ಎಬಿವಿಪಿಯ ಉಚಿತ ಸಿಇಟಿ. ನೀಟ್ ತರಬೇತಿ ಶಿಬಿರದ ಪೋಸ್ಟರ್ ಬಿಡುಗಡೆ

ಕಾರಟಗಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿರುವ ಉಚಿತ ಸಿಇಟಿ. ನೀಟ್ ತರಬೇತಿ ಶಿಬಿರ ಶಿಬಿರದ ಪೋಸ್ಟರ್ ಅನ್ನು ಕಾರಟಗಿ ನಗರದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ತಿಮ್ಮಾರೆಡ್ಡಿಗೌಡ ಗಿಲ್ಲೇಸೂಗುರು ಅವರಿಂದ ಬಿಡುಗಡೆಗೊಳಿಸಲಾಯಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ವಿಭಾಗ ದಿಂದ ಆಯೋಜಿಸಿರುವ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮೆಡಿಕಲ್ ಕಾಲೇಜುಗಳಿಗೆ ಸೇರಬಯಿಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ. ನೀಟ್ ತರಬೇತಿ ಶಿಬಿರ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಿಇಟಿ ನೀಟ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಆದಕಾರಣ ಎಲ್ಲಾ ವಿದ್ಯಾರ್ಥಿಗಳು ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಈ ತರಗತಿಗಳ ಪ್ರವೇಶ ಎಪ್ರಿಲ್ 25ರಿಂದ ಪ್ರಾರಂಭವಾಗಿದ್ದು ಮೇ 17 ನೇ ತಾರೀಕು ಮುಕ್ತಾಯವಾಗುವುದು 18ರಿಂದ ಬೆಳಗ್ಗೆ 9:30 ರಿಂದ ಸಂಜೆ 4:30ರ ವರೆಗೆ ಅನುಭವಿ ಪ್ರಾಧ್ಯಾಪಕರಿಂದ ಬಳ್ಳಾರಿ ನಗರದ ಶ್ರೀ ಮೇಧ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ (ಕೋಟೆ) ತರಬೇತಿ ಶಿಬಿರ ಪ್ರಾರಂಭವಾಗುತ್ತದೆ ಪ್ರತಿ ವಿಷಯಕ್ಕೆ ಮುದ್ರಿತ ನೋಟ್ಸ್ ಹೊಸ ಪಠ್ಯಕ್ರಮ ಪ್ರಕಾರ ಬೋಧನೆ ನೀಡಲಾಗುತ್ತದೆ ಎಲ್ಲಾ ವಿಷಯಗಳ ನೋಟ್ಸ್ ಗಳಿಗೆ ರೂ 1000 ಗಳನ್ನು ವಿದ್ಯಾರ್ಥಿಗಳು ಪಾವತಿ ಮಾಡತಕ್ಕದ್ದು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ ಈ ಸಂದರ್ಭದಲ್ಲಿ ವಿಭಾಗ ಸಂಚಾಲಕರಾದ ಹರ್ಷ ನಾಯಕ್ ತಾಲೂಕು ಸಂಚಾಲಕರಾದ ಮಲ್ಲಿಕಾರ್ಜುನ್ ಬೂದುಗುಂಪ ನಗರ ಕಾರ್ಯದರ್ಶಿಯಾದ ಶ್ರೀ ಶಂಕರ್ ತಾಲೂಕು ಶರಣೆ ಗೌಡ ಮಾಲಿ ಪಾಟೀಲ್ ಎಬಿವಿಪಿ ಕಾರ್ಯಕರ್ತರಾದ ವೀರೇಶ್ ಸಿದ್ದಾಪುರ. ವಿನೋದ್ ಕುಮಾರ್ ರಾಮನಗರ ಇನ್ನಿತರು ಉಪಸ್ಥಿತರಿದ್ದರು ಹೆಚ್ಚಿನ ಮಾಹಿತಿಗಾಗಿ ಎಬಿವಿಪಿ ಬಳ್ಳಾರಿ ಕಾರ್ಯಾಲಯ ಅನಂತಪುರ ರೋಡ್ ಬಳ್ಳಾರಿ ದೂರವಾಣಿ ಸಂಖ್ಯೆ 9900169730. 9481260111. 7892230159.. ಸಂಪರ್ಕ ಮಾಡಬಹುದಾಗಿದೆ.

Leave a Comment

Your email address will not be published. Required fields are marked *

Translate »
Scroll to Top