ರಾಜಮೌಳಿನಿರ್ದೇಶನದ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ : ಎಸ್‌ಎಸ್‌ಎಂಬಿ29 !
ಎಸ್‌ಎಸ್ ರಾಜಮೌಳಿ ಹಾಗೂ ಮಹೇಶ್‌ಬಾಬು ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ29 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವು ಭರ್ಜರಿಯಾಗಿ ಸಾಗಿವೆ. ಸಿನಿಮಾಗೆ ಪಾತ್ರಗಳ ಆಯ್ಕೆ ಕೂಡಾ ಅಷ್ಟೇ ಬಿರುಸಿನಿಂದ ಸಾಗಿದೆ. ಮಹೇಶ್ ಬಾಬು ಅವರ ತಂದೆ ಪಾತ್ರಕ್ಕಾಗಿ ಚಿತ್ರತಂಡ ತಮಿಳು ನಟ ಚಿಯಾನ್ ವಿಕ್ರಂ ಅವರನ್ನ ಆಯ್ಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ನಟಿಸುವಂತೆ ಚಿಯಾನ್ ವಿಕ್ರಂ ಅವರನ್ನು ಕೇಳಿದಾಗ ಅವರು ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ.
ತಮಿಳು ನಟ ಚಿಯಾನ್ ವಿಕ್ರಂ ಯಾಕೆ ನಟಿಸುವುದಿಲ್ಲ ಅನ್ನೋದಕ್ಕೆ ಕಾರಣ ಕೂಡಾ ಇದೆ. ಹೌದು, ವೀರ ಧೀರ ಸೂರನ್ ಸಿನಿಮಾದ ನಟ ವಿಕ್ರಂ ಎರಡು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಾಜಮೌಳಿ ಸಿನಿಮಾದಲ್ಲಿ ನಟಿಸಲು ಡೇಟ್ ಕ್ಲ್ಯಾಶ್ ಆಗುವ ಕಾರಣದಿಂದ ಮಹೇಶ್ ಬಾಬು ತಂದೆ ಪಾತ್ರದಲ್ಲಿ ನಟಿಸೋಕೆ ಸಾಧ್ಯವಾಗುವುದಿಲ್ಲ ಎಂದು ನಟ ವಿಕ್ರಂ ಹೇಳಿದ್ದಾರಂತೆ. ಹೀಗಾಗಿ ಚಿತ್ರತಂಡ ಮಾಧವನ್ ಅವರನ್ನ ಸೂಪರ್ ಸ್ಟಾರ್ ತಂದೆ ಪಾತ್ರದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದೆ ಎನ್ನಲಾಗ್ತಿದೆ.
ಇನ್ನು ಎಸ್‌ಎಸ್‌ಎಂಬಿ29 ಹೆಸರಿನ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಆರ್‌ಆರ್‌ಆರ್ ಸಿನಿಮಾ ಬಳಿಕ ನಿರ್ದೇಶಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದೆ. ಹೀಗಾಗಿ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ.ಜೊತೆಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಮೊದಲ ಬಾರಿಗೆ ಒಂದಾಗ್ತಿದೆ. ಇನ್ನು ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಈ ಭಾಗದ ಕೆಲ ಸಾಹಸ ದೃಶ್ಯಗಳನ್ನ ಕೀನ್ಯಾದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ.
ಅಂದಹಾಗೆ ಚಿಯಾನ್ ವಿಕ್ರಂ ರಿಜೆಕ್ಟ್ ಮಾಡಿದ ನಂತರ ಆರ್.ಮಾಧವನ್ ಅವರನ್ನ ಈ ಪಾತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಇನ್ನು ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ನಿರ್ದೇಶಕರಾಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಮಾಧವನ್ ಇಂತಹ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ ಎನ್ನುವ ನಿರ್ಧಾರ ನಿರ್ದೇಶಕರದ್ದಾಗಿದೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ಹೇಳಬೇಕಿದೆ.