ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳ ಘೋಷಣೆ

ಕಾಂತಾರ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಸಿಕ್ತು ಅತ್ಯುತ್ತಮ ನಟ ಪ್ರಶಸ್ತಿ

ಬೆಂಗಳೂರು : 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ಅತ್ಯುತ್ತಮ ಚಿತ್ರ ಪ್ರಶಸ್ತಿ ಆಯೆನಾಗೆ ದೊರೆತಿದೆ.ಮುರ್ಮುರಸ್ ಆಫ್ ದಿ ಜಂಗಲ್ ಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಲಭಿಸಿದೆ.

 

       ಕನ್ನಡದ ಕಾಂತಾರ ಚಿತ್ರದಲ್ಲಿ ನಟಿಸಿದ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಹಾಗೂ ತಮಿಳಿನ ತಿರುಚಿ ತ್ರಂಬಲಂ ಚಿತ್ರದಲ್ಲಿನ ನಟನೆಗಾಗಿ ನಿತ್ಯಾಮೆನನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಚೊಚ್ಚಲ ನಿರ್ದೇಶಕ ವಲಯದಲ್ಲಿ ಕನ್ನಡದ ಮಧ್ಯಂತರ ಚಿತ್ರದನಿರ್ದೇಶನಕ್ಕಾಗಿ ಬಸ್ತಿ ಶೆಣೈ ಅವರಿಗೆ ಪ್ರಶಸ್ತಿ ಲಭಿಸಿದೆ.ಜನಪ್ರಿಯ ಚಲನಚಿತ್ರ ವಲಯದಲ್ಲಿ ಕಾಂತಾರ ಚಿತ್ರಕ್ಕೆ ಪ್ರಶಸ್ತಿ ದೊರೆತಿದ್ದರೆ, ಕೆಜಿಎಫ್-೨ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಅತ್ಯುತ್ತ ಸಾಹಸ ನಿರ್ದೇಶನ ವಲಯದಲ್ಲಿ ಪ್ರಶಸ್ತಿ ಸಂದಿದೆ.

ಕನ್ನಡದ ಶ್ರೇಷ್ಟ ನಟ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.ಮಂಧ್ಯಂತರ ಚಿತ್ರದ ಸಂಕಲನಕ್ಕಾಗಿ ಸುರೇಶ್ ಅರಸ್ ಅವರಿಗೂ ಪ್ರಶಸ್ತಿ ದೊರೆತಿರುವುದು ಉತ್ತಮ ಬೆಳವಣಿಗೆ ಈ ಸಾಧನೆ ಇತರೆ ಕಲಾವಿದರಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದ್ದಾರೆ.

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರ್‌ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮತ್ತಿತರ ಗಣ್ಯರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ. 

Facebook
Twitter
LinkedIn
Telegram
WhatsApp
Email
Print
Skype

Leave a Comment

Your email address will not be published. Required fields are marked *

Translate »
Scroll to Top