ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಇಂಡಿಯನ್ ಏರ್ಟೆಲ್ ಬಳಿಕ ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾದ ವೊಡಾಫೋನ್ ಐಡಿಯಾ ಕೂಡ ರೀಚಾರ್ಜ್ ಶುಲ್ಕ ಹೆಚ್ಚಿಸಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಶುಲ್ಕವನ್ನಯ ಶೇಕಡಾ 10 ರಿಂದ 21ಕ್ಕೆ ಹೆಚ್ಚಿಸಲು ಮುಂದಾಗಿದೆ. ಜುಲೈ 4, 2024 ರಿಂದ ಹೊಸ ದರ ಅನ್ವಯವಾಗಲಿದೆ.
ಗ್ರಾಹಕರು 179 ರೂ.ಗಳ ಯೋಜನೆಗೆ ಜುಲೈ 4ರ ಬಳಿಕ 199 ರೂ.ಗಳನ್ನು ಪಾವತಿಸಬೇಕಾಗುತ್ತದೆ. 459 ರೂ.ಗಳ ಯೋಜನೆಯ ಬೆಲೆ 509 ರೂ., 1799 ರೂ.ಗಳ ಯೋಜನೆಗೆ 1999 ರೂ.ಪಾವತಿಸಬೇಕಾಗಿದೆ.
ಪೋಸ್ಟ್ಪೇಯ್ಡ್ ಯೋಜನೆಗಳು: 401 ರೂ., 501 ರೂ.ಗಳ ಯೋಜನೆಗಳಿಗೆ 551 ರೂ., 601 ರೂ.ಗಳ ಕುಟುಂಬ ಯೋಜನೆಗೆ 701 ರೂ., 1001 ರೂ.ಗಳ ಕುಟುಂಬ ಯೋಜನೆಗೆ 1201 ರೂಪಾಯಿ ಆಗಲಿದೆ
Facebook
Twitter
LinkedIn
Telegram
Email
Print
WhatsApp