ. ಹಿಂದುಗಳಾಗಿ ನಮ್ಮ ಧರ್ಮ ಸಂಸ್ಕೃತಿಗಳ ಬಗ್ಗೆ ಜಾಗೃತಿ ಇರಬೇಕು ಎಂದು ತಿಳಿಸಿದರು.
ಕಳೆದ ನ. 16 ರಂದು ನಾಗರ ಬಾವಿ ರಸ್ತೆಯ ಆಂಜನೇಯ ದೇವಾಲಯದ ಗರ್ಭಗುಡಿಯಲ್ಲಿ ಯಾರೋ ಕಿಡಿಗೇಡಿಗಳು ರಾತ್ರೋ ರಾತ್ರಿ ಅಮೇಧ್ಯವನ್ನು ಹಾಕಿ ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಲು ಆಗ್ರಹಿಸಲಾಗಿತ್ತು. ಆದರೆ ಘಟನೆಗೆ ಸಂಬಂಧ ಪಟ್ಟ ಕಿಡಿಗೇಡಿಗಳನ್ನು ಕಂಡುಹಿಡಿಯದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಒಂದೆಡೆ ಸೇರಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಧರ್ಮ ವಿರೋಧಿಗಳ ವಿರುದ್ಧ ಧಿಕ್ಕಾರ ಕೂಗಿದರು. ಶಿವಗಣೇಶ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಕಿಡಿಗೇಡಿಗಳ ವಿರುದ್ಧ ಕೆಲಕಾಲ ಪ್ರತಿಭಟಿಸಿದರುಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯದರ್ಶಿ ಮುನೀಂದ್ರ, ಹಿಂದೂ ಧರ್ಮ ಪ್ರಚಾರಕ ಸಿದ್ದಲಿಂಗಯ್ಯ ಹಾಗೂ ಸಾವಿರಾರು ಸಂಖ್ಯೆ ಯಲ್ಲಿ ಹಿಂದೂಗಳು ಶ್ರೀ ರಾಮ ಮತ್ತು ಆಂಜನೇಯನ ಜಂಡಾ ಹಿಡಿದು ಉರಿ ಬಿಸಿಲೆನ್ನದೇ ಭಾಗವಹಿಸಿದ್ದರು.