ಹೊಸ ಜವಾಬ್ದಾರಿ ಹೊತ್ತುಕೊಂಡ ನಟಿ ರಮ್ಯಾ ಕೃಷ್ಣ

ಪ್ರಸ್ತುತ ತುಂಬ ಸದ್ದು ಮಾಡುತ್ತಿರುವ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬ ಕುತೂಹಲಕ್ಕಿಂತಲು ಆ ಕಾರ್ಯಕ್ರಮದ ನಿರೂಪಕರು ಯಾರು ಎಂಬುದೇ ಪ್ರೇಕ್ಷಕರಿಗೆ ಹೆಚ್ಚು ಮುಖ್ಯವಾಗುತ್ತದೆ. ತಮಿಳು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರ ಸ್ಥಾನಕ್ಕೆ ನಟಿ ರಮ್ಯಾ ಕೃಷ್ಣ ಆಗಮಿಸಿದ್ದಾರೆ.ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದ ಬಗ್ಗೆ ತುಂಬಾನೆ ಕ್ರೇಜ್ ಇದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಕಾರ್ಯಕ್ರಮ ಫೇಮಸ್ ಆಗಿದ್ದು. ಅದೆಷ್ಟೋ ಬಾರಿ ಬಿಗ್ ಬಾಸ್‌ಸ್ಪರ್ಧಿಗಳು ಯಾರು ಎಂಬುದಕ್ಕಿಂತಲೂ ಕಾರ್ಯಕ್ರಮದ ನಿರೂಪಕರು ಯಾರು ಎಂಬುದೇ ಹೆಚ್ಚು ಮುಖ್ಯವಾಗುತ್ತದೆ.
ಕನ್ನಡದ ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ , ಹಿಂದಿ ಶೋನಲ್ಲಿ ಸಲ್ಮಾನ್‌ಖಾನ್ ಅವರು ಈ ಕಾರ್ಯಕ್ರಮದ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ತೆಲುಗು ಹಾಗು ತಮಿಳಿನಲ್ಲಿ ನಿರೂಪಕರ ಬದಲಾವಣೆಗಳು ಆಗುತ್ತಿವೆ. ತಮಿಳು ಬಿಗ್‌ಬಾಸ್ ಶೋ ಕಾರ್ರ್‍ಅಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಅವರ ಸ್ಥಾನಕ್ಕೆ ಈಗ ನಟಿ ರಮ್ಯಾ ಕೃಷ್ಣ ಬರುತ್ತಾರೆ ಎಂಬ ಮಾತು ಎಲಾ ಕಡೆ ಹರಿದಾಡುತ್ತಿದೆ.

ಕಮಲ್? ಹಾಸನ್? ಅವರಿಗೆ ಕೊವಿಡ್? ಸೋಂಕು ತಗುಲಿರುವುದು ಕೆಲವೇ ದಿನಗಳ ಹಿಂದೆ ಖಚಿತಗೊಂಡಿತು. ಸದ್ಯ ಅವರು ಬಿಗ್? ಬಾಸ್? ಕಾರ್ಯಕ್ರಮದ ನಿರೂಪಣೆಗೆ ಬ್ರೇಕ್? ನೀಡಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಿರೂಪಣೆಯ ಜಬಾವ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿತು. ಕಮಲ್? ಹಾಸನ್? ಪುತ್ರಿ ಶ್ರುತಿ ಹಾಸನ್? ಅವರಿಗೆ ಈ ಕೆಲಸ ವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹರಡಿತ್ತು. ಆದರೆ ಅದು ನಿಜವಾಗಿಲ್ಲ. ಸದ್ಯ ಬಹುಭಾಷಾ ಕಲಾವಿದೆ ರಮ್ಯಾ ಕೃಷ್ಣ ಹೆಸರು ಕೇಳಿಬರುತ್ತಿದೆ.

Leave a Comment

Your email address will not be published. Required fields are marked *

Translate »
Scroll to Top