ಅಖಿಲ್ ಅಕ್ಕಿನೇನಿ – ಜೈನಾಬ್ ರಾವ್ಜಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ರಿಸೆಪ್ಷನ್‌ಗೆ ಕನ್ನಡ, ತೆಲುಗು ಹಾಗೂ ತಮಿಳಿನ ಸೂಪರ್ ಸ್ಟಾರ್‌ಗಳು ಹಾಜರಿದ್ದರು. ಅಖಿಲ್ ಅಕ್ಕಿನೇನಿ ಆರತಕ್ಷತೆಯಲ್ಲಿ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ದಕ್ಷಿಣ ಭಾರತದ ಸ್ಟಾರ್‌ಗಳ ಸಮಾಗಮಕ್ಕೆ ಸಾಕ್ಷಿಯಾದ ಅಖಿಲ್ ಅಕ್ಕಿನೇನಿ ಆರತಕ್ಷತೆ ಫೋಟೋಗಳು ಇಲ್ಲಿವೆ ನೋಡಿ…
ಅಖಿಲ್ ಅಕ್ಕಿನೇನಿ – ಜೈನಾಬ್ ರಾವ್ಜಿ ರಿಸೆಪ್ಷನ್‌ನಲ್ಲಿ ತಾರೆಯರ ದಂಡು
ಅಕ್ಕಿನೇನಿ ನಾಗಾರ್ಜುನ – ಅಮಲಾ ಪುತ್ರ ಅಖಿಲ್ ಅಕ್ಕಿನೇನಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ತಾವು ಪ್ರೀತಿಸಿದ ಹುಡುಗಿ ಜೈನಾಬ್ ರಾವ್ಜಿ ಅವರನ್ನ ಅಖಿಲ್ ಅಕ್ಕಿನೇನಿ ವರಿಸಿದ್ದಾರೆ. ಜೂನ್ 6 ರಂದು ಮುಂಜಾನೆ ನಾಗಾರ್ಜುನ ಮನೆಯಲ್ಲೇ ಅಖಿಲ್ ಅಕ್ಕಿನೇನಿ – ಜೈನಾಬ್ ಕಲ್ಯಾಣ ಮಹೋತ್ಸವ ಜರುಗಿತು. ಆನಂತರ ಅದ್ಧೂರಿ ಆರತಕ್ಷತೆ ಜರುಗಿದೆ.
ಅಖಿಲ್ ಅಕ್ಕಿನೇನಿ – ಜೈನಾಬ್ ರಾವ್ಜಿ ರಿಸೆಪ್ಷನ್ ದಕ್ಷಿಣ ಭಾರತದ ಸ್ಟಾರ್ ಕಲಾವಿದರ ಸಮಾಗಮಕ್ಕೆ ಸಾಕ್ಷಿಯಾಗಿತ್ತು. ಕನ್ನಡ ನಟ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ತೆಲುಗು ನಟ ರಾಮ್ ಚರಣ್, ನಟ ನಾನಿ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ತಮಿಳು ನಟ ಸೂರ್ಯ ಮುಂತಾದ ಜನಪ್ರಿಯ ತಾರೆಯರು ರಿಸೆಪ್ಷನ್‌ಗೆ ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದರು. ಫೋಟೋ ಆಲ್ಬಂ ಇಲ್ಲಿದೆ ನೋಡಿ..
ರಾಕಿಂಗ್ ಸ್ಟಾರ್ ಯಶ್
ಹೊಸ ಜೀವನ ಆರಂಭಿಸಿದ ಅಖಿಲ್ ಅಕ್ಕಿನೇನಿ – ಜೈನಾಬ್‌ಗೆ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದರು.
ಕಿಚ್ಚ ಸುದೀಪ್
ಅಖಿಲ್ ಅಕ್ಕಿನೇನಿ – ಜೈನಾಬ್ ದಂಪತಿಗೆ ಕಿಚ್ಚ ಸುದೀಪ್ – ಪ್ರಿಯಾ ದಂಪತಿ ಬೆಸ್ಟ್ ವಿಶಸ್ ತಿಳಿಸಿದರು.