ನಟ ಪ್ರಭಾಸ್ ಕೆನ್ನೆಗೆ ಜೋರಾಗಿ ಹೊಡೆದು ಓಡಿದ ಯವತಿ..!
Actor Prabhas : ಅಭಿಮಾನಿಗಳು ಡಾರ್ಲಿಂಗ್ ಅಂತ ಪ್ರೀತಿಯಿಂದ ನಟ ಪ್ರಭಾಸ್ ಅನ್ನು ಕರೆಯುತ್ತಾರೆ. ಫ್ಯಾನ್ಸ್ ಮಾತ್ರವಲ್ಲ.. ಸಿನಿಮಾ ಸೆಲೆಬ್ರಿಟಿಗಳು ಕೂಡ ಪ್ರಭಾಸ್ ವ್ಯಕ್ತಿತ್ವದ ಬಗ್ಗೆ ಸದಾ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಪ್ಯಾನ್ ಇಂಡಿಯಾ ಸ್ಟಾರ್ ಹೀರೋ ಆಗಿದ್ದರೂ, ಅವರ ನಡವಳಿಕೆ ಸಾಮಾನ್ಯ ವ್ಯಕ್ತಿಯಂತೆಯೇ ಇರುತ್ತದೆ.
ಸ್ಟಾರ್‌ಗಿರಿ, ಕರಗಲಾರದಷ್ಟು ಆಸ್ತಿ ಇದ್ದರೂ ಸಹ ಒಂದು ದಿನವೂ ಪ್ರಭಾಸ್ ಕೆಟ್ಟದಾಗಿ ನಡೆದುಕೊಂಡವರಲ್ಲ. ಈ ನಿಟ್ಟಿನಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ.. ಇನ್‌ಸ್ಟಾಗ್ರಾಮ್‌ನಲ್ಲಿ ಚಾಲ್ ಮಿಂಗೇ ಬೇ (@chal_mingey_bey_official) ಎಂಬ ಪೇಜ್ ಹಂಚಿಕೊಂಡ ವಿಡಿಯೋ ಒಂದು ಸಂಚಲನ ಮೂಡಿಸುತ್ತಿದೆ.
ವಿಡಿಯೋದಲ್ಲಿ ಪ್ರಭಾಸ್ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರುವಾಗ ಯುವತಿಯೋರ್ವಳು ಫೋಟೋ ಕೇಳುತ್ತಾಳೆ. ಪ್ರಭಾಸ್ ತಕ್ಷಣ ಆ ಹುಡುಗಿಯನ್ನು ಹತ್ತಿರಕ್ಕೆ ಕರೆದು ಫೋಟೋಗೆ ಪೋಸ್ ನೀಡುತ್ತಾನೆ. ಆದರೆ, ಪ್ರಭಾಸ್ ನನ್ನು ಬಹಳ ಹತ್ತಿರದಿಂದ ನೋಡಿ ತುಂಬಾ ಉತ್ಸುಕಳಾದ ಹುಡುಗಿ, ನಟನ ಕೆನ್ನೆಯನ್ನು ಮುಟ್ಟಿ ನಾಚಿಕೆಯಿಂದ ಅಲ್ಲಿಂದ ಓಡಿ ಹೋಗುತ್ತಾಳೆ.
ಅದಾದ ನಂತರವೂ ಪ್ರಭಾಸ್ ನಗುತ್ತಾ ಇತರರ ಫೋಟೋಗೆ ಪೋಸ್ ನೀಡುತ್ತಾರೆ.. ಅಭಿಮಾನಿಗಳು ಏನೇ ಮಾಡಿದರೂ ಸಹ ಪ್ರಭಾಸ್ ಎಂದಿಗೂ ಅವರ ಮೇಲೆ ಕೋಪಗೊಂಡಿಲ್ಲ.. ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಎಲ್ಲರಿಗೂ ಡಾರ್ಲಿಂಗ್ ಅಂದ್ರೆ ತುಂಬಾ ಇಷ್ಟ.