ಅರ್ಜುನ ಆನೆ ಸ್ಮಾರಕ ‍ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತ ನಟ ದರ್ಶನ ತೂಗದೀಪ : ಸ್ಲ್ಯಾಬ್ ಕಲ್ಲುಗಳ ರವಾನೆ

ಹಾಸನ: ಹಾಸನದಲ್ಲಿ ಕಾಡಾನೆ ಕರ‍್ಯಾಚರಣೆ ವೇಳೆ ಮೃತಪಟ್ಟ ದಸರಾ ಆನೆ ರ‍್ಜುನನ ಸ್ಮಾರಕ‌ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವಂತೆಯೇ ನಟ ದರ್ಶನ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಹೌದು.. ಕಾಡಾನೆ ಕರ‍್ಯಾಚರಣೆ ವೇಳೆ ಮೃತಪಟ್ಟ ದಸರಾ ಆನೆ ಅರ್ಜುನ ಸ್ಮಾರಕ‌ ನಿರ್ಮಾಣಕ್ಕೆ ದರ್ಶನ್ ನೆರವು ನೀಡಿದ್ದು, ಸ್ಮಾರಕ ನಿರ್ಮಾಣಕ್ಕೆ ಬೇಕಾದಷ್ಟು ಸ್ಲ್ಯಾಬ್ ಕಲ್ಲುಗಳನ್ನು ಅವರು ಕಳುಹಿಸಿದ್ದಾರೆ. ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿದ್ದು, ಈಗಾಗಲೇ ಸ್ಮಾರಕ ನಿರ್ಮಾಣ ಕರ‍್ಯ ಆರಂಭವಾಗಿದೆ ಎಂದು ಹೇಳಲಾಗಿದೆ.

ಕೊಟ್ಟ ಮಾತು ಉಳಿಸಿಕೊಂಡ ದಾಸ:

ಈ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರ‍್ಜುನ ಆನೆ ಸಮಾಧಿ ಕುರಿತು ಪೋಸ್ಟ್ ಮಾಡಿ ಸ್ಮಾರಕ ನಿರ್ಮಾಣ ಕ್ಕೆ ನೆರವು ನೀಡುವುದಾಗಿ ಡಿ ಬಾಸ್ ಮಾತು ಕೊಟ್ಟಿದ್ದರು. ಈ ಮಾತನ್ನು ಅವರು ಉಳಿಸಿಕೊಂಡಿದ್ದು, ಕಲ್ಲನ್ನು ಸಮಾಧಿ ಸ್ಥಳಕ್ಕೆ ಪ್ರಯಾಸದಿಂದ ಸಾಗಿಸಿರೋ ಬಗ್ಗೆ ವೀಡಿಯೋ ಮಾಡಿ ದರ್ಶನ್ ಆಪ್ತರು ಶೇರ್ ಮಾಡಿದ್ದಾರೆ.

ಪ್ರಾಣಿಪ್ರಿಯ ದರ್ಶನ್:

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯರಾಗಿದ್ದು, ತಮ್ಮ ಫರ‍್ಮ್ ಹೌಸ್ ನಲ್ಲಿ ಸಾಕಷ್ಟು ಬಗೆಯ ಪ್ರಾಣಿ-ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದಾರೆ. ಮಾತ್ರವಲ್ಲದೇ ಅವರು ಈಗಾಗಲೇ ಮೈಸೂರಿನ ಮೃಗಾಲಯದ ಸಾಕಷ್ಟು ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top