ಹೀರಾಪೂರ- ನಿಜ ಶರಣ ಅಂಬಿಗರ ಚೌಡಯ್ಯ ಶಿಲಾಮಂಟಪಕ್ಕೆ ಭೇಟಿ- ಮಾಲಾರ್ಪಣೆ
ಶರಣ ಚೌಡಯ್ಯನವರ ವಚನ ಸಮಾನತೆಯ ಸಂದೇಶ
ರಾಯಚೂರು: ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಸಿದ್ದಾಂತ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. 12 ನೇ ಶತಮಾನದಲ್ಲಿ ಬಸವಾದಿ ಶರಣರೊಂದೊಗೆ ಸಮಾನತೆಯ ಸಂದೇಶ ಸಾರಿದ ಮಹಾನ್ ನಾಯಕರಲ್ಲಿ ಇವರು ಒಬ್ಬರು. ಹೀರಾಪೂರ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಅವರ ಪುತ್ಥಳಿ ಸ್ಥಾಪಿಸಿರುವುದು ಶ್ಲಾಘನೀಯ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಅಭಿಪ್ರಾಯ ತಿಳಿಸಿದರು.
ರಾಯಚೂರು ತಾಲೂಕಿನ ಹೀರಾಪುರ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಪಂಚಲೋಹದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಂಟಪಕ್ಕೆ ಭೇಟಿ ನೀಡಿ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಕರಲ್ಲಿ ಒಬ್ಬರಾಗಿದ್ದರು ಅವರು ನೇರ, ನಿಷ್ಠೂರ, ತರ್ಕ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರೇಷ್ಠರಾಗಿದ್ದರು ಎಂದರು.
ಈ ಸಂರ್ಭದಲ್ಲಿ ಗಂಗಾಮತಸ್ಥ ಸಮಾಜದ ಜಿಲ್ಲಾದ್ಯಕ್ಷರಾದ ಕೆ ಶಾಂತಪ್ಪ ಅವರು ಮಾತನಾಡಿದರು. ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದ ಸಚಿವರನ್ನು ಹೀರಾಪೂರ ಗ್ರಾಮದ ಗ್ರಾಮಸ್ಥರು ಅಭೂತ ಪೂರ್ವವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗಂಗಾಮತಸ್ಥ ಸಮಾಜದ ಜಿಲ್ಲಾದ್ಯಕ್ಷರಾದ ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಹನುಮಂತಪ್ಪ, ವಿಶ್ವನಾಥ ಚಿಂಚಿರಕಿ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಇದ್ದರು.