ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಿನ್ನಾರಿಮುತ್ತ ಎಂಥಲೇ ಕರೆಯಲ್ಪಡುವ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ.

ಥೈಲ್ಯಾಂಡ್‌ನಲ್ಲಿ ಭಾನುವಾರ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಹೃದಯಾಘಾತಕ್ಕೆ ಒಳಗಾದ ಸ್ಪಂದನಾ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಕುಟುಂಬದ ಹಾಗೂ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ತೆರಳಿದ್ದ, ಸ್ಪಂದನಾ ವಿಜಯ ರಾಘವೇಂದ್ರ ಅವರು, ಲೋ ಬಿಪಿಯಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

 

            ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ ಅವರು ೨೦೦೭, ಆಗಸ್ಟ್ ೨೬ ರಂದು ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19ದಿನಗಳು ಬಾಕಿ ಇದ್ದು, ಈ ಘಟನೆ ನಡೆದಿರುವುದು ವಿಷಾದನೀಯವಾಗಿದೆ.

2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ವಿಜಯರಾಘವೇಂದ್ರ ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಂ ಇತ್ತೀಚೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಸ್ಪಂದನಾ ಸಹೋದರನ ಪರ ಪ್ರಚಾರ ಕೂಡ ನಡೆಸಿದ್ದರು.

ನಾಳೆ ಸ್ಪಂದನಾ ವಿಜಯರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ವಿಜಯರಾಘವೇಂದ್ರ ಅವರ ಕುಟುಂಬದ ಮೂಲಗಳು ತಿಳಿಸಿವೆ.

            ಇನ್ನೂ ಸ್ಪಂದನಾ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಅಂತೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಸ್ನೇಹಿತರು ಬಂಧು ಬಳಗದವರು ವಿಷಾದ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top