ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 61 ಕೆಜಿ ಶ್ರೀಗಂಧ ತುಂಡುಗಳು ವಶ

ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ನಾಳ್ ರಾಜಣ್ಣ ಬಡಾವಣೆಯ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 61 ಕೆಜಿ ಶ್ರೀಗಂಧದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಕಳ್ಳತನ ಮಾಡಿಕೊಂಡು ಚನ್ನಗಿರಿ ಟೌನ್ ಕಡೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರಗೆ ಡಿವೈಎಸ್ ಪಿ ಸಂತೋಷ್, ಕೆ.ಎಂ ಮಾರ್ಗದರ್ಶನದಲ್ಲಿ ನಿರೀಕ್ಷಕ ಮಧು ಪಿ.ಬಿ, ಪೊಲೀಸ್ ನಿರೀಕ್ಷಕರು, ಚನ್ನಗಿರಿ ಠಾಣೆ ರವರು ತಮ್ಮ ಸಿಬ್ಬಂದಿಗಳ ತಂಡದೊAದಿಗೆ ದಾಳಿ ಮಾಡಿದ್ದು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶ್ರೀಗಂಧದ ತುಂಡುಗಳನ್ನು ಸ್ಥಳದಲ್ಲಿಯೇ ಬಿಟ್ಟು, ೦೩ ಆರೋಪಿತರು ಪರಾರಿಯಾಗಿರುತ್ತಾರೆ. ಸದರಿ ಸ್ಥಳದಲ್ಲಿ ಬಿಟ್ಟು ಹೋಗಿದ್ದ ಸುಮಾರು 61 ಕೆಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಕೈಗೊಂಡಿದ್ದು ಆರೋಪಿತರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಜ ಮಧು ಪಿ.ಬಿ, ಪೊಲೀಸ್ , ಪಿಎಸ್‌ಐ ಚಂದ್ರಶೇಖರ್.ಕೆ.ಎನ್, ರೂಪ್ಲಿಬಾಯಿ ಹಾಗೂ ಸಿಬ್ಬಂದಿಯವರಾದ ರುದ್ರೇಶ್, ರಾಜಶೇಖರ್ ರೆಡ್ಡಿ, ಚಂದ್ರಾಚಾರಿ, ರೇವಣಸಿದ್ದಪ್ಪ ಹಾಗೂ ಅರಣ್ಯ ಸಿಬ್ಬಂದಿಯವರಾದ ಜಗದೀಶ್ ಕಿರಣ್ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top