ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಜೂನ್ 5ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡರು.
ಪೂರ್ವ ನಿಗದಿಯಂತೆ ಬೆಳಗ್ಗೆ ಕಾರಟಗಿಯಿಂದ ಹೊರಟು ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಶ್ರೀ ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದರು.
ಗವಿಸಿದ್ದೇಶ್ವರ ಶ್ರೀಗಳು ಸಚಿವರಿಗೆ ಶಾಲುಹೊದಿಸಿ ಸನ್ಮಾನಿಸಿದರು. ಸಚಿವರಾದ ಶಿವರಾಜ ತಂಗಡಗಿ ಅವರು ಶ್ರೀಗಳಿಗೆ ವಂದಿಸಿ, ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಗವಿಶ್ರೀಗಳ ಆಶೀರ್ವಾದದ ದಿಕ್ಸೂಚಿ ಶಕ್ತಿಯನ್ನು ಪಡೆದುಕೊಂಡರು.
ಬಯಲುಸೀಮೆಯ ಕೊಪ್ಪಳ ಜಿಲ್ಲೆಯಲ್ಲಿ ಕೆರೆ ತುಂಬುವ ಯೋಜನೆಗಳು ಮತ್ತು ಈ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ಇನ್ನೀತರ ವಿ?ಯಗಳ ಬಗ್ಗೆ ಸಚಿವರು ಶ್ರೀಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಸೇರಿದಂತೆ ಇನ್ನೀತರರು ಇದ್ದರು.
ಡಾ.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ:
ಗವಿಸಿದ್ದೇಶ್ವರ ಶ್ರೀಗಳ ಮಠಕ್ಕೆ ಭೇಟಿ ನೀಡಿದ ಬಳಿಕ ಸಚಿವರು ನೇರವಾಗಿ ಸಾಲಾರ ಜಂಗ್ ರಸ್ತೆಯಲ್ಲಿನ ಡಾ.ಅಂಬೇಡ್ಕರ್ ಕಾಲೋನಿಗೆ ತೆರಳಿ ಅಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪು?ನಮನ ಸಲ್ಲಿಸಿದರು. ಈ ವೇಳೆ ಅಂಬೇಡ್ಕರ ಕಾಲೋನಿಯ ಅಭಿಮಾನಿಗಳು ಸಚಿವರಿಗೆ ಶಾಲುಹೊದಿಸಿ ಸನ್ಮಾನಿಸಿದರು.
ಸೌಹಾರ್ದ ಭೇಟಿ: ಕೊಪ್ಪಳ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ್ದ ಸಚಿವರಾದ ಶಿವರಾಜ ತಂಗಡಗಿ ಅವರು ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಜವಾಹರ ರಸ್ತೆಯಲ್ಲಿನ ಯುಸೂಪಿಯಾ ಮಜೀದ್‌ಗೆ ಸಹ ಸೌಹಾರ್ದ ಭೇಟಿ ನೀಡಿದರು. ಗುರುಗಳಾದ ಮುಫ್ತಿ ನಜೀರ್ ಅಹ್ಮದ್ ಅವರು ಸಚಿವರಿಗೆ ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿದರು.
ಮುಸಲ್ಮಾನ ಸಮಾಜದ ಮುಖಂಡರಾದ ಜಾಕೀರ್‌ಹುಸೇನ್, ಅಮಜದ್ ಪಟೇಲ್, ಖತೀಬ್ ಭಾಷಾಸಾಬ್, ಕೆ.ಎಂ ಸಯ್ಯದ್, ಛೋಪ್ರಾ ಸೇರಿದಂತೆ ಸಮಾಜದ ಪ್ರಮುಖರು ಇದ್ದರು. ಬಳಿಕ ಸಚಿವರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾದರು.